ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾಲ್ಟರ್‌ ಎಂ. ಸ್ಪಿಂಕ್

 

ವಾಲ್ಟರ್‌ ಎಂ. ಸ್ಪಿಂಕ್

ವಾಲ್ಟರ್‌ ಎಂ. ಸ್ಪಿಂಕ್‌ ಅಜಂತಾ-ಎಲ್ಲೋರಾ ಗುಹೆಗಳ ಚಿತ್ರಕಲೆಯ ವ್ಯಾಪಕ ಹಾಗೂ ಆಳ ಅಧ್ಯಯನದ ಮೂಲಕ ವಿಶ್ವದ ಗಮನ ಸೆಳೆದ ಮಹಾನ್ ಕಲಾ ಇತಿಹಾಸಕಾರ ಮತ್ತು ಸಂಶೋಧಕರು.

ಅಮೇರಿಕಾದ ಮಿಸಾಚ್ಯುಟಸ್ ಮೂಲದ ಸ್ಪಿಂಕ್, 1928ರ ಫೆಬ್ರವರಿ 16ರಂದು ಜನಿಸಿದರು.

ಸ್ಪಿಂಕ್ ಅವರು 1953 ರಲ್ಲಿ, ಭಾರತದಿಂದ ತಮ್ಮ ದೇಶಕ್ಕೆ ಮರಳಿದ ನಂತರ “Rock cut Monuments of the Andhra period: Their style and chronology” ಎಂಬ ಪ್ರೌಢ ಪ್ರಬಂಧ ಬರೆದು, ಹಾರ್ವಡ್ ವಿಶ್ವವಿದ್ಯಾಲಯದಿಂದ  ಪಿಎಚ್‌.ಡಿ ಪದವಿ ಪಡೆದರು. 

ವಾಲ್ಟರ್‌ ಎಂ. ಸ್ಪಿಂಕ್ ಅವರು. 'Ajantha: The End of Golden Age’ ಕೃತಿ ಸೇರಿದಂತೆ ಅಜಂತಾ-ಎಲ್ಲೋರಾ ಗುಹೆ ಹಾಗೂ ಚಿತ್ರಕಲೆಯ ಅನನ್ಯ ವೈಭವದ ಇತಿಹಾಸವನ್ನು ತಿಳಿಸುವ ಮಹತ್ವದ ಕೃತಿಗಳನ್ನು ಅನೇಕ ಬೃಹತ್ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.  walterspink.com ತಾಣದಲ್ಲಿ ಈ ಅಗಾಧತೆಯ ವಿವರ ಲಭ್ಯವಿದೆ.

91 ವರ್ಷ ತುಂಬು ಜೀವನ ಪೂರೈಸಿದ  ವಾಲ್ಟರ್‌ ಎಂ. ಸ್ಪಿಂಕ್‌ 2019ರ ನವೆಂಬರ್ 26ರಂದು ನಿಧನರಾದರು. 

On the birth anniversary of great historian and research scholar Walter M. Spink


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ