ಜಾರ್ಜ್ ಆರ್ವೆಲ್
ಜಾರ್ಜ್ ಆರ್ವೆಲ್
ಜಾರ್ಜ್ ಆರ್ವೆಲ್ ಭಾರತದಲ್ಲಿ ಜನಿಸಿದ ಪ್ರಸಿದ್ಧ ಕಾದಂಬರಿಕಾರ, ಪ್ರಬಂಧಕಾರ, ಪತ್ರಕರ್ತ ಮತ್ತು ವಿಮರ್ಶಕ. ಅವರ ಮೂಲ ಹೆಸರು ಎರಿಕ್ ಆರ್ಥರ್ ಬ್ಲೇರ್.
ಜಾರ್ಜ್ ಆರ್ವೆಲ್ ಬಂಗಾಲದ ಮೋತಿಹಾರಿ ಎಂಬಲ್ಲಿ 1903ರ ಜೂನ್ 25ರಂದು ಜನಿಸಿದರು. ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಇವರು ಬರ್ಮ ಪೋಲೀಸ್ ಪಡೆಯಲ್ಲಿದ್ದು (1922-27) ತಮ್ಮ ಅನುಭವಗಳನ್ನು ಬರ್ಮೀಸ್ ಡೇಸ್ ಎಂಬ ಪುಸ್ತಕದಲ್ಲಿ (1934) ವಿವರಿಸಿದ್ದಾರೆ. ಉಪಾಧ್ಯಾಯರಾಗಿ, ಪುಸ್ತಕದ ಅಂಗಡಿಯ ಕೆಲಸಗಾರರಾಗಿ, ಬಡತನದಲ್ಲಿ ಕಳೆದ ಕಾಲವನ್ನು ಡೌನ್ ಅಂಡ್ ಔಟ್ ಇನ್ ಪ್ಯಾರಿಸ್ ಅಂಡ್ ಲಂಡನ್ ಎಂಬ ಪುಸ್ತಕದಲ್ಲಿ (1933) ವರ್ಣಿಸಿದ್ದಾರೆ. 1936ರಲ್ಲಿ ಸ್ಪೇನಿನ ಅಂತರ್ಯುದ್ಧದಲ್ಲಿ ಗಾಯಗೊಂಡು ಹೋಮೇಜ್ ಟು ಕ್ಯಾಟಲೋನಿಯ ಎಂಬ ಪುಸ್ತಕ (1938) ಬರೆದರು. ಅವರು ಎರಡನೆಯ ಮಹಾಯುದ್ಧದಲ್ಲಿ ಬ್ರಿಟಿಷ್ ರೇಡಿಯೊ ಪ್ರಸಾರಕ್ಕಾಗಿ ಕೆಲಸ ಮಾಡಿದರು. ಅನಿಮಲ್ ಫಾರಂ ಎಂಬ ನಿರಂಕುಶಾಧಿಕಾರದ ವಿಡಂಬನೆಯ ಕಾದಂಬರಿ (1945) ಬರೆದರು. ಇದರಲ್ಲಿ ಪ್ರಾಣಿಗಳೆಲ್ಲ ಸಮಾನ; ಆದರೆ ಕೆಲವು ಬೇರೆಯವುಗಳಿ ಗಿಂತ ಹೆಚ್ಚು ಸಮಾನ ಎಂಬ ಅಭಿಪ್ರಾಯಗಳಿವೆ. ನೈನ್ಟೀನ್ ಎಯ್ಟಿಫೋರ್, ಇವರ ಮರಣಕ್ಕೆ ಸ್ವಲ್ಪ ಮುಂಚೆ ಪ್ರಕಟವಾಯಿತು. ಇದರಲ್ಲಿ ಜನರ ಮನೋವೃತ್ತಿ ನಿರಂಕುಶಾಧಿಕಾರಿಗಳಿಂದ ರೂಪಿಸಲ್ಪಟ್ಟು, ಜಗತ್ತನ್ನು ದುರಂತಕ್ಕೀಡುಮಾಡುವುದೆಂಬ ಕಾಲಭವಿಷ್ಯವನ್ನು ಚಿತ್ರಿಸಿದ್ದಾರೆ
ಕೀಪ್ ದಿ ಆಸ್ಪಿಡಿಸ್ಟ್ರ ಫ್ಲೈಯಿಂಗ್, ದಿ ರೋಡ್ ಟು ವಿಗನ್ ಪಿಯರ್, ಕಮಿಂಗ್ ಆಫ್ ಫಾರ್ ಏರ್ ಇವರ ಕಾದಂಬರಿಗಳಲ್ಲಿ ಸೇರಿವೆ.
ಇನ್ಸೈಡ್ ದಿ ವೇಲ್, ಷೂಟಿಂಗ್ ಆ್ಯನ್ ಎಲಿಫೆಂಟ್ ಮುಂತಾದವು ಪ್ರಬಂಧಗಳು.
ಜಾರ್ಜ್ ಆರ್ವೆಲ್ 1950ರ ಜನವರಿ 21ರಂದು ನಿಧನರಾದರು.
On the birth anniversary of novelist, essayist, journalist and critic George Orwell
ಕಾಮೆಂಟ್‌ಗಳು