ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚರಣ್ ರಾಜ್


 ಚರಣ್ ರಾಜ್


ಕನ್ನಡದ ಚರಣ್ ರಾಜ್ ಭಾರತದ ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧರಾಗಿದ್ದಾರೆ.

ಚರಣ್ ರಾಜ್ ಅವರ ಮೂಲ ಹೆಸರು ಬ್ರಹ್ಮಾನಂದ.  ಅವರು 1958ರ ಏಪ್ರಿಲ್ 27ರಂದು ಬೆಳಗಾವಿಯಲ್ಲಿ ಜನಿಸಿದರು.

ಚರಣ್ ರಾಜ್ ಮಹಾನ್ ನಿರ್ದೇಶಕ ಸಿದ್ಧಲಿಂಗಯ್ಯನವರ ನಿರ್ದೇಶನದ 'ಪರಾಜಿತ' ಮೂಲಕ 1982ರಲ್ಲಿ ಚಿತ್ರರಂಗಕ್ಕೆ ಬಂದರು.  1984ರಲ್ಲಿ ಅಬ್ಬಾಯಿ ನಾಯ್ಡು ಅವರು ನಿರ್ಮಿಸಿದ 'ತಾಳಿಯ ಭಾಗ್ಯ' ಚಿತ್ರದಲ್ಲಿ ನಟಿಸಿದರು. ಮುಂದೆ ತೆಲುಗಿನ 'ಪ್ರತಿಘಟನ' ಚಿತ್ರದಲ್ಲಿನ ಕಾಳಿ ಪಾತ್ರ ಅವರಿಗೆ ಜನಪ್ರಿಯತೆ ತಂದು ಎಲ್ಲಾ ಭಾಷೆಯ ಚಿತ್ರರಂಗಗಳಲ್ಲಿ ಅವರಿಗೆ ಖಳಪಾತ್ರಗಳು ಹರಿದುಬಂದವು. ಇಂದ್ರಡು ಚಂದ್ರುಡು, ಕರ್ತವ್ಯಂ, ಸ್ವಯಂಕೃಷಿ, ಜಂಟಲ್ ಮ್ಯಾನ್, ವೀರ, ಧರ್ಮ ದೊರೈ, ಬಾಷಾ, ಫೂಲ್ ಬನೆ ಅಂಗಾರೆ, ಕನ್ನಡದ 'ಸೂರಪ್ಪ' ಹೀಗೆ ಅವರು ಹಲವು ನೂರು ವಿವಿಧ ಭಾಷಾ ಚಿತ್ರಗಳಲ್ಲಿ ನಟಿಸಿದ್ದಾರೆ. ನಿರ್ಮಾಣ, ಸಂಗೀತ, ನಿರ್ದೇಶನಗಳನ್ನೂ ಪ್ರಯತ್ನಿಸಿದ್ದಾರೆ. 

ನಮ್ಮ ಕನ್ನಡದ ವ್ಯಕ್ತಿ ಚರಣ್ ರಾಜ್ ಭಾರತದೆಲ್ಲೆಡೆ ಬೆಳಗಿದ ಚಲನಚಿತ್ರ ಅಭಿನಯ ಕಲೆ, ಅದಕ್ಕೆ ನೀಡಿದ ಪರಿಶ್ರಮ, ಗಳಿಸಿದ ಯಶಸ್ಸು ಸಾಮಾನ್ಯದ್ದಲ್ಲ. ಚರಣ್ ರಾಜ್ ಅವರಿಗೆ ಶುಭವಾಗಲಿ.


On the birthday of actor Charan Raj 



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ