ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವನಮಾಲಾ


 ವನಮಾಲಾ ಸಂಪನ್ನಕುಮಾರ


ವನಮಾಲಾ ಸಂಪನ್ನಕುಮಾರ ಸಾಹಿತ್ಯಲೋಕದಲ್ಲಿ ಬರಹಗಾರ್ತಿಯಾಗಿ ಮತ್ತು ಸಂಘಟನಾ ಚುವಟಿಕೆಗಳಲ್ಲಿ ಸಕ್ರಿಯರಾಗಿ ಹೆಸರಾದವರು. 

ವನಮಾಲಾ ಸಂಪನ್ನಕುಮಾರ  ಅವರು 1964ರ ಡಿಸೆಂಬರ್‌ 15ರಂದು ಕುಂದಾಪುರದಲ್ಲಿ ಜನಿಸಿದರು. ತಂದೆ ಮಹಾಲಿಂಗ ಶೆಟ್ಟಿ. ತಾಯಿ ಸಂಜೀವಿ ಎಂ. ಶೆಟ್ಟಿ.  ವನಮಾಲಾ ಸಂಪನ್ನಕುಮಾರ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. 

ವನಮಾಲ ಸಂಪನ್ನಕುಮಾರ ಅವರು ಈ ಹಿಂದೆ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಗಳಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಜವಾಬ್ಧಾರಿಗಳನ್ನು ನಿರ್ವಹಿಸಿದವರು.  ವನಮಾಲ ಅವರು ಬೆಂಗಳೂರು ಬಂಟರ ಸಂಘದ ಸ್ನೇಹ ಚಿಂತನ ಮಾಸಿಕದ ಸಂಪಾದಕ ಮಂಡಳಿ ಸದಸ್ಯರಾಗಿ ಸಹಾ ಕಾರ್ಯನಿರ್ವಹಿಸಿದ್ದಾರೆ.  

ವನಮಾಲ ಸಂಪನ್ನಕುಮಾರ್ ಅವರ ಬರಹಗಳು ಮತ್ತು ಸಂಪಾದನೆಗಳಲ್ಲಿ   ವಾಸಂತಿ ಪಡುಕೋಣೆ (ಜೀವನ ಚರಿತ್ರೆ), ಗರಿಕೆ (ಉದಯೋನ್ಮುಖರ ಕವಿತೆಗಳು), ನಮ್ಮ ಬದುಕಿನ ಪುಟಗಳು, ನಮ್ಮ ಬದುಕು ನಮ್ಮ ಬರಹ (ಲೇಖಕಿಯರ ಆತ್ಮ ಕಥಾನಕಗಳು) ಮುಂತಾದವುಗಳು ಸೇರಿವೆ.

ನಮ್ಮೆಲ್ಲರ ಆತ್ಮೀಯರೂ ಮತ್ತು ಸದಾ ಕನ್ನಡಪರ ಸಕ್ರಿಯರೂ ಆದ ವನಮಾಲ ಸಂಪನ್ನಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.


On the birthday of Vanamala Sampannakumar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ