ಅನುರಾಧಾ ಬಿ. ರಾವ್
ಅನುರಾಧಾ ಬಿ. ರಾವ್
'ಅನು ಮಾ' ಎಂದರೆ ಏನೋ ಹರುಷವು...
ನನಗೆ ಫೇಸ್ಬುಕ್ ವಲಯದಲ್ಲಿ ಎಲ್ಲರಲ್ಲೂ ಸಮಾನವಾದ ಪ್ರೀತಿ ವಿಶ್ವಾಸ ಹೊಂದಿ ಅದನ್ನು ಅಪರಿಮಿತವಾಗಿ ಎಲ್ಲರಿಂದಲೂ ಸಂಪಾದಿಸಿರುವ ವ್ಯಕ್ತಿಗಳಲ್ಲಿ ನೆನಪಾಗುವ ಪ್ರಮುಖ ಹೆಸರು ಅನುರಾಧಾ ಬಿ. ರಾವ್. ಇಂತಹ ಗುಣ ಇವರಿಗೆ ಸಾಹಿತ್ಯ, ಛಾಯಾಗ್ರಹಣ ಮತ್ತು ವೈದ್ಯಕೀಯ ವೃತ್ತಿಯಲ್ಲಿ ಅಪಾರ ಹೆಸರು ಮಾಡಿ ಸಾಮಾನ್ಯರೊಂದಿಗೆ ಆಪ್ತ ಸ್ನೇಹದಲ್ಲಿ ಬದುಕು ನಡೆಸಿದ ತಂದೆ ಡಾ. ದೊಡ್ಡೇರಿ ವೆಂಕಟಗಿರಿರಾವ್ ಅವರಿಂದಲೇ ಬಂದಿರುವಂತದ್ದು ಎಂದು ತಕ್ಷಣ ಅನಿಸುತ್ತದೆ. ಅವರೊಂದಿಗೆ ವಿಚಾರ ಮಂಥನ ನಡೆಸಬೇಕೆಂಬ ನನ್ನ ಆಸೆಗೆ ಇನ್ನೂ ಸಮಯ ಕೂಡಿ ಬಂದೇ ಇಲ್ಲ.
ತಮ್ಮ ವಿಶಾಲ ಹೃದಯತೆಯ ಆಪ್ತ ನಗುವಿನೊಂದಿಗೆ ಎಲ್ಲರನ್ನೂ ಸೆಳೆದುಕೊಳ್ಳುವ ಮಗುವಿನಂತಹ ಮನಸ್ಸಿನ ಇವರ ಸರಳ ಸಜ್ಜನಿಕೆಯ ಸವಿ ಆಕರ್ಷಣೆಗೆ ಸಿಲುಕದಿರು ವವರಾದರೂ ಯಾರು? ಈ ಸೌಭಾಗ್ಯಕ್ಕೆ ಏನು ಹೇಳಿದರೂ ಸಾಲದು. ಇದು ನಮ್ಮೊಂದಿಗೆ ಚಿರಕಾಲವಿರಲಿ. ತಾಯಿ ಅನು ಮಾ ಅವರ ಕೃಪಾಶೀರ್ವಾದ ನಮ್ಮ ಮೇಲೆ ನಿರಂತರವಾಗಿರಲಿ. ಅವರ ಬದುಕು ಸಕಲ ಸುಖ, ಸೌಖ್ಯ, ಸಂತಸಗಳ ಸೌಭಾಗ್ಯದಿಂದ ನಳ ನಳಿಸುತ್ತಾ ಮುಂದೆ ಸಾಗುತ್ತಿರಲಿ ಎಂದು ಅವರಿಗೆ ಆತ್ಮೀಯವಾಗಿ ಹುಟ್ಟುಹಬ್ಬದ ಶುಭ ಕೋರುತ್ತಿದ್ದೇನೆ.
You are the best Anu Maa. Wish I always be like you.
Happy Birth Day my favorite smiling heart Anu Maa Anuradha B Rao
ಕಾಮೆಂಟ್‌ಗಳು