ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೀಗೊಂದು ಕ್ಷಣ


 56 ವರ್ಷ ಹಿಂದೆ ಹೀಗೊಂದು ಕ್ಷಣ


56 ವರ್ಷ ಹಿಂದೆ 01.12.1968ರಂದು ನಡೆದ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹೀಗಿತ್ತಂತೆ.

ಶತಮಾನ ಕಾಲ ಬಾಳಲಿ, ಅವರ ಸ್ಫೂರ್ತಿ ಅಖಂಡವಾಗಿ ಉಳಿಯಲಿ – ಹಾರೈಕೆ ಹೊಮ್ಮಿ ಹರಡಿತ್ತು. ಪ್ರಶಸ್ತಿಯನ್ನು ‘ಅವರ ಪಾದದ ಮೇಲೆ ಇಟ್ಟು ಧನ್ಯರಾದರು’ ಪ್ರೊ. ವಿ. ಕೃ. ಗೋಕಾಕ್.

ವೇದಿಕೆಯ ಮೇಲೆ ‘ದೇವರ ಹಾಗೆ’ ಕುಳಿತಿದ್ದವರು ಎದ್ದು ‘ನಿಮಗೆಲ್ಲ ನಮಸ್ಕಾರ’ ಎಂದರು.

ಕೂಟ ಮುಗಿಯುತ್ತ ಬಂದಂತೆಲ್ಲ ಗೌರವ ಹಾಗೂ ಕೃತಜ್ಞತೆಯ ಭಾರ ಹೆಚ್ಚಾಗುತ್ತಿತ್ತು. ಯಾವುದೋ ಸುಪ್ತ ಆವೇಶ, ನೆರೆದಿದ್ದ ಕಿರಿಯರೆಲ್ಲ ಕಾಲು ಮುಟ್ಟಿ ನಮಸ್ಕಾರ ಮಾಡಿದರು.

ಕನ್ನಡಕ್ಕೆ ‘ಶ್ರೀಮದ್ಭಗವದ್ಗೀತಾ ತಾತ್ಪ್ರರ್ಯ’ ನೀಡಿದ 81ನೆಯ ವಯಸ್ಸಿನ ಡಿ.ವಿ.ಜಿ. ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ರಾಷ್ಟ್ರಪ್ರಶಸ್ತಿ ಸಮರ್ಪಣೆಯಾಗಿತ್ತು.

ಕೃಪೆ: ಪ್ರಜಾವಾಣಿ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ