ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪರ್ವೀನ್ ಸುಲ್ತಾನ


 ಪರ್ವೀನ್ ಸುಲ್ತಾನ 


ಸಂಗೀತ ಕ್ಷೇತ್ರದಲ್ಲಿ ಮಹಾನ್ ಹೆಸರಾದ ಬೇಗಂ ಪರ್ವೀನ್ ಸುಲ್ತಾನ ಪಟಿಯಾಲ ಘರಾಣದ ಹಿಂದೂಸ್ಥಾನೀ ಶಾಸ್ತೀಯ ಸಂಗೀತದ ಇನಿಧ್ವನಿ.

ಪರ್ವೀನ್ ಸುಲ್ತಾನ, ಅಸ್ಸಾಂ ರಾಜ್ಯದ ನೋವ್ಗೊಂಗ್ ಪಟ್ಟಣದ, ದಚ್ಕಾಪತ್ತಿ ಎಂಬಲ್ಲಿ 1950ರ ಜುಲೈ 10ರಂದು ಜನಿಸಿದರು. ತಂದೆ ಸಂಗೀತ ವಿದ್ವಾಂಸರಾಗಿದ್ದ ಇಕ್ರಮುಲ್ ಮಾಜಿದ್. ತಾಯಿ ಮರೂಫಾ. 

ಪರ್ವೀನ್ ಮಿಶನ್ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ಇವರ ತಂದೆ ಇಕ್ರಮುಲ್ ಮಾಜಿದ್ ಇವರ ಮೊದಲ ಗುರು. ತಮ್ಮ ಅಜ್ಜ ಮೊಹಮ್ಮದ್ ನಜೀಫ್ ಖಾನ್ ಅವರಿಂದಲೂ ತರಬೇತಿ ಪಡೆದರು. ನಂತರ ಕೊಲ್ಕತ್ತಾಕ್ಕೆ ಬಂದು ಪಂಡಿತ್ ಚಿನ್ಮೊಯ್ ಲಾಹಿರಿಯ ಅವರಿಂದ ಮಾರ್ಗದರ್ಶನ ಪಡೆದರು. 1973ರಿಂದ ಉಸ್ತಾದ್ ಪಟಿಯಾಲ ಘರಾಣದ ಸಾಧಕರಾದ ದಿಲ್ಷಾದ್ ಖಾನ್ ಅವರ ಶಿಷ್ಯೆಯಾದರು. ಅವರನ್ನೇ ವಿವಾಹವಾದರು. ಇವರಿಗೆ ಒಬ್ಬ ಮಗಳಿದ್ದಾರೆ.

ಪರ್ವೀನ್ ಸುಲ್ತಾನರು ತಮ್ಮ 12ನೆಯ ವಯಸ್ಸಿನಿಂದಲೇ ಸಂಗೀತ ಕಚೇರಿಗಳನ್ನು ನೀಡಲು ಪ್ರಾರಂಭಿಸಿದರು. 1965ರಿಂದಲೇ ಇವರ ದ್ವನಿಮುದ್ರಿಕೆಗಳು ಹೊರಬರಲಾರಂಭಿಸಿದವು.  ವಿಶ್ವದಾದ್ಯಂತ ಪರ್ವೀನ್ ಸುಲ್ತಾನಾ ಅವರ ಸಂಗೀತ ಕಚೇರಿಗಳು ಸಂಗೀತ ರಸಿಕರನ್ನು ತಣಿಸುತ್ತ ಬಂದಿವೆ. ಅವರ ಅನೇಕ ಧ್ವನಿಮುದ್ರಿಕೆಗಳು ಎಲ್ಲ ಪರಸಿದ್ಧ ಸಂಸ್ಥೆಗಳಿಂದ ಹೊರಬಂದಿವೆ.

ಅಸ್ಸಾಮಿ ಚಲನಚಿತ್ರ ಮೊರಮ್ ತೃಷ್ಣದಿಂದ ಚಲನಚಿತ್ರಗಳಲ್ಲಿ ಹಾಡಲು ಆರಂಭಿಸಿದ ಪರ್ವೀನ್ ಸುಲ್ತಾನ ಅವರು ಗದಾರ್ , ಕುದ್ರತ್ , ದೋ ಬೂಂದ್ ಪಾನಿ,  ರಜಿಯಾ ಸುಲ್ತಾನ, ಅನ್ಮೋಲ್, ಪಾಕೀಜ, 1920 ಮುಂತಾದ ಹಿಂದಿ ಚಲನಚಿತ್ರಗಳಲ್ಲೂ ಅನೇಕ ಅಸ್ಸಾಮಿ ಚಿತ್ರ ಮತ್ತು ಬಂಗಾಳಿ ಚಿತ್ರಗಳಿಗೆ ಹಾಡಿದ್ದಾರೆ.

ಪರ್ವೀನ್ ಸುಲ್ತಾನಾ ಅವರಿಗೆ 1976ರಲ್ಲಿ ಪದ್ಮಶ್ರೀ ಪ್ರಶಸ್ತಿ, 1980ರಲ್ಲಿ ಗಂಧರ್ವ ಕಲಾನಿಧಿ, 1986ರಲ್ಲಿ ಅಸ್ಸಾಂ ಸರಕಾರದಿಂದ ಮಿಯಾ ತಾನ್ಸೇನ್ ಪ್ರಶಸ್ತಿ, 1981ರಲ್ಲಿ ಕುದ್ರತ್ ಚಿತ್ರದ "ಹಮೆ ತುಮ್ಸೆ ಪ್ಯಾರ್ ಕಿತನಾ" ಹಾಡಿಗಾಗಿ ಫಿಲಂಫೇರ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ, 1999ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಅಸ್ಸಾಂ ಸರಕಾರದಿಂದ ಶ್ರೀಮಂತ್ ಶಂಕರದೇವ್ ಪ್ರಶಸ್ತಿ, 2014ರಲ್ಲಿ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

On the birthday of Praveen Sultana 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ