ರಾಜನ್ ಮಿಶ್ರಾ
ಪಂಡಿತ್ ರಾಜನ್ ಮಿಶ್ರಾ ಇನ್ನಿಲ್ಲ
ಖಾತ ಹಿಂದೂಸ್ತಾನಿ ಸಂಗೀತ ಕಲಾವಿದ ರಾಜನ್ ಮಿಶ್ರಾ ಇಂದು (2021ರ ಏಪ್ರಿಲ್ 25ರಂದು) ನಿಧನರಾಗಿದ್ದಾರೆ.
ಪಂಡಿತ್ ರಾಜನ್ ಮಿಶ್ರಾ ತಮ್ಮ ಕಿರಿಯ ಸಹೋದರ ಸಾಜನ್ ಮಿಶ್ರಾ ಅವರಿಗೆ ಜೋಡಿಯಾಗು ಖಯಾಲ್ ಸಂಗೀತದಲ್ಲಿ ಹೆಸರುವಾಸಿಯಾಗಿದ್ದರು.
ರಾಜನ್ ಮಿಶ್ರಾ 1951ರಲ್ಲಿ ಮತ್ತು ಅವರ ಸಹೋದರ ಸಾಜನ್ ಮಿಶ್ರಾ 1956ರಲ್ಲಿ ವಾರಾಣಸಿಯಲ್ಲಿ ಜನಿಸಿದರು. ಈ ಸಹೋದರರು ತಮ್ಮ ತಂದೆ ಹನುಮಾನ್ ಪ್ರಸಾದ್, ತಾತ ಬಡೇ ರಾಮ್ ದಾಸ್‍ಜಿ ಮಿಶ್ರಾ ಮತ್ತು ಚಿಕ್ಕಪ್ಪ ಸಾರಂಗಿ ಕಲಾವಿದ ಗೋಪಾಲ್ ಪ್ರಸಾದ್ ಮಿಶ್ರಾ ಅವರುಗಳಲ್ಲಿ ಸಂಗೀತ ಸಾಧನೆ ಮಾಡಿದರು.
ಬನಾರಸ್ ಘರಾಣಾ ಸಂಗೀತ ಪ್ರಕಾರಕ್ಕೆ ಹೆಸರಾದ ರಾಜನ್ ಮಿಶ್ರಾ - ಸಾಜನ್ ಮಿಶ್ರಾ ಸಹೋದರರು ಭಾರತದೆಲ್ಲೆಡೆಯಲ್ಲಿ ಅಲ್ಲದೆ 1978ರಲ್ಲಿ ಶ್ರೀಂಕಾದಲ್ಲಿ ಮೊದಲ್ಗೊಂಡಂತೆ ಜರ್ಮನಿ, ಫ್ರಾನ್ಸ್, ಸ್ವಿಡ್ಜರ್ಲ್ಯಾಂಡ್, ಆಸ್ಟ್ರಿಯಾ, ಅಮೆರಿಕಾ, ಯುಕೆ, ನೆದರ್ಲ್ಯಾಂಡ್ಸ್, ರಷ್ಯಾ, ಸಿಂಗಪೂರ್, ಖತಾರ್, ಬಾಂಗ್ಲಾದೇಶ, ಮಸ್ಕತ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತಮ್ಮ ಗಾನಸುಧೆ ಹರಿಸಿದ್ದರು.
ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಗಂಧರ್ವ ರಾಷ್ಟ್ರೀಯ ಪ್ರಶಸ್ತಿ, ತಾನಸೇನ್ ಪ್ರಶಸ್ತಿ, ಕರ್ನಾಟಕದ ಆಳ್ವಾಸ್ ವಿರಾಸಾತ್ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳಿಗೆ ರಾಜನ್ ಮಿಶ್ರಾ - ಸಾಜನ್ ಮಿಶ್ರಾ ಸಹೋದರರು ಭಾಜನರಾಗಿದ್ದರು.
ಈ ಕರೋನಾ ಪರಿಣಾಮ ಸಂಗೀತ ಕಂಠಗಳನ್ನೂ ಒಯ್ಯಬೇಕೆ. ಅಗಲಿದ ಪಂಡಿತ್ ರಾಜನ್ ಮಿಶ್ರಾ ಅವರ ಸಂಗೀತ ಅಮರ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
Respects to departed Pandit Rajan Mishra ji🌷🙏🌷
ಕಾಮೆಂಟ್‌ಗಳು