ಬಾಳಾ ಠಾಕ್ರೆ
ಬಾಳಾ ಠಾಕ್ರೆ
ಶಿವಸೇನೆ ಮುಖಂಡ, ಮರಾಠಿ ಹೋರಾಟಗಾರ ಬಾಳಾ ಠಾಕ್ರೆ ಅವರು ಜನಿಸಿದ್ದು 1926 ವರ್ಷದ ಜನವರಿ 23ರಂದು. ಪತ್ರಕರ್ತರಾಗಿ, ವ್ಯಂಗ್ಯ ಚಿತ್ರಕಾರರಾಗಿ, ಕ್ರಿಯಾಶೀಲ ರಾಜಕಾರಣಿಯಾಗಿ ಹೀಗೆ ಅವರು ಹಲವು ರೀತಿಯಲ್ಲಿ ಬೆಳೆದವರು.
ತೊಂಬತ್ತರ ದಶಕದಲ್ಲಿ ಮುಂಬೈನ ನನ್ನ ಒಬ್ಬ ಗೆಳೆಯರೊಬ್ಬರು “ಬಾಳಾ ಠಾಕ್ರೆ ಅವರಂತಹ ಒಬ್ಬರಿಲ್ಲದಿದ್ದರೆ ನಮ್ಮಂತಹವರು ಇಲ್ಲಿರುವುದು ಕಷ್ಟವಾಗುತ್ತಿತ್ತು” ಎಂದು ನುಡಿದಿದ್ದು ನೆನಪಾಗುತ್ತದೆ. ಹಲವು ರೀತಿಯಲ್ಲಿ ವಿಭಿನ್ನ, ನಿಷ್ಠೂರ ನಿಲುವಿನ ಬಾಳಾ ಠಾಕ್ರೆ ಅವರು ನಮಗೆ ಎಲ್ಲ ರೀತಿಯಲ್ಲಿ ಒಪ್ಪಿಗೆಯಾಗುತ್ತಿರಲಿಲ್ಲ ಎಂಬುದು ನಿಜವಾದರೂ ಅವರ ಮೂಲ ಭಾರತೀಯ ಸಂಸ್ಕೃತಿಗಳ ಕುರಿತಾದ ಹಿತಚಿಂತನೆ ಹಾಗೂ ಅದಕ್ಕಾಗಿ ಅವರು ಕಾವಲು ನಿಂತ ರೀತಿ ಮರೆಯಲಾಗದ್ದು.
ಬಾಳಾ ಠಾಕ್ರೆ ಅವರು ನಿಧನರಾದದ್ದು 2012 ವರ್ಷದ ನವೆಂಬರ್ 17 ರಂದು.
ಕಾಮೆಂಟ್‌ಗಳು