ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರ'ಸಿದ್ಧಿ' ಭೂತ


 ಪ್ರ'ಸಿದ್ಧಿ' ಭೂತ
Weight of Pride


ಜನ ಒಮ್ಮೆ ಪ್ರಸಿದ್ಧಿ ಪಡೆದ ಮೇಲೆ, ತಮಗೆ  ಪ್ರಸಿದ್ಧಿ ತಂದುಕೊಟ್ಟ ತಮ್ಮ ಕಾಯಕದಲ್ಲಿ  ಹೆಚ್ಚು ಆಸ್ಥೆ ವಹಿಸದೆ, ತಮಗಿರುವ ಪ್ರಸಿದ್ಧಿಯನ್ನೇ ಶಾಶ್ವತವೆಂದು ಭ್ರಮಿಸಿ, ಆ ಪ್ರಸಿದ್ಧಿಯನ್ನೇ ಬಂಡವಾಳವಾಗಿಸಿಕೊಳ್ಳುವುದರ ಮೂಲಕ ತಾವು ದೊಡ್ಡವರಾಗಿ ಬಿಟ್ಟಿದ್ದೇವೆ ಎಂಬ ಪ್ರಜ್ಞೆಯಲ್ಲಿ ತೇಲತೊಡಗುತ್ತಾರೆ.  ಇದರಿಂದ ಅವರಿಗೆ ಮೊದಲು ತಮ್ಮ ಕಾಯಕದಲ್ಲಿದ್ದ  ಏಕಾಗ್ರತೆ ನಶಿಸಿ,  ಜೀವನದಲ್ಲಿನ ಶಿಸ್ತು ಸಂಯಮಗಳು ಕ್ಷಯಿಸಿ, ಆತ್ಮರಹಿತ ಬೊಂಬೆಯಂತಾಗಿ ಅಧಃಪತನದತ್ತ ಧುಮ್ಮಿಕ್ಕತೊಡಗುತ್ತಾರೆ.  ಈ ಮಾತನ್ನು ಮಹಾನ್ ಪ್ರಸಿದ್ಧರು ಮಾತ್ರವೇ ಅಲ್ಲದೆ ಸಾಮಾನ್ಯರಾದ ನಾವು ಕೂಡಾ ನೆನಪಿಡುವುದು ತುಂಬಾ ಅಗತ್ಯ.  ಕಾರಣ ಈ ಫೇಸ್ಬುಕ್ ಅಂತಹ ಸೋಷಿಯಲ್
ನೆಟ್ವರ್ಕ್ ಮೀಡಿಯಾಗಳು ಎಲ್ಲರಲ್ಲೂ ಪ್ರಸಿದ್ಧಿಯ ಹುಚ್ಚಿನ ಕಿಚ್ಚನ್ನು ಹಬ್ಬಿಸಿಬಿಟ್ಟಿವೆ.

Once on attaining fame, the famous people instead of focusing more on their efforts that brought them fame, by  carrying an illusion  that their fame itself is permanent,  start capitalizing their fame,  instead of progressing on their famous effort.   This leads to lack of focus on their effort which ultimately drives towards lack of discipline and grace in personal life.  Hence, they soon end up becoming soulless puppets.  I feel this need to be remembered not only by the famous ones, but also by the ordinary ones like us because, these social network medias like facebook are fueling false pride of popularity in every being.

(ಎಂದೋ ಅನಿಸಿ ಗೀಚಿದ್ದು, ಆದರೆ ಪದೇ ಪದೇ ನೆನಪಿಗೆ ಬರುವಂತದ್ದು)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ