ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾತಂತ್ರ್ಯ ನೋಟ - 3


 ಕಾವಲಿಲ್ಲದ ಮನೆಯಲ್ಲಿ
ಸ್ವಾತಂತ್ರ್ಯ ನೋಟ - 3


ಭಾರತದ ಸ್ವಾತಂತ್ರ್ಯ ಸಂಗ್ರಾಮ ಸ್ವರಾಜ್ಯ ಸ್ಥಾಪನೆಗಾಗಿ, ಪರಕೀಯರ ದಬ್ಬಾಳಿಕೆ ಮತ್ತು ಆಡಳಿತದ ವಿರುದ್ಧ ಸ್ವಾತಂತ್ರ್ಯಪ್ರಿಯ ಭಾರತೀಯರು ನಡೆಸಿದ ಹೋರಾಟ. ಇದರ ಪ್ರಥಮ ಘಟ್ಟದಲ್ಲಿ ದೇಶೀಯ ರಾಜರೂ ದೇಶಪ್ರೇಮ ಸರದಾರರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಎರಡನೆಯ ಘಟ್ಟ ಅನೇಕ ಕ್ರಾಂತಿಕಾರಿಗಳ ಹೋರಾಟ ಹಾಗೂ ಕಾಂಗ್ರೆಸ್ ಸ್ಥಾಪನೆಯಿಂದ ಸ್ವಾತಂತ್ರ್ಯ ಗಳಿಕೆಯವರೆಗೆ ನಡೆದುದಾಗಿದೆ. 

ಭಾರತದಲ್ಲಿ ಸಮುದ್ರ ಮಾರ್ಗವಾಗಿ ಗುಡ್ ಹೋಪ್ ಭೂಶಿರವನ್ನು ಬಳಸಿ ಭಾರತಕ್ಕೆ ಬಂದಪ್ರಥಮ ಯೂರೋಪಿಯನ್ ವ್ಯಾಪಾರಿಗಳು ಪೋರ್ಚುಗೀಸರುಅವರಲ್ಲಿ ಮೊದಲಿಗರು ವಾಸ್ಕೋಡಗಾಮನ ನಾಯಕತ್ವದಲ್ಲಿ ನಾಲ್ಕು ಹಡಗುಗಳಲ್ಲಿ 1498 ಮೇ 20 ರಂದು ಬಂದು ಮಲಬಾರ್ ಪ್ರದೇಶದ ದೊರೆ ಜಾಮೊರಿನ್ನನ ಔದಾರ್ಯದಿಂದಾಗಿ ಕಲ್ಲಿಕೋಟೆಯ ಬಳಿಯಲ್ಲಿಭಾರತದ ನೆಲದ ಮೇಲೆ ಕಾಲಿಟ್ಟರುಅವರು ಭಾರತಕ್ಕೆ ಬಂದ ಕಾಲ ಅನುಕೂಲಕರವಾಗಿತ್ತುಉತ್ತರ ಭಾರತದಲ್ಲಿ ದೆಹಲಿಯ ಸುಲ್ತಾನರ ಆಳ್ವಿಕೆ ದುರ್ಬಲವಾಗಿತ್ತುದಕ್ಷಿಣದಲ್ಲಿ ಬಹುಮನಿರಾಜ್ಯಗಳ ಪ್ರಭಾವ ಪ್ರಾಬಲ್ಯಗಳು ಹೊಂದುತ್ತಿದ್ದುವುಭಾರತದಲ್ಲಿ ಹೇಳಿಕೊಳ್ಳುವಂಥ ಪ್ರಬಲರಾಜ್ಯ ಯಾವುದೂ ಇರಲಿಲ್ಲಸಮುದ್ರದ ಮೂಲಕ ಬಂದ ವಿದೇಶಿಯರನ್ನು ಎದುರಿಸಬಲ್ಲ ನೌಕಸಾಮರ್ಥ್ಯ ಯಾವ ರಾಜ್ಯಕ್ಕೂ ಇರಲಿಲ್ಲಪೋರ್ಚುಗೀಸರಿಗೆ ಅಡ್ಡಿಯಾಗಿದ್ದವರೆಂದರೆ ಅರಬ್ ವ್ಯಾಪಾರಿಗಳುಪಾಶ್ಚಾತ್ಯ ದೇಶಗಳೊಂದಿಗೆ ಭಾರತದ ವ್ಯಾಪಾರ ಅವರ ಹಿಡಿತದಲ್ಲಿತ್ತು1502ರಲ್ಲಿ ವ್ಯಾಸ್ಕೋಡಗಾಮ ಮತ್ತೆ ಭಾರತಕ್ಕೆ ಬಂದಅರಬ್ ವ್ಯಾಪಾರಿಗಳನ್ನು ದೂರ ಇಟ್ಟುಪೋರ್ಚುಗೀಸರಿಗೆ ವ್ಯಾಪಾರದ ಏಕಸ್ವಾಮ್ಯವನ್ನು ನೀಡಬೇಕೆಂಬುದು ಜಾಮೊರಿನ್ ದೊರೆಗೆಪೋರ್ಚುಗೀಸರ ಬೇಡಿಕೆಯಾಗಿತ್ತುದೊರೆ ಇದಕ್ಕೆ ಒಪ್ಪದ್ದರಿಂದ ಪೋರ್ಚುಗೀಸರೊಂದಿಗೆ ವಿರಸಬೆಳೆಯಿತುಆದರೆ ಭಾರತದೊಂದಿಗೆ ಪೋರ್ಚುಗೀಸರ ವ್ಯಾಪಾರವೂ ಬೆಳೆಯುತ್ತಿತ್ತು. 1510ಅಂತ್ಯದಲ್ಲಿ ಗೋವೆ ಸಂಪೂರ್ಣವಾಗಿ ಅಲ್ಬುಕರ್ಕನ  ವಶವಾಗಿಬಿಟ್ಟಿತುಹಿಂದೆ ವಿಜಯನಗರದಅರಸರ ಅಧೀನದಲ್ಲಿದ್ದು ಬಹುಮನಿ ಸುಲ್ತಾನನ ವಶಕ್ಕೆ ಹೋಗಿದ್ದ ಗೋವೆಯನ್ನು ಮತ್ತೆಗೆದ್ದುಕೊಳ್ಳಬೇಕೆಂದು ವಿಜಯನಗರ ದೊರೆ ಕೃಷ್ಣದೇವರಾಯ ಯೋಚಿಸಿದಅಷ್ಟರಲ್ಲಿಪೋರ್ಚುಗೀಸರು ಇದನ್ನು ಆಕ್ರಮಿಸಿಕೊಂಡರಾದ್ದರಿಂದ ಕೃಷ್ಣದೇವರಾಯನ ಉದ್ದೇಶ ಫಲಿಸಲಿಲ್ಲಆದರೂ ಅವನು ಪೋರ್ಚುಗೀಸರ ವಿರೋಧ ಕಟ್ಟಿಕೊಳ್ಳಲಿಲ್ಲಕೃಷ್ಣದೇವರಾಯನ ದಂಡಯಾತ್ರೆಗಳಿಗೆ ಪೋರ್ಚುಗೀಸರಿಂದ ಸಾಮಾನು ಸರಂಜಾಮುಗಳ ರೂಪದಲ್ಲಿ ನೆರವುಅವಶ್ಯವಾಗಿತ್ತುಆದ್ದರಿಂದ ಅವರೊಡನೆ ಸಖ್ಯ ಬೆಳೆಸಿದಗೋವೆಯಲ್ಲಿ ಪೋರ್ಚುಗೀಸರುನೆಲೆಯೂರಲು ಇದು ಸಹಾಯಕವಾಯಿತು.


ಪೋರ್ಚುಗೀಸರುಫ್ರೆಂಚರುಡಚ್ಚರು ಮತ್ತು ಇಂಗ್ಲಿಷರು ಒಬ್ಬರಿಗೊಬ್ಬರು ಸ್ಪರ್ಧಿಸುತ್ತ  ಹೊಡೆದಾಡುತ್ತಒಂದಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತ ಭಾರತೀಯ ದುರ್ಬಲ ರಾಜರುಗಳಮುಂದೆ ತಮ್ಮ ಪ್ರಭುತ್ವ ಸಾಧಿಸಿದರು


17ನೆಯ ಶತಮಾನದಲ್ಲಿ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ತಮ್ಮ ವ್ಯಾಪಾರ ಮಳಿಗೆಗಳ ಭದ್ರತೆಗಾಗಿ ಕೋಟೆಕೊತ್ತಲ ಕಟ್ಟಿಕೊಂಡು ರಕ್ಷಣೆಗಾಗಿ ಸೇನೆ ಇಟ್ಟುಕೊಂಡರು. ಹಾಗೇ ತಮ್ಮ ಉಚ್ಚಮಟ್ಟದ ಯುದ್ಧತಂತ್ರದಿಂದ ಇಲ್ಲಿಯ ರಾಜರ ಬೃಹತ್‍ಗಾತ್ರದ ಸೈನ್ಯಗಳನ್ನು ತಾವು ಗೆಲ್ಲಬಲ್ಲೆವೆಂದು ಮನಗಂಡರು. ಆರ್ಕಾಟಿನ ಉತ್ತರಾಧಿಕಾರಕ್ಕೆ ನಡೆದ 1751-54ರ ಕರ್ನಾಟಕ ಯುದ್ಧಗಳಲ್ಲಿ ಮೇಲುಗೈ ಪಡೆದು ತಮಿಳುನಾಡಿನಲ್ಲಿ ನೆಲೆಪಡೆದರು. ಪ್ಲಾಸಿಕದನ (1757) ಗೆದ್ದು ಬಂಗಾಳ, ಬಿಹಾರ, ಒರಿಸ್ಸಾ ಸ್ವಾಧೀನ ಮಾಡಿಕೊಂಡರು. ಸಹಾಯಕ ಸೈನ್ಯಪದ್ಧತಿಯ ಜಾಲದಿಂದ ವೆಲ್ಲೆಸ್ಲಿ ನಿಜಾಮನಂಥ ರಾಜರನ್ನು ಬ್ರಿಟಿಷರ ಆಶ್ರಿತರನ್ನಾಗಿ ಮಾಡಿದ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಟಿಪ್ಪುವನ್ನು ಕೊಂದು (1799) ದಕ್ಷಿಣ ಭಾರತದ ಅಧಿಕ ಭಾಗದ ಮೇಲೆ ಸ್ವಾಮ್ಯ ಪಡೆದರು. 1801ರಲ್ಲಿ ಆರ್ಕಾಟು ನವಾಬರಿಗೆ ಪಿಂಚಣಿ ನೀಡಿ ರಾಜ್ಯವನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡರು. ಮುಂದಿನ ಎರಡು ಮರಾಠ ಯುದ್ಧಗಳಲ್ಲಿ (1803-04 ಮತ್ತು 1818) ಮರಾಠರನ್ನು ಜಯಿಸಿದರು. ಪಂಜಾಬ್ ಕೂಡ ಸಿಖ್ಖರ ಸೋಲಿನಿಂದ (1949) ಅವರ ವಶವಾಯಿತು. ಈ ಬಗೆಯಲ್ಲಿ ಬ್ರಿಟಿಷರು ಭಾರತದಲ್ಲಿ ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳುತ್ತ ಹೋದಂತೆ ಅದಕ್ಕೆ ಭಾರತೀಯರು ಪ್ರತಿಭಟನೆ ತೋರಿ ಹೋರಾಟ ನಡೆಸುತ್ತಲೇ ಇದ್ದರು.

18ನೆಯ ಶತಮಾನದ ಕೊನೆಗೆ ಬಂಗಾಳದಲ್ಲಿ ಬ್ರಿಟಿಷರ ವಿರುದ್ಧ ಸಂನ್ಯಾಸಿಗಳು ಬಂಡಾಯವೆದ್ದರು. 1780-81ರಲ್ಲಿ ಕಾಶಿಯ ಜೈತ್‍ಸಿಂಗನ ಸೈನಿಕರು ಬ್ರಿಟಿಷರ ವಿರುದ್ಧ ಬಂಡಾಯ ಹೂಡಿದರು. 1781-82ರಲ್ಲಿ ಸಂತಾಲ್ ಪರಗಣದ ರಾಣಿ ಸರ್ವೇಶ್ವರಿ ಸುತ್ತಲ ಗುಡ್ಡಗಾಡು ಜನರ ನೆರವಿನಿಂದ ಬಂಡೆದ್ದಳು. ಅವದಾದ (ಅಯೋಧ್ಯೆ) ವಜೀರ್ ಆಲಿ ಗಯಾ ಜಿಲ್ಲೆಯ ಟಿಕಾರಿ ಎಂಬ ಊರಿನ ಮಿತ್ರಜಿತಸಿಂಗನ ನೆರವಿನಿಂದ ದಂಗೆ ಹೂಡಿದ್ದ. ತರಾಯಿ ಪ್ರದೇಶದಲ್ಲಿ (ಖಾರಾಪುರ್ ಭಾಗಲಪುರ ಇತ್ಯಾದಿ) ಘಟ್ಟವಾಲದ ಜಗನ್ನಾಥದೇವ ಎಂಬವನ ನೇತೃತ್ವದಲ್ಲಿ 1773ರಿಂದ ಮೂರು ಸಾರಿ ಬಂಡಾಯ ನಡೆದಿತ್ತು. ಈ ಬಂಡಾಯ 1803ರ ತನಕ ಸಾಗಿತ್ತು. ಬಂಗಾಳದ ಚೌರರೆಂಬ ಜನ ಛೋಟಾನಾಗಪುರ ಮತ್ತು ಮಾನಪುರ ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧ 1767ರಲ್ಲೇ ಆರಂಭಿಸಿದ ಪ್ರತಿಭಟನೆ 1799ರಲ್ಲಿ ಉಗ್ರವಾಯಿತು.

ದಕ್ಷಿಣ ಭಾರತದ ಬಂಡಾಯವೆಂದು (1799-1801) ಹೆಸರಾದ ಬಂಡಾಯ ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳನ್ನು ವ್ಯಾಪಿಸಿತ್ತು. ರಾಜ ವಂಶೀಯರು, ಜಮೀನ್ದಾರರು ಹಾಗೂ ಜನಸಾಮಾನ್ಯರು ಇದರಲ್ಲಿ ಪಾಲುಗೊಂಡಿದ್ದರು. ರಾಮನಾಡು ಜಿಲ್ಲೆಯ ಶಿವಗಂಗೆಯೆಂಬ ಸಂಸ್ಥಾನದ ಮಂತ್ರಿಯಾಗಿದ್ದ ಮರುದುಪಾಂಡ್ಯನ್ ತಮಿಳುನಾಡಿನ ಬಂಡಾಯಗಳನ್ನು ಸಂಘಟಿಸಿದ. ರಾಮನಾಡು, ತಿನ್ನವೆಲ್ಲಿ, ದಿಂಡಿಗಲ್ ಮತ್ತು ಕೊಯಮತ್ತೂರು ಈ ನಾಲ್ಕು ಗುಂಪುಗಳಲ್ಲಿ ಬಂಡಾಯದ ಸಂಘಟನೆಯಾಗಿತ್ತು. ರಾಮನಾಡು ರಾಜ್ಯದ ಸೇತುಪತಿಯ ಮಂತ್ರಿ ಮರುದುಪಾಂಡ್ಯನ್ 1799 ಮಾರ್ಚ್‍ನಲ್ಲಿ ಈ ಬಂಡಾಯ ಆರಂಭಿಸಿದ. ಆದರೆ ಇದನ್ನು ಹತ್ತಿಕ್ಕಲಾಯಿತು. ಕೇವಲ ಸಂಪತ್ತನ್ನು ಸುಲಿಯುವುದಕ್ಕಿಂತ ಹೆಚ್ಚಿನದೇನೋ ಈ ಚಳವಳಿಯ ಹಿನ್ನೆಲೆಯಲ್ಲಿದೆ ಎಂದು ಅಂದಿನ ಜಿಲ್ಲಾಧಿಕಾರಿ ಹೇಳಿದ್ದ. 

ತಿನ್ನವೆಲ್ಲಿ ಜಿಲ್ಲೆಯ ವೀರಪಾಂಡ್ಯ ಕಟ್ಟಬೊಮ್ಮನ್ 1799 ಜೂನ್‍ನಲ್ಲಿ ಅನೇಕ ನೆರೆಯ ಪಾಳಯಗಾರರ ನೆರವಿನಿಂದ ಬಂಡೆದ್ದ. ಮೈಸೂರು ಯುದ್ಧ ಮುಗಿದು ಬ್ರಿಟಿಷ್ ಸೈನ್ಯ ಮರಳಿದಾಗ ಸೆಪ್ಟೆಂಬರ್‍ನಲ್ಲಿ ಕಟ್ಟಬೊಮ್ಮನ್ ಬಂಧಿತನಾಗಿ ಅಕ್ಟೋಬರ್ 17ಕ್ಕೆ ಪಾಶಿಗೇರಿಸಲ್ಪಟ್ಟ. ದಿಂಡಿಗಲ್ ಸಮೀಪದ ವಿರೂಪಾಕ್ಷಿಯ ಪಾಳೆಯಗಾರ ಗೋಪಾಲನಾಯಕನೂ ಇದೇ ಕಾಲಕ್ಕೆ ಬಂಡೆದ್ದು ಟಿಪ್ಪುವನ್ನು ಸಂಪರ್ಕಿಸಿದ್ದ. ಮೈಸೂರು ಯುದ್ಧ ನಡೆದಾಗ ಕಂಪನಿಗೆ ಸೇರಿದ ಅನೇಕ ಪ್ರದೇಶಗಳನ್ನು ಗೆದ್ದುಕೊಂಡ. ಆದರೆ ಬ್ರಿಟಿಷರ ಸೇನೆ ಇವನನ್ನು ಸೋಲಿಸಿತು. 

1799ರಲ್ಲಿ ಈ ಉತ್ಥಾನಗಳೆಲ್ಲ ತಣ್ಣಗಾದರೂ ಕರ್ನಾಟಕದಲ್ಲಿ 1800ರಲ್ಲಿ ದೋಂಡ್‍ಜಿವಾಘ ಮತ್ತು ಬಲಂನ ಕೃಷ್ಣಪ್ಪನಾಯಕ ಬಂಡೆದ್ದಾಗ ಮರುದುಪಾಂಡ್ಯನ್ ಮತ್ತೆ ತಲೆಯೆತ್ತಿದ. ಫ್ರಾನ್ಸಿನ ಕ್ರಾಂತಿಕಾರಿಗಳು ಆಗ ಮೇಲ್ಗೈ ಪಡೆದು ಇವರಿಗೆ ಪ್ರೋತ್ಸಾಹಕರ ಸಂದೇಶ ಕಳುಹಿಸುತ್ತಿದ್ದರು. ಈರೋಡ ಭಾಗದ ಚಿನ್ನಂಗೌಡ ಧೋಂಡ್‍ಜಿ ವಾಘನ ಜೊತೆ ಕರ್ನಾಟಕಕ್ಕೆ ಬಂದು ಮಾತುಕತೆ ನಡೆಸಿದ. ವಾಘ ಮತ್ತು ಬಲಂನ (ಹಾಸನ ಜಿಲ್ಲೆ, ಮಂಜರಾಬಾದ್) ನಾಯಕ ಇವರಿಬ್ಬರೂ ವಿರೂಪಾಕ್ಷಿಯ ಗೋಪಾಲನಾಯಕನ ಮೂಲಕ ದಿಂಡಿಗಲ್ ಗುಂಪಿನವರೊಡನೆ ಸಂಪರ್ಕ ಸಾಧಿಸಿದ್ದರು. ಇದೇ ರೀತಿ ವಾಢ್ ಕೇರಳದ ಪಲಸ್ಸಿಯ ಅರಸು ಕೇರಳವರ್ಮನೊಡನೆ ಸಂಬಂಧವಿರಿಸಿಕೊಂಡಿದ್ದ. ಕೇರಳವರ್ಮ ಕೊಯಮತ್ತೂರು ಗುಂಪಿನವರ ಜೊತೆ ಸಂಪರ್ಕವಿರಿಸಿಕೊಂಡಿದ್ದ. ಪಾಳಯಗಾರರಷ್ಟೇ ರೈತರೂ ಗುಡ್ಡಗಾಡು ಜನರೂ ಇವರ ಜೊತೆ ಸೇರಿಕೊಂಡರು. 1799ರ ಕೊನೆಯಿಂದ 1801ರ ತನಕ ಈ ಬಂಡಾಯ ಸಾಗಿತ್ತು. ರಾಮನಾಡು, ತೂತುಕುಡಿ, ತಂಜಾವೂರು, ಕೊಯಮತ್ತೂರು, ಈರೋಡು, ಕೇರಳದ ವೈನಾಡು, ಕರ್ನಾಟಕದ ಸಕಲೇಶಪುರ, ಜಮಾಲಾಬಾದ್, ಬಂಟ್ವಾಳ, ಸೋಂದಾ, ಶಿಕಾರಿಪುರ, ಗದಗು, ಡಂಬಳ, ಆನೆಗೊಂದಿ ಹಾಗೂ ರಾಯಚೂರು ಪ್ರದೇಶಗಳಲ್ಲಿ ಈ ಬಂಡಾಯದ ಉತ್ಥಾನಗಳು ಕಾಣಿಸಿದವು. 1801 ನವೆಂಬರ್ ಹೊತ್ತಿಗೆ ಈ ಹೋರಾಟ ತಣ್ಣಗಾಯಿತು. 1800 ಏಪ್ರಿಲ್‍ನಿಂದ ಸೆಪ್ಟೆಂಬರ್ ತನಕ ವಾಘನ ಹೊರಾಟ ಸಾಗಿತಾದರೂ ಸೆಪ್ಟೆಂಬರ್ 10ಕ್ಕೆ ಆತ ರಾಯಚೂರು ಜಿಲ್ಲಾ ಕೋಣಗಲ್‍ನಲ್ಲಿ ಹೋರಾಡುತ್ತ ಮೃತನಾದ. ಬಲಂ ನಾಯಕನ ವಶವಿದ್ದ ಅರಕೆರೆ ಕೋಟೆ 1802 ಜನವರಿಯಲ್ಲಿ ಬ್ರಿಟಿಷರ ವಶವಾಗಿ ಫೆಬ್ರವರಿಯಲ್ಲಿ ಕೃಷ್ಣಪ್ಪನಾಯಕ ಸೆರೆಸಿಕ್ಕು ಕೊಲ್ಲಲ್ಪಟ್ಟ. ಕೇರಳದಲ್ಲಿ ಕೇರಳವರ್ಮನ ಬಂಡಾಯ ಮತ್ತೂ ಮುಂದುವರಿಯಿತು. 1804 ನವೆಂಬರ್‍ನಲ್ಲಿ ಪುಲ್ಪಲ್ಲಿಯಲ್ಲಿ ಆತ ಹೋರಾಡುತ್ತ ಮಡಿದ. 

(ನಾಳೆ ಮತ್ತಷ್ಟು)


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ