ಎಸ್. ವಿ. ರಂಗರಾವ್
ಎಸ್. ವಿ. ರಂಗರಾವ್
ಎಸ್. ವಿ. ರಂಗರಾವ್ ಚಲನಚಿತ್ರರಂಗ ಕಂಡ ಮಹಾನ್ ನಟ. ಅವರು ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಸಹಾ ಕೆಲಸ ಮಾಡಿದ್ದರು. ಪಾತಾಳ ಭೈರವಿಯ ನೇಪಾಳ ಮಾಂತ್ರಿಕ, ಮಾಯಾ ಬಜಾರ್ ಚಿತ್ರದ ಘಟೋತ್ಕಚ, ಭೂಕೈಲಾಸದ ಮಾಯಾಸುರ, ನರ್ತನಶಾಲಾದ ಕೀಚಕ, ಪಾಂಡವ ವನನಾಸಮು ಚಿತ್ರದ ದುರ್ಯೋಧನ, ಮಹಾಕವಿ ಕಾಳಿದಾಸು ಚಿತ್ರದ ಭೋಜ, ಭಕ್ತ ಪ್ರಹ್ಲಾದ ಚಿತ್ರದ ಹಿರಣ್ಯಕಷಿಪು, ಸಂಪೂರ್ಣ ರಾಮಾಯಣದ ರಾವಣ ಮುಂತಾದ ಅಪ್ರತಿಮ ನಿರ್ವಹಣೆ ಅವರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವ ತಂದಿದ್ದವು.
ಎಸ್. ವಿ. ರಂಗರಾವ್ 1918ರ ಜುಲೈ 3ರಂದು ರಾಜಮಂಡ್ರಿ ಜಿಲ್ಲೆಯ ದೊವ್ಲೈಸ್ವರಮ್ ಎಂಬಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಅವರು ವಿಜ್ಞಾನದಲ್ಲಿ ಪದವಿ ಪಡೆದ ನಂತರದಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದರು.
ಎಸ್‍ವಿಆರ್ ಎಂದು ಖ್ಯಾತರಾಗಿದ್ದ ರಂಗರಾವ್ ಮೇಲೆ ಹೆಸರಿಸಿದ ಚಿತ್ರಗಳಲ್ಲದೆ, ತೆಲುಗು ಮತ್ತು ತಮಿಳು ಚಿತ್ರರಂಗದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ಹೆಸರಾಗಿದ್ದರು. ವಿಶ್ವ ನಟ ಚಕ್ರವರ್ತಿ ಎಂದು ಹೆಸರಾಗಿದ್ದ ಅವರ ಹೆಸರಿನಲ್ಲಿ ಆಂಧ್ರಪ್ರದೇಶದಲ್ಲಿ ಶ್ರೇಷ್ಠ ನಟನಾ ಪುರಸ್ಕಾರ ನೀಡಲಾಗುತ್ತಿದೆ.
ಎಸ್. ವಿ. ರಂಗರಾವ್ ಅವರಿಗೆ ಜಕಾರ್ತದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ, ಅಣ್ಣೈ, ಶಾರದಾ, ನಾನುಮ್ ಒರು ಪೆಣ್, ಕರ್ಪಗಮ್, ನರ್ತನಶಾಲಾ ಚಿತ್ರಗಳಲ್ಲಿನ ಶ್ರೇಷ್ಠ ಅಭಿನಯಕ್ಕೆ ರಾಷ್ಟ್ರಪತಿಗಳ ಪ್ರಶಸ್ತಿ , ಹಾಗೂ ಅಂಧ್ರಪ್ರದೇಶದ ಚಲನಚಿತ್ರ ಪ್ರಶಸ್ತಿ ಮತ್ತು ಫಿಲಂಫೇರ್ ಪ್ರಶಸ್ತಿಗಳು ಸಂದಿದ್ದವು.
ಎಸ್. ವಿ. ರಂಗರಾವ್ 1974ರ ಜುಲೈ 18ರಂದು ನಿಧನರಾದರು.
On the birth anniversary of great actor S. V. Ranga Rao
ಕಾಮೆಂಟ್‌ಗಳು