ಸಿಂಗಾರಶೀಲ
ನನ್ನ ಅಚ್ಚುಮೆಚ್ಚಿನ ಗೀತೆಗಳಲ್ಲೊಂದು...
ಸಿಂಗಾರ ಶೀಲ ಸಂಗೀತ ಲೋಲ
ಸಿಂಗಾರ ಶೀಲ ಸಂಗೀತ ಲೋಲ
ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯಳಾದೆನಾ
ಸಿಂಗಾರ ಶೀಲ ಸಂಗೀತ ಲೋಲ
ಸರಸ ಸುಮ್ಮಾನ ಸಂತೋಷ ಭಾವ
ಶರಧಿಯಂತಾಗಿ ತುಂಬಿತೋ ಜೀವಾ
ಹರಿಯೇ ದೊರೆಯೇ ಈ ನಿನ್ನ ಮಾಯೇ
ಏನೆಂದು ಹೇಳಲಯ್ಯಾ ದೀನಬಂಧು ನೀನಯ್ಯಾ
ಸಿಂಗಾರ ಶೀಲ ಸಂಗೀತ ಲೋಲ
ಕವಿದ ಗಾಢಾಂಧಕಾರವ ನೀಗಿ
ಬೆಳಕ ನೀ ತಂದೇ ನನ್ನವನಾಗಿ
ನಲಿದೆ ಒಲಿದೇ ನಲ್ಮೆಯ ತಂದೇ
ಕಾಪಾಡೊ ಕಾಮಧೇನು ನೀನೇ ಎಂದು ತೋರಿದೆ
ಸಿಂಗಾರ ಶೀಲ ಸಂಗೀತ ಲೋಲ
ಮನದೊಳೇಕಿಂಥ ಮೋಹದ ವೀಣೆ
ಮಧುರ ಝೇಂಕಾರ ತಂದಿತೋ ಕಾಣೇ
ಕುಣಿವೇ, ತಣಿವೇ, ಸೇವೆಯ ಗೈವೇ
ಶ್ರೀರಂಗ ನಿನ್ನ ಲೀಲೆ ಹಾಡಿ ಹಾಡಿ ಬಾಳುವೇ
ಸಿಂಗಾರ ಶೀಲ ಸಂಗೀತ ಲೋಲ
ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯನಾಳಾದೆನಾ
ಸಿಂಗಾರ ಶೀಲ ಸಂಗೀತ ಲೋಲ
ಚಿತ್ರ: ಭಕ್ತ ಕನಕದಾಸ (1960)
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಂಗೀತ : ಎಂ ವೆಂಕಟರಾಜು
ಗಾಯನ: ಎಸ್.ಜಾನಕಿ ಮತ್ತು ಪಿ. ಬಿ. ಶ್ರೀನಿವಾಸ್
https://youtu.be/dtuytF741sY
ಕಾಮೆಂಟ್‌ಗಳು