ಎಲ್. ಡಿ. ಬಾರ್ನೆಟ್
ಎಲ್. ಡಿ. ಬಾರ್ನೆಟ್
ಎಲ್. ಡಿ. ಬಾರ್ನೆಟ್ ಪ್ರಾಚೀನ ಭಾರತ ಕುರಿತ ಇತಿಹಾಸಕಾರರು ಮತ್ತು ಲಿಪಿಶಾಸ್ತ್ರಜ್ಞರು.
ಬಾರ್ನೆಟ್ 1872ರ ಅಕ್ಟೋಬರ್ 21ರಂದು ಲಿವರ್ಪೂಲ್ನಲ್ಲಿ ಜನಿಸಿದರು. ಲಿವರ್ಪೂಲ್, ಮ್ಯಾಂಚೆಸ್ಟರ್, ಕೇಂಬ್ರಿಜ್ಗಳಲ್ಲಿ ಅಧ್ಯಯನ ಮಾಡಿದರು. ಎರಡು ವರ್ಷಗಳ ಕಾಲ ಜರ್ಮನಿಯ ಹಾಲೆ ಹಾಗೂ ಬರ್ಲಿನ್ ನಗರಗಳಲ್ಲಿ ಅಭ್ಯಾಸ ಮಾಡಿದರು.
ಬಾರ್ನೆಟ್ 1899ರಿಂದ ಸುಮಾರು 60 ವರ್ಷಗಳ ಕಾಲ ಪ್ರಾಚೀನ ಭಾರತದ ಇತಿಹಾಸ, ಸಂಸ್ಕೃತ ಮುಂತಾದ ವಿಷಯಗಳನ್ನು ಕುರಿತು ಅಧ್ಯಾಪನ ಹಾಗೂ ಅಧ್ಯಯನದ ಕೆಲಸದಲ್ಲಿ ನಿರತರಾಗಿದ್ದರು. ಬ್ರಿಟಿಷ್ ಸಂಗ್ರಹಾಲಯದ ಮೊಟ್ಟಮೊದಲನೆಯ ಮುಖ್ಯ ಅಧಿಕಾರಿಯಾಗಿದ್ದ ಇವರು ಭಾರತೀಯ ಪ್ರಕಾಶಿತ ಹಾಗೂ ಅಪ್ರಕಾಶಿತ ಗ್ರಂಥಗಳ ಸೂಚಿಯನ್ನು ರಚಿಸಿ ಪ್ರಕಟಿಸಿದರು (1908). ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್ ಸಂಸ್ಥೆ ಇವರನ್ನು ಭಾರತದ ಇತಿಹಾಸ, ಸಂಸ್ಕೃತ ಭಾಷೆ, ಪ್ರಾಚೀನ ಶಾಸನಗಳು ಈ ವಿಷಯಗಳಲ್ಲಿ ಆಚಾರ್ಯರಾಗಿ ನೇಮಿಸಿತು. ಅದೇ ಹುದ್ದೆಯಲ್ಲಿದ್ದು ನಿವೃತ್ತರಾದ ಇವರಿಂದ ಅನೇಕ ವಿದ್ಯಾರ್ಥಿಗಳು ಈ ವಿಷಯಗಳಲ್ಲಿ ತಜ್ಞರಾದರು. ಹೊಯ್ಸಳರ ಇತಿಹಾಸವನ್ನು ನಿರೂಪಿಸಿರುವ ಡಾ|| ಜೆ.ಡಿ.ಎಂ. ಡೆರೆಟ್ ಇವರ ಪೈಕಿ ಒಬ್ಬರು.
ಬ್ರಿಟಿಷ್ ಸಂಗ್ರಹಾಲಯದ ಸಂಸ್ಥೆ 1956ರಲ್ಲಿ ತನ್ನ ವಜ್ರ ಮಹೋತ್ಸವದ ಜೊತೆಗೆ ಬಾರ್ನೆಟ್ರ ಷಷ್ಟ್ಯಬ್ದಿಯನ್ನೂ ಆಚರಿಸಿತು. ಸಂಸ್ಕೃತ, ಪಾಲಿ ಮತ್ತು ಪ್ರಾಕೃತ ಗ್ರಂಥಸೂಚಿ, ಆ್ಯಂಟಿಕ್ವಿಟೀಸ್ ಆಫ್ ಇಂಡಿಯ ಮತ್ತು ಎಪಿಗ್ರಾಫಿಯ ಇಂಡಿಕದಲ್ಲಿ ಹಲವಾರು ಲೇಖನಗಳು- ಇವು ಬಾರ್ನೆಟ್ಟರ ಮುಖ್ಯ ಕೊಡುಗೆಗಳು.
ಬಾರ್ನೆಟ್ ಹಳಗನ್ನಡ ಪಂಡಿತರೂ ಆಗಿದ್ದರು. ಕನ್ನಡಕ್ಕೆ ಸಂಬಂಧಿಸಿದ ಇವರ ಮೊದಲ ಲೇಖನವೆಂದರೆ ಡಾ|| ಫ್ಲೀಟರ ನೆರವಿನಿಂದ ಪ್ರಕಟಿಸಿದ ಗುಲ್ಬರ್ಗ ಜಿಲ್ಲೆಯ ಏವೂರ ಶಾಸನಗಳು. ಇವು ಹೈಹಯ ವಂಶಕ್ಕೆ ಸಂಬಂಧಿಸಿದವು.
ಬಾರ್ನೆಟ್ 1960 ಜನವರಿ 28 ರಂದು ಲಂಡನ್ನಿನಲ್ಲಿ ನಿಧನರಾದರು.
On the birth anniversary of great oriented Lionel David Barnett
Great oriented ಅಲ್ಲ, great orientalist ಎಂದು ಇರಬೇಕಲ್ಲವೆ?
ಪ್ರತ್ಯುತ್ತರಅಳಿಸಿ