ಅನಿಲ್ ಕಪೂರ್
ಅನಿಲ್ ಕಪೂರ್
ಅನಿಲ್ ಕಫೂರ್ ಭಾರತೀಯ ಚಿತ್ರರಂಗದ ಯಶಸ್ವೀ ನಟರಲ್ಲಿ ಒಬ್ಬರು. ನಟ ಹಾಗೂ ನಿರ್ಮಾಪಕರಾದ ಅನಿಲ್ ಕಪೂರ್ ಹಿಂದಿ ಭಾಷೆಯಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಂತರರಾಷ್ಟೀಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಮೆಚ್ಚುಗೆ ಪಡೆದ ಇವರು ಕಿರುತೆರೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ
ಅನಿಲ್ ಕಪೂರ್ 1956ರ ಡಿಸೆಂಬರ್ 24ರಂದು ಮುಂಬೈನಲ್ಲಿ ಜನಿಸಿದರು. ತಂದೆ
ಸುರಿಂದರ್ ಕಪೂರ್ ಸಿನಿಮಾ ನಿರ್ಮಾಪಕರು. ಹೀಗಾಗಿ ಅನಿಲ್ ಕಪೂರ್ ಅವರಿಗೆ ಸಿನಿಮಾದ ಬಗ್ಗೆ ಅತಿಯಾದ ಆಸಕ್ತಿ ಇತ್ತು. ಅನಿಲ್ 1979ರಲ್ಲಿ ಉಮೇಶ್ ಮೆಹ್ರಾ ನಿರ್ದೇಶನದ 'ಹಮಾರೆ ತುಮ್ಹಾರೆ' ಚಿತ್ರದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ಅಭಿನಯಿಸಿದರು. ನಂತರ 1980ರಲ್ಲಿ ತೆಲುಗು ಚಿತ್ರನಿರ್ದೇಶಕ ಬಾಪು ನಿರ್ದೇಶನದ ವಂಶವೃಕ್ಷಂನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.
1983ರಲ್ಲಿ ಮಣಿರತ್ನಂ ನಿರ್ದೇಶನದ 'ಪಲ್ಲವಿ ಅನು ಪಲ್ಲವಿ' ಸಿನಿಮಾದ ಮೂಲಕ ಅನಿಲ್ ಕಪೂರ್ ಕನ್ನಡ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ಯಶಸ್ಸು ಅವರಿಗೆ ಬಾಲಿವುಡ್ ಕರೆಗಳಿಗೆ ಅನುವು ಮಾಡಿಕೊಟ್ಟಿತು.
ಅನಿಲ್ ಕಪೂರ್ 1984ರಲ್ಲಿ 'ಮಶಾಲ್' ಚಿತ್ರದಲ್ಲಿ ಅಭಿನಯಿಸಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ಮುಂದೆ ಅವರು ನೂರಾರು ಚಿತ್ರಗಳಲ್ಲಿ ನಟಿಸಿ ಬಹುಬೇಡಿಕೆಯ ನಟರಲ್ಲೊಬ್ಬರೆನಿಸಿದ್ದಾರೆ.
ಅನಿಲ್ ಕಪೂರ್ ಆಸ್ಕರ್ ವಿಜೇತ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದಲ್ಲೂ ನಟಿಸಿದ್ದಾರೆ. ತೇಜಾಬ್, ಬೇಟಾ, ಮೇರೀ ಜುಂಗ್, ಯುದ್ಧ್, ಕರ್ಮ, ಜಾನ್‍ಬಾಜ್, ಆಪ್ ಕೆ ಸಾಥ್, ಮಿಸ್ಟರ್ ಇಂಡಿಯಾ, ಗರ್ ಹೋ ತೋ ಐಸಾ, ಅವಾರ್ಗಿ,ಬೇನಾಮ್ ಬಾದಷಾ, ವಿರ್ಸಾತ್, ತಾಲ್, ಪುಕಾರ್, 1942 ಎ ಲವ್ ಸ್ಟೊರಿ, ದಿಲ್ ದಡಕನೆ ದೊ ಮುಂತಾದ ಅನೇಕ ಚಿತ್ರಗಳನ್ನು ಅವರ ಲವಲವಿಕೆಯ ಅಭಿನಯದ ನಿಟ್ಟಿನಲ್ಲಿ ಹೆಸರಿಸಬಹುದು.
'ಗಾಂಧೀ ಮೈ ಫಾದರ್' ಅನಿಲ್ ಕಫೂರ್ ನಿರ್ಮಾಣಗಳಲ್ಲಿ ಹೆಸರಾದ ಚಿತ್ರ.
ಅನಿಲ್ ಕಪೂರ್ ಅವರಿಗೆ ಎರಡು ರಾಷ್ಡ್ರೀಯ ಪ್ರಶಸ್ತಿ, ಆರು ಫಿಲಂಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
ನಾಲ್ಕು ದಶಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿದ್ದು ಇನ್ನೂ ಯುವಕರಂತಿರುವ ಅನಿಲ್ ಕಪೂರ್ ಅವರ ಸಿನಿಪಯಣ ಮೆಚ್ಚುವಂತದ್ದು.
On the birthday of actor Anil Kapoor
ಕಾಮೆಂಟ್‌ಗಳು