ಡಿ. ವಿ. ಪಲುಸ್ಕರ್
ಡಿ. ವಿ. ಪಲುಸ್ಕರ್
ಪಂಡಿತ್ ದತ್ತಾತ್ರೇಯ ವಿಷ್ಣು ಪಲುಸ್ಕರ್ ಸಂಗೀತ ಲೋಕದ ಮಹಾನ್ ತಾರೆ. ಕೇವಲ 34 ವರ್ಷ ಬದುಕಿದ್ದರೂ ತಮ್ಮ ಶಾಂತ-ಶಿಸ್ತುಬದ್ಧ ಸ್ವಭಾವ ಹಾಗೂ ಪರಂಪರಾಬದ್ಧ ಗಾಯನದಿಂದ ಅಮರರಾದವರು.
ಡಿ.ವಿ.ಪಲುಸ್ಕರ್ 1921ರ ಮೇ 28ರಂದು ನಾಸಿಕ್ ಪಟ್ಟಣದಲ್ಲಿ ಜನಿಸಿದರು. 'ಬಾಲಪ್ರತಿಭೆ’ ಅಗಿ ಸಾಕಷ್ಟು ಹೆಸರು ಮಾಡಿದ್ದ ಡಿ.ವಿ.ಪಲುಸ್ಕರ್ ಸಂಗೀತ ವಲಯದಲ್ಲಿ ಬಾಪೂ ರಾವ್ ಎಂಬ ಹೆಸರು ಪಡೆದಿದ್ದರು. ತಂದೆ-ತಾಯಿಯರು ಜನ್ಮ ನೀಡಿದ 12ಮಕ್ಕಳಲ್ಲಿ ಉಳಿದ ಒಬ್ಬನೇ ಒಬ್ಬ ಮಗು ಇವರಾಗಿದ್ದರು. ಹಿಂದೂಸ್ಥಾನಿ ಸಂಗೀತದ ಪುನರುದ್ಧಾರಕರೆಂದೇ ಹೆಸರು ಪಡೆದ ತಮ್ಮ ತಂದೆ ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್ ಅವರಿಂದ ಬಾಲ್ಯದಲ್ಲೇ ಅವರಿಗೆ ಸಂಗೀತ ಪಾಠ ಸಾಂಗವಾಗಿ ನಡೆಯಿತು. ಮಗನಿಗೆ ಇನ್ನೂ 10 ವರ್ಷವಿದ್ದಾಗ ತಂದೆ ವಿಷ್ಣು ದಿಗಂಬರ ಪಲುಸ್ಕರ್ ನಿಧನರಾದರು. ಇದರಿಂದಾಗಿ ಅಲ್ಲಿಗೇ ನಿಂತ ಅವರ ಸಂಗೀತವನ್ನು ಅವರ ಕುಟುಂಬದವರೇ ಆದ ಚಿಂತಾಮಣ್ ರಾವ್ ಪಲುಸ್ಕರ್ ಮುಂದುವರಿಸಿದರು. ಮುಂದೆ ಪಂ. ವಿನಾಯಕರಾವ್ ಪಟವರ್ಧನ್ ಅವರು ಗುರುವಾಗಿ ದೊರೆತ ಮೇಲೆ ಡಿ.ವಿ ಅವರ ನಿಜವಾದ ಕಲಿಕೆ ಆರಂಭವಾದಂತಾಯಿತು. ಡಿ.ವಿ ಅವರು ನಾರಾಯಣ್ ರಾವ್ ವ್ಯಾಸ್ ಹಾಗೂ ಪಂ.ಮಿರಾಶಿ ಬುವಾ ಅವರಿಂದಲೂ ಅನೇಕ ಸಂಗೀತದ ಅಂಶಗಳನ್ನು ಪಡೆದಿದ್ದರು.
ಬಹಳ ಚಿಕ್ಕವರಿದ್ದಾಗಿನಿಂದಾಗಲೇ ಅವರು ವೇದಿಕೆಯೇರಿ ಕಾರ್ಯಕ್ರಮ ನೀಡಲು ಆರಂಭಿಸಿದರೂ 14ವರ್ಷದವರಿದ್ದಾಗ ‘ಹರಿವಲ್ಲಭ ಸಂಗೀತ ಸಮ್ಮೇಳನ’ದಲ್ಲಿ ಹಾಡಿದ ನಂತರ ಒಂದೇ ದಿನದಲ್ಲಿ ಅವರ ಹೆಸರು ದೇಶದೆಲ್ಲೆಡೆ ಹರಡಿತು. ಗ್ವಾಲಿಯರ ಘರಾಣೆಯ ಎಲ್ಲಾ ಮೂಲೆ-ಮೊಡಕುಗಳನ್ನು ಅರಸಿ, ಪದ್ಧತಿ ಪ್ರಕಾರ ಕಠಿಣವಾದ ತಾಲೀಮು ಪಡೆದ ಅವರ ಸಂಗೀತ ಸುಲಲಿತವಾದದ್ದು. ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ರಾಗದ ಸಂಪೂರ್ಣ ಸ್ವರೂಪವನ್ನು ಬಿಚ್ಚಿಡಬಲ್ಲ ಆಕರ್ಷಕ ಶಕ್ತಿ ಅವರ ಸಂಗೀತದಲ್ಲಿತ್ತು. ತಮ್ಮ ಸ್ವಭಾವದಂತೆಯೇ ಅವರ ಗಾಯನವೂ ನೇರ, ದಿಟ್ಟ ಹಾಗೂ ಮನಸ್ಪರ್ಶಿಯಾದದ್ದು. ಮಾಲಗುಂಜಿ, ದೇಸಿ, ಖಂಬಾವತಿ ಮುಂತಾದ ಗ್ವಾಲಿಯರ್ ಘರಾಣೆಯ ವಿಶೇಷ ರಾಗಗಳನ್ನೇ ಅವರು ಹೆಚ್ಚಾಗಿ ಹಾಡುತ್ತಿದ್ದರು. ಸಂಗೀತದಲ್ಲಿನ ವ್ಯಾಕರಣ ಹಾಗೂ ಭಾವ ಎರಡನ್ನೂ ಮೇಳೈಸಿದ ಶಾಂತ ಸಂಗೀತ ಅವರದ್ದು. ವಿನಾಯಕರಾವ್ ಅವರಿಂದ ಮಹಾರಾಷ್ಟದಲ್ಲಿ ದೃಢವಾಗಿ ನೆಲೆಯಾದ ಗ್ವಾಲಿಯರ್ ಘರಾಣೆಗೆ ಹೊಸ ಸ್ವರೂಪವನ್ನು ತಂದುಕೊಟ್ಟರು.
ಭಜನ್ ಪ್ರಕಾರವನ್ನು ಬಹು ಜನಪ್ರಿಯವಾಗಿಸಿ, ವೇದಿಕೆಯ ಮೇಲಿನ ಕಲೆಯಾಗಿಸಿದ ಕೀರ್ತಿಯೂ ಡಿ.ವಿ. ಫಲುಸ್ಕರ್ ಅವರಿಗೇ ಸಲ್ಲುತ್ತದೆ. ಸೂರದಾಸ್, ಕಬೀರ್, ಮೀರಾ, ತುಲಸೀದಾಸ್ ಭಜನ್‍ಗಳನ್ನು ಅವರು ಸುಪ್ರಸಿದ್ಧಗೊಳಿಸಿದರು. ಅವರು ಹಾಡಿದ ‘ರಘುಪತಿ ರಾಘವ’, ‘ಠುಮಕ ಚಲತ’, ‘ಜಬ ಜಾನಕೀನಾಥ ಸಹಾಯ ಕರೆ’ ಮುಂತಾದವುಗಳೆಲ್ಲಾ ಇಂದೂ ಜನಮಾನಸದಲ್ಲಿ ನೆಲೆಯಾಗಿವೆ.
ಡಿ.ವಿ.ಪಲುಸ್ಕರ್ ಅವರು ತಮ್ಮ ತಂದೆ ಸ್ಥಾಪಿಸಿದ “ಗಾಂಧರ್ವ ಮಹಾವಿದ್ಯಾಲಯ”ದ ವಾರಸುದಾರರಾಗಿ ಹಲವು ರೀತಿಯಲ್ಲಿ ತೊಡಗಿದರು. ತಮ್ಮ ತಂದೆಯವರು ಬರೆದು, ಪ್ರಕಟವಾಗದೆ ಉಳಿದಿದ್ದ ಪುಸ್ತಕಗಳ ತಿದ್ದುಪಡಿ ಮಾಡಿ ಪ್ರಕಟಣೆ ಮಾಡಿದರು. ಆ ಕಾಲದಲ್ಲಿ ಟೈಪ್ ರೈಟರ್ ಇಟ್ಟುಕೊಂಡು, ಟೈಪ್ ಮಾಡಬಲ್ಲಂಥ ಸಂಗೀತಗಾರ ಇವರೊಬ್ಬರೇ ಆಗಿದ್ದರು ಎಂದು ಅವರನ್ನು ಬಲ್ಲವರು ಅಭಿಪ್ರಾಯ ಪಡುತ್ತಾರೆ. ಯಾರೇ ಅವರಿಗೆ ಪತ್ರ ಹಾಕಿದರೂ ತಾವೇ ಖುದ್ದಾಗಿ ಅದಕ್ಕೆ ಪ್ರತಿಕ್ರಿಯೆಯನ್ನು ಟೈಪ್ ಮಾಡಿ ಅತಿ ಶೀಘ್ರವಾಗಿ ಕಳುಹಿಸುತ್ತಿದ್ದರಂತೆ. ಯಾವುದೇ ವ್ಯಸನಗಳಿಲ್ಲದ ತುಂಬಾ ಶಿಸ್ತಿನ, ನಿಯಮಬದ್ಧ ಜೀವನ ಅವರದ್ದು. ಯಾರ ಬಗ್ಗೆಯೂ ಒಂದೂ ಕೆಟ್ಟ ಮಾತು ಆಡುತ್ತಿರಲಿಲ್ಲ. ಅವರ ನಿಲುವಿನಲ್ಲಿ ಒಂದು ಸ್ಥಿರತೆ ಇತ್ತು.
ಹಿಂದಿ ಸಿನೆಮಾದ ಪ್ರಸಿದ್ಧ ಸಂಗೀತ ನಿರ್ದೇಶಕ, ನೌಶಾದ್ ಅವರು ತಮ್ಮ “ಬೈಜೂ ಬವರಾ” ಚಲನಚಿತ್ರಕ್ಕೆ ಡಿ.ವಿ ಪಲುಸ್ಕರ್ ಅವರ ದನಿಯನ್ನು ಬಳಸಿಕೊಂಡರು. ಉಸ್ತಾದ್ ಅಮೀರ್ ಖಾನ್ ಹಾಗೂ ಡಿ.ವಿ ಪಲುಸ್ಕರ್ ಅವರ ದೇಸಿ ರಾಗದಲ್ಲಿನ ಜುಗಲ್‍ಬಂದಿ ಇತಿಹಾಸವನ್ನೇ ಸೃಷ್ಟಿಸಿದವು.
ಆಕಾಶವಾಣಿಯ ನೆಚ್ಚಿನ ಗಾಯಕರಾಗಿದ್ದ ಪಲುಸ್ಕರ್ ಅವರು ಅಲ್ಪಕಾಲವೇ ಬದುಕಿದ್ದರೂ ಅದೃಷ್ಟವಶಾತ್ ಅವರ ಹಲವು ರೆಕಾರ್ಡಿಂಗುಗಳು ಲಭ್ಯವಿದೆ. ಅವರ ಮೊದಲ ಗ್ರಾಮಾಫೋನ್ ಡಿಸ್ಕ್ ಹೊರಬಂದದ್ದು 1944ರಲ್ಲಿ.
ಪಲುಸ್ಕರ್ ಅವರು 1955ರಲ್ಲಿ ಸರಕಾರದ ಆಶಯದ ಮೇರೆಗೆ ಚೀನಾ ದೇಶಕ್ಕೆ ಹೋಗಿ, ಅಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ಸ್ವದೇಶಕ್ಕೆ ಹಿಂತಿರುಗಿದ ಮೇಲೆ ಅವರು ಕಾಯಿಲೆಗೆ ತುತ್ತಾಗಿ ಅದೇ ವರ್ಷ ಅಕ್ಟೋಬರ್ 26ರಂದು ನಿಧನರಾದರು.

On the birth anniversary of great Hindustani classical vocalist Pandit D. V. Paluskar
ಕಾಮೆಂಟ್‌ಗಳು