ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅರ್ಶದ್ ವಾರ್ಸಿ


 ಅರ್ಶದ್ ವಾರ್ಸಿ 


ಅರ್ಶದ್ ವಾರ್ಸಿ ಹುಟ್ಟಿದ ದಿನ ಏಪ್ರಿಲ್ 19, 1968.  ಈತ  ಮುನ್ನಾಭಾಯಿ ಎಂ.ಬಿ.ಬಿ.ಎಸ್ ಮತ್ತು ಲಗೇ ರಹೋ ಮುನ್ನಾಭಾಯಿ ಚಿತ್ರಗಳಲ್ಲಿ  ‘ಸರ್ಕಿಟ್  ಆಗಿ ನೀಡಿರುವ ಅಭಿನಯ ನನಗೆ ಅಚ್ಚುಮೆಚ್ಚು.  ರಾಜ್ ಕುಮಾರ್ ಹಿರಾನಿಯಂತಹ ಉತ್ತಮ ಅಭಿರುಚಿಯ ನಿರ್ದೇಶಕನಿಗೆ ಸಂಜಯ್ ದತ್ ಅಂತಹ ಒಬ್ಬ ವ್ಯಕ್ತಿಯನ್ನು ಸಹಾ ಉತ್ತಮ ನಟನನ್ನಾಗಿ ಮಾಡುವ ಶಕ್ತಿಯಿದೆ.  ಮರೆತು ಹೋಗಿರುವ ಗಾಂಧಿಯನ್ನೂ ಹೊಸ ರೀತಿಯಲ್ಲಿ ಹೀರೋ ಆಗಿಸುವ ಶಕ್ತಿಯಿದೆ.  ಈ ಕೈಚಳಕದಲ್ಲಿ ಮೂಡಿಬಂದ ಅರ್ಶದ್  ವಾರ್ಸಿ ಮುಂದೆ  ಸಾಕಷ್ಟು ಬೆಳೆದಿದ್ದಾರೆ.  ಸಿನಿಮಾ ರಂಗದಲ್ಲಿ ಮತ್ತು ರಂಗಭೂಮಿಯಲ್ಲಿ ಅವರಿಗೆ ಸಾಕಷ್ಟು ಪರಿಶ್ರಮವಿದೆ.   ಆದ್ರೂ ನನಗೆ ಮುನ್ನಾಭಾಯ್ ಚಿತ್ರಗಳ ಈ ‘ಸರ್ಕಿಟ್’ ಮೊದಲ ನೆನಪು. ಸದಾ ಅಚ್ಚುಮೆಚ್ಚು 😊

Unforgeetable circuit my favorite Arshad Warsi 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ