ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಬ್ರಾಹಿಂ ಖಾದರ್


 ಇಬ್ರಾಹಿಂ ಖಾದರ್


ನಾನು ಫೇಸ್ಬುಕ್ಕಿಗೆ ಹೆಚ್ಚು ವಾಲಿದ್ದು ಇಲ್ಲಿ ಕನ್ನಡ ಬಳಸಬಹುದು, ಇಲ್ಲಿ ಕನ್ನಡ ಗೆಳೆಯರ ಬಳಗ ಇದೆ ಎಂದು ಗೊತ್ತಾದಾಗ. ಫೇಸ್ಬುಕ್ ಕನ್ನಡ ಗೆಳೆಯರ ಬಳಗಕ್ಕೆ ಬಂದಾಗ, ಗುರುತು ಪರಿಚಯ ಇಲ್ಲದಿದ್ದರೂ ಹರಟಲು ದೊರೆತ ಮೊದಲ ವ್ಯಕ್ತಿ ಇಬ್ರಾಹಿಂ ಖಾದರ್. 

ಸೆಪ್ಟೆಂಬರ್ 30 ಇಬ್ರಾಹಿಂ ಖಾದರ್ ಅವರ ಜನ್ಮದಿನ.  ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಜಯಪುರ ಮತ್ತು ಶೃಂಗೇರಿಗಳಲ್ಲಿ ಓದು ನಡೆಸಿದ ಇಬ್ರಾಹಿಂ ಖಾದರ್  ಅವರು ಸೌದಿ ಅರೇಬಿಯಾದ ದಮ್ಮಾಮ್ ಅಲ್ಲಿ ಉದ್ಯೋಗಿಯಾಗಿ ಕುಟುಂಬದೊಂದಿಗಿದ್ದರು.

ಕನ್ನಡವನ್ನು ಅತ್ಯಂತ ಆಪ್ತವಾಗಿ ಪ್ರೀತಿಯಿಂದ ಬಳಸುತ್ತಿದ್ದ ಸಜ್ಜನ ಭ್ರಾತೃತ್ವ ಭಾವದ ಇಬ್ರಾಹಿಂ, ನನಗೆ ಫೇಸ್ಬುಕ್ ಮೂಲಕ ಕನ್ನಡವನ್ನು ಮತ್ತಷ್ಟು ಪ್ರೀತಿಸುವ ಬಗ್ಗೆ ಪ್ರೇರಣೆ ನೀಡಿದವರಲ್ಲಿ ಪ್ರಮುಖರು.  ವಿದೇಶದಲ್ಲಿದ್ದರೂ ಕನ್ನಡ ಸಂಸ್ಕೃತಿಯನ್ನು ಅಪಾರವಾಗಿ ಮೆಚ್ಚಿ ಎಲ್ಲರೊಂದಿಗೆ ಸದಾ ಒಂದಾಗಿದ್ದ ಇಬ್ರಾಹಿಂ ಅವರ ಸರ್ವ ಸಮಾನತಾ ಮನೋಭಾವ ನನಗೆ ಸದಾ ಅಚ್ಚುಮೆಚ್ಚಾಗಿತ್ತು.

ಫೇಸ್ಬುಕ್ಕಿನಲ್ಲಿ ತುಂಟತನದಿಂದ ಬರೆಯುತ್ತಿದ್ದ ಇಬ್ರಾಹಿಂ ಖಾದರ್ ಅವರು ಎದುರಿಗೆ ಸಿಕ್ಕಾಗ ಅತ್ಯಂತ ಕಡಿಮೆ ಮಾತಾಡುವ ಸಂಕೋಚ ಪ್ರವೃತ್ತಿಯ ವ್ಯಕ್ತಿ ಎಂಬ ಭಾವ ಮೂಡಿತು.  ಅವರಲ್ಲಿ, ಪ್ರತಿಭೆ, ವಿನಯ, ಸ್ನೇಹಪರತೆ ಎಲ್ಲವೂ ಹಿತಮಿತವಾಗಿ ಬೆರೆತಿತ್ತು.  

ಆತ್ಮೀಯರಾದ ಇಬ್ರಾಹಿಂ 2024ರ ಏಪ್ರಿಲ್ 13ರಂದು ಹೃದಯಾಘಾತದಿಂದ ನಿಧನರಾಗಿದ್ದು ಇಂದೂ ಊಹಿಸಿಕೊಳ್ಳಲಾಗದ ಘಟನೆ.  ಅವರ ನೆನಪು ಅಮರ. 

my first friend in Facebook Ibrahim Khadar 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ