ಶಂಕರ ರಾವ್
ಶಂಕರ ರಾವ್ ನಮನ
ಇಂದು ಅತ್ಯುತ್ತಮ ಹಿರಿಯ ಕಲಾವಿದರಲ್ಲೊಬ್ಬರಾಗಿದ್ದ ಶಂಕರ ರಾವ್ ಅವರ ಸಂಸ್ಮರಣೆ ದಿನ. ಹಾಸ್ಯ ಪಾತ್ರಗಳಲ್ಲಿ ತಾವು ನಗದೆ ತಮ್ಮನ್ನು ಕಾಣುವವರಲ್ಲಿ ನಗೆ ತರುತ್ತಿದ್ದ ಅಪರೂಪದ ಪ್ರತಿಭಾವಂತರಾದ ಇವರ ಅಭಿನಯ ನನಗೆ ಅಚ್ಚುಮೆಚ್ಚಾಗಿತ್ತು.
ಶಂಕರ ರಾವ್ ಶಾಲಾ ದಿನಗಳಲ್ಲೇ ರಂಗಭೂಮಿಯತ್ತ ಆಕರ್ಷಿತರಾಗಿದ್ದರು. ತಮ್ಮದೇ ಆದ 'ಗೆಳೆಯರ ಬಳಗ' ಎಂಬ ರಂಗತಂಡವನ್ನು ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಸೀಮನ್ಸ್ ಆ್ಯಂಡ್ ಸೀಮನ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಲೇ ಕಲಾಕುಂಜ, ನಟರಂಗ ತಂಡಗಳ ಜೊತೆ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದರು.
ಮಾಯಾ ಮೃಗ, ಪಾಪ ಪಾಂಡು, ಸಿಲ್ಲಿ ಲಲ್ಲಿ, ಪರ್ವ, ಸೆಕೆಂಡ್ ಹ್ಯಾಂಡ್ ಸದಾಶಿವ, ಪಲ್ಲವಿ, ಫೋಟೋಗ್ರಾಫರ್ ಪರಮೇಶಿ, ಯಾಕಿಂಗಾಡ್ತಾರೋ ಮುಂತಾದ ಹಲವಾರು ಧಾರವಾಹಿಗಳಲ್ಲಿ ಶಂಕರ ರಾವ್ ಅಭಿನಯಿಸಿದ್ದರು. 1972ರಲ್ಲಿ ತೆರೆಕಂಡ ಎಂ. ಆರ್ . ವಿಠಲ್ ಅವರ 'ಯಾರ ಸಾಕ್ಷಿ' ಚಿತ್ರದಿಂದ ಮೊದಲುಗೊಂಡು ಕಾಕನ ಕೋಟೆ, ಸಿಂಹಾಸನ, ಪುಟಾಣಿ ಏಜೆಂಟ್ 123, ಮೂಗನ ಸೇಡು, ಕಲ್ಯಾಣ ಮಂಟಪ, ಅಪ್ಪು, ಧ್ರುವ, ಖುಷಿ, ದೇವರು ವರವನು ಕೊಟ್ರೆ, ಅರಸು ಸೇರಿದಂತೆ ಅನೇಕ ಚಿತ್ರಗಳಲ್ಲಿ ಇವರ ಅಭಿನಯ ಗಮನ ಸೆಳೆದಿತ್ತು.
ಶಂಕರ ರಾವ್ 2021ರ ಅಕ್ಟೋಬರ್ 18ರಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು. ಅವರ ಕಲಾವಂತಿಕೆ ನಮ್ಮ ಮನಸ್ಸಿನಲ್ಲಿ ಅಪ್ತವಾಗಿ ಉಳಿದಿದೆ.
our favorite actor Shankara Rao Sir 🌷🙏🌷
ಕಾಮೆಂಟ್‌ಗಳು