ಮರಿಯೋ ಮಿರಾಂಡ
ಮರಿಯೋ ಮಿರಾಂಡ
ಮರಿಯೋ ಮಿರಾಂಡ ಪ್ರಖ್ಯಾತ ವ್ಯಂಗ್ಯಚಿತ್ರಕಾರರಾಗಿದ್ದವರು.
ಮರಿಯೋ ಮಿರಾಂಡಾ 1926ರ ಮೇ 2ರಂದು ಗೋವಾದ ದಾಮನ್ ಅಲ್ಲಿ ಜನಿಸಿದರು.
ಟೈಮ್ಸ್ ಆಫ್ ಇಂಡಿಯಾ ಮತ್ತು ಅದರ ಸೋದರ ಪತ್ರಿಕೆಗಳಲ್ಲಿ ನಿರಂತರವಾಗಿ ತಮ್ಮ ಚಿತ್ರಗಳನ್ನು ಮೂಡಿಸುತ್ತಿದ್ದ ಮರಿಯೋ ಮಿರಾಂಡ ಅವರು ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ’ ಸಂಚಿಕೆಗಳಲ್ಲಿನ ತಮ್ಮ ಚಿತ್ರಗಳಿಂದ ಅಪಾರ ಜನಪ್ರಿಯತೆ ಪಡೆದಿದ್ದರು.
ಲಿಲಿಪುಟ್, ಮ್ಯಾಡ್, ಪಂಚ್ ಮುಂತಾದ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲೂ ತಮ್ಮ ಚಿತ್ರಗಳನ್ನು ಮೂಡಿಸಿದ್ದ ಮರಿಯೋ ಮಿರಾಂಡ ಹಲವಾರು ವರ್ಷಗಳ ಕಾಲ ಪೋರ್ಚುಗಲ್, ಇಂಗ್ಲೆಂಡ್ ಮುಂತಾದೆಡೆಗಳಲ್ಲಿ ಇದ್ದರು. ಮುಂದೆ ಮುಂಬೈಗೆ ಹಿಂದಿರುಗಿದ ಅವರು ಟೈಮ್ಸ್ ಆಫ್ ಇಂಡಿಯಾದಲ್ಲಿ ಆರ್. ಕೆ. ಲಕ್ಷ್ಮಣ್ ಅವರ ಜೊತೆಗಾರರಾಗಿ ದುಡಿದರು. ಮಿರಾಂಡಾ ಅವರು ಕಲಾವಿದೆ ಹಬಿಬಾ ಹೈದೇರಿ ಅವರನ್ನು ಪ್ರೇಮಿಸಿ ವಿವಾಹವಾಗಿದ್ದರು.
ಮಿರಾಂಡಾ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಸಂದಿದ್ದವು.
ಮಿರಾಂಡಾ 2011ರ ಡಿಸೆಂಬರ್ 11ರಂದು ತಮ್ಮ 85ನೆಯ ವಯಸ್ಸಿನಲ್ಲಿ ಗೋವೆಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
On the birth anniversary of great cartoonist Mario Miranda
ಕಾಮೆಂಟ್‌ಗಳು