ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೌಪರ್ಣಿಕಾ ಹೊಳ್ಳ


 ಸೌಪರ್ಣಿಕಾ ಹೊಳ್ಳ


ಸೌಪರ್ಣಿಕಾ ಹೊಳ್ಳ ನಮ್ಮ ನಡುವಿನ ಉತ್ಸಾಹಿ.  ಅವರ ಹುಟ್ಟಿದ ಹಬ್ಬ ಜುಲೈ 11.
 
ಸೌಪರ್ಣಿಕಾ ಹೊಳ್ಳ  ಅವರ ಮೂಲ ಊರು ಶಿರಸಿ. ಈಗ ಮುಂಬೈ ನಿವಾಸಿ. ಅವರದ್ದು ಪತ್ರಿಕೋದ್ಯಮ ಪದವಿ. ಕತೆ ಹೇಳೋದು ಮತ್ತು ಕೇಳೋದು ಅವರಿಗೆ ತುಂಬಾ ಇಷ್ಟ.  ಜೀವ ಮತ್ತು ಜೀವನದ ಮೇಲೆ ತುಂಬಾ ತುಂಬಾ ತುಂಬಾ ಪ್ರೀತಿ.
 
ಸೌಪರ್ಣಿಕಾ ಹೊಳ್ಳ ಅವರೊಂದಿಗೆ ಹಲವು ಅಂತರಾಷ್ಟ್ರೀಯ ಅನಿಮೇಶನ್‌ ಸಿನೆಮಾಗಳಿಗೆ ಕೆಲಸ ಮಾಡಿದ ಅನುಭವವಿದೆ.  ಅವರು ಹವ್ಯಾಸಿ ಗ್ರಾಫಿಕ್ಸ್ ಡಿಸೈನರ್ ಮತ್ತು ಬ್ಲಾಗರ್.‌ ನೀಲಾಂಜಲ (neelanjala.Wordpress.com) ಅವರದ್ದೇ ಬ್ಲಾಗ್.  ಇವರು ಹ್ಯಾಂಡ್‌ ಪಿಕ್‌ ಆರ್ಟ್ಸ್‌ ಮತ್ತು ಕ್ರಾಫ್ಟ್ಸ್‌ ವೆಬ್‌ ಸ್ಟೋರ್‌ ಆದ ಕ್ರಾಫ್ಟ ಖಜಾನಾ ಹಾಗೂ ವಿಶಿಷ್ಟ ಪರಿಕಲ್ಪನೆಯ ಸುನೀತಾ ಮಾರುಕಟ್ಟೆ ಇವೆರಡರ ಸ್ಥಾಪಕಿ ಮತ್ತು ಒಡತಿ.
 
ಪುಸ್ತಕ, ಸಿನೆಮಾ, ನಾಟಕ, ಆರ್ಟ್, ಕ್ರಾಫ್ಟ್, ಡೆಕೋರ್, ಗಾರ್ಡನಿಂಗ್, ಚರಿತ್ರೆ, ಫಿಲೋಸಫಿ, ತಿರುಗಾಟ, ಫೋಟೋಗ್ರಫಿ,.. ಹೀಂಗೆ ಅವರ  ಇಷ್ಟದ ಪಟ್ಟಿ  ತುಂಬಾ ತುಂಬಾ ತುಂಬಾ ದೊಡ್ಡದು. ಒಟ್ಟಿನಲ್ಲಿ ಯಾವುದರ ಎಗ್ಗಿಲ್ಲದೆ ಬದುಕೋಕೆ ಅವರಿಗೆ ಇಷ್ಟವಂತೆ.

ಹಾ ಸ್ವಲ್ಪ ಇರಿ.  ನಾ ಸೌಪರ್ಣಿಕಾ ಹೊಳ್ಳ ಅವರ  ಸಮಾಚಾರ ಎಲ್ಲಾ ಓದಿದ್ದು ಅವರೇ ಸ್ಥಾಪಿಸಿ, ಪ್ರಧಾನ ಸಂಪಾದಕಿಯಾಗಿ, ಪ್ರಕಟಣಾಕಾರರಾಗಿ ನಿರ್ವಹಿಸುತ್ತಿರುವ ಅಂತರಜಾಲ ಮಾಸಿಕ ಪತ್ರಿಕೆ Sunitaezine (www.sunitaezine.com) ಪತ್ರಿಕೆಯಲ್ಲಿ ಅವರೇ ಹೇಳಿರುವ ಕಿರು ಆತ್ಮಕಥೆಯಿಂದ.  ಅವರ ಸುನೀತಾ ಮಾರುಕಟ್ಟೆ ಮತ್ತು ಸುನೀತಾ ಮಾಸಿಕದ ಮುಖ್ಯ ಉದ್ದೇಶ ಮಹಿಳಾ ಆರ್ಥಿಕ ಸಬಲತೆ ಮತ್ತು ವಿಕಾಸ. 

ಉತ್ಸಾಹಿ ಸೌಪರ್ಣಿಕಾ ಹೊಳ್ಳ ಅವರ ಯೋಜನೆಗಳೆಲ್ಲ ಯಶಸ್ಸು ಕಾಣಲಿ. ಅವರ ಬದುಕು ಸುಂದರವಾಗಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.

Happy birthday Souparnika Holla 🌷🎁🎂🎈

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ