ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೌಹಾರ್ ಜಾನ್


 ಗೌಹಾರ್ ಜಾನ್


ಗೌಹಾರ್ ಜಾನ್ ಪ್ರಸಿದ್ಧ ಗಾಯನ ಮತ್ತು ನೃತ್ಯ ಕಲಾವಿದೆ. ಭಾರತದಲ್ಲಿ ಧ್ವನಿಮುದ್ರಣಗೊಂಡ ಮೊದಲ ಧ್ವನಿ ಇವರದು.  ಇವರ ಮೊದಲ ಹೆಸರು ಏಂಜಲೀನಾ ಯೆವಾರ್ರ್ಡ್ ಎಂದಿತ್ತು. 

ಗೌಹಾರ್ ಜಾನ್ 1873ರ ಜೂನ್ 26ರಂದು ಉತ್ತರ ಪ್ರದೇಶದ ಅಸಲ್‌ಘಾಟ್‌ನಲ್ಲಿ ಜನಿಸಿದರು. ಆಕೆಯ ತಂದೆ ವಿಲಿಯಂ ರಾಬರ್ಟ್ ಯೆಯೋರ್ಡ್ ಡ್ರೈ ಐಸ್ ಕಾರ್ಖಾನೆಯಲ್ಲಿ ಇಂಜಿನಿಯರಾಗಿದ್ದರು. 1872ರಲ್ಲಿ ವಿಕ್ಟೋರಿಯಾ ಹೆಮಿಂಗ್ಸ್ ಅವರನ್ನು ವಿವಾಹವಾದರು. ವಿಕ್ಟೋರಿಯಾ ಸಂಗೀತ ಮತ್ತು ನೃತ್ಯದಲ್ಲಿ ತರಬೇತಿ ಪಡೆದಿದ್ದರು. 1879ರಲ್ಲಿ ಮದುವೆ ಕೊನೆಗೊಂಡಿತು. 1881ರಲ್ಲಿ ನಂತರ ಬನಾರಸ್‍ಗೆ ವಲಸೆ ಬಂದ ತಾಯಿ ಖುರ್ಷಿದ್ ಎಂಬ ಕಲಾಪ್ರೇಮಿಯೊಂದಿಗೆ ವಿವಾಹವಾದರು.
ಪ್ರಮುಖ ಅಧ್ಯಯನಗಳ ಕೇಂದ್ರವಾಗಿದ್ದ ಬನಾರಸ್ ಎಲ್ಲಾ ಬಗೆಯ ನೃತ್ಯ, ನಾಟಕ, ಹಾಡುಗಾರಿಕೆಗಳಿಗೆ ಹೆಸರುವಾಸಿಯಾಗಿತ್ತು. ವಿಕ್ಟೋರಿಯಾ ಕಲಾವಿದೆಯಾಗಿ ಹೆಸರಾಗಿ ತನಗೆ 'ಬಡೇ ಮಲ್ಕಾ ಜಾನ್' ಎಂಬ ಹೆಸರಿಟ್ಟುಕೊಂಡರು.  ಮಗಳಿಗ ಗೌಹಾರ್ ಜಾನ್ ಎಂದು ಹೆಸರಿಟ್ಟರು.

1883ರಲ್ಲಿ ಗೌಹಾರ್ ಜಾನ್ ತಾಯಿಯೊಂದಿಗೆ ಕೊಲ್ಕತ್ತಾಗೆ ಹಿಂದಿರುಗಿದರು.  ತಾಯಿ ನವಾಬ ವಾಜಿದ್ ಆಲಿ ಶಾ ಆಸ್ಥಾನದಲ್ಲಿ ಕಲಾವಿದೆಯಾಗಿ ಸಿರಿವಂತೆಯಾದರು.  ಗೌಹಾರ್ ಜಾನ್ ಸಂಗೀತದಲ್ಲಿ ಎಲ್ಲ ರೀತಿಯಲ್ಲಿ ಪರಿಣತಿ ಸಾಧಿಸಿದರು.   ಮಹಾನ್ ಸಂಗೀತಕಾರ ಉಸ್ತಾದ್ ಕಾಲೇ ಖಾನರ ಬಳಿ ಹಿಂದೂಸ್ಥಾನೀ ಸಂಗೀತ ಮತ್ತು ಬ್ರಿಂದಾದಿನ್ ಮಹಾರಾಜ್ ಅವರಿಂದ ಕಥಕ್ ನೃತ್ಯ ಕಲಿತರು. ಧ್ರುಪದ್ ಅನ್ ಶ್ರೀಜಾನ್‍ಬಾಯ್ ಮತ್ತು ಕೀರ್ತನ್ ಅನ್ನು ಚರಣ್ ದಾಸ್ ಅವರಿಂದ ಕಲಿತರು. 'ಹಮ್ದಮ್' ಎಂಬ ಹೆಸರಲ್ಲಿ ಗಝಲ್ ರಚನೆ ಮತ್ತು ಸಂಯೋಜನೆ ಮಾಡುತ್ತಿದ್ದ ಗೌಹಾರ್ ಜಾನ್, ರಬೀಂದ್ರ ಸಂಗೀತದಲ್ಲೂ ಪ್ರವೀಣೆಯಾದರು.  

ಗೌಹಾರ್ ಜಾನ್ 1887ರಲ್ಲಿ ದರ್ಬಾಂಗಾ ರಾಜಾಸ್ಥಾನದಲ್ಲಿ ಪ್ರಥಮ ಕಚೇರಿ ನೀಡಿದರು.  1896ರಲ್ಲಿ ಕೊಲ್ಕತ್ತಾದಲ್ಲಿ ಪ್ರದರ್ಶನ ನೀಡಲಾರಂಭಿಸಿದ ಆಕೆ 'ಫಸ್ಟ್ ಡ್ಯಾನ್ಸಿಂಗ್ ಗರ್ಲ್' ಎಂದು ಪ್ರಸಿದ್ಧರಾದರು. 1902ರಲ್ಲಿ ಜರ್ಮನ್ ಗ್ರಾಮಾಫೋನ್ ಕಂಪೆನಿಯೊಂದು ಭಾರತದಲ್ಲಿ ಗ್ರಾಮಾಫೋನ್‌ಗೆ ಸಂಗೀತವನ್ನು ಮುದ್ರಿಸಿಕೊಳ್ಳಲು ಆಗಮಿಸಿತು. ಆಗ ಮೊದಲ ಬಾರಿಗೆ ಗ್ರಾಮಾಫೋನ್ ದನಿ ನೀಡಿದ್ದು ಗೌಹಾರ್ ಜಾನ್. ತುಮ್ರಿ, ದಾದ್ರಾ, ಘಜಲ್ ಪ್ರಾಕಾರಗಳನ್ನು ಜನಪ್ರಿಯಗೊಳಿಸಿದ ಪ್ರಮುಖರಲ್ಲಿ ಗೌಹಾರ್ ಕೂಡ ಒಬ್ಬರು.

ಗೌಹಾರ್ ಜಾನ್ 1902ರಿಂದ 1920 ಅವಧಿಯಲ್ಲಿ ಹತ್ತು ಭಾಷೆಗಳಲ್ಲಿ 600ಕ್ಕೂ ಹೆಚ್ಚು ಗೀತೆಗಳನ್ನು ಧ್ವನಿಮುದ್ರಿಸಿದ್ದರಂತೆ.  ಅವರ ಧ್ವನಿತಟ್ಟೆಗಳನ್ನು ಗ್ರಾಮಾಫೋನ್ ಕಂಪನಿ. ಆಫ್ ಇಂಡಿಯಾ ಮಾರುಕಟ್ಟೆಗೆ ತಂದಿತು.  1910ರಲ್ಲಿ ಮದ್ರಾಸಿನ ವಿಕ್ಟೋರಿಯಾ ಪಬ್ಲಿಕ್ ಹಾಲ್ನಲ್ಲಿ ಗೌಹಾರ್ ಜಾನ್  ಸಂಗೀತ ಕಚೇರಿ ನಡೆಯಿತು.  ಅವರ ಹಿಂದೂಸ್ಥಾನಿ ಮತ್ತು ಉರ್ದುಗೀತೆಗಳು ತಮಿಳಿನಲ್ಲಿ ಮುದ್ರಣವಾಗುವಷ್ಟು ಆಕೆ ಜನಪ್ರಿಯರಾದರು.  1911ರಲ್ಲಿ ಕಿಂಗ್ ಜಾರ್ಜ್ ಇಂದ ಆಂಮಂತ್ರಿತರಾಗಿ ದೆಹಲಿ ದರ್ಬಾರ್ ಹಾಲ್ನಲ್ಲಿ ಕಾರ್ಯಕ್ರಮ ನೀಡಿದರು.

ಗೌಹಾರ್ ಜಾನ್ 1928ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್  ಅವರ ಆಹ್ವಾನದ ಮೇರೆಗೆ ಮೈಸೂರಿಗೆ ಬಂದು ಆಗಸ್ಟ್ 1, 1928ರಂದು ಆಸ್ಥಾನ ಗಾಯಕಿ ಗೌರವ ಸ್ವೀಕರಿಸಿದರು. ಆದರೆ 1930ರ ಜನವರಿ 17ರಂದು ಮೈಸೂರಿನಲ್ಲಿ ನಿಧನರಾದರು.

ಹೆಸರಾಂತ ಚಾರಿತ್ರ್ಯಿಕ ಕಾದಂಬರಿಕಾರ
ವಿಕ್ರಂ ಸಂಪತ್  ಗೌಹಾರ್ ಜಾನ್ ಸಂಗೀತ ಸಾಧನೆಯ ಬಗ್ಗೆ ಸಂಶೋಧನಾತ್ಮಕ ಕೆಲಸ ಮಾಡಿದ್ದಾರೆ.  ಅವರ ಹರಸಾಹಸದ ಫಲವೇ 'ಮೈ ನೇಮ್ ಈಸ್ ಗೌಹಾರ್ ಜಾನ್!: ದಿ ಲೈಫ್ ಆ್ಯಂಡ್ ಟೈಮ್ಸ ಆಫ್ ಎ ಮ್ಯುಸಿಷಿಯನ್' ಕೃತಿ. 

ಗೌಹಾರ್ ಜಾನ್ ಪ್ರತಿ ಹಾಡಿನ ಕೊನೆಯಲ್ಲಿಯೂ ಅವರು ‘ಮೈ ನೇಮ್ ಈಸ್ ಗೌಹಾರ್ ಜಾನ್' ಎಂದು ಪ್ರಕಟಿಸುತ್ತಿದ್ದರು. ಹೀಗಾಗಿ ವಿಕ್ರಮ್ ಅದನ್ನೇ ಪುಸ್ತಕದ ಶೀರ್ಷಿಕೆಯಾಗಿ ಬಳಸಿದ್ದಾರೆ.

On the birth anniversary of great singer and dancer Gauhar Jaan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ