ವಿದ್ಯಾ ಸಿನ್ಹಾ
ವಿದ್ಯಾ ಸಿನ್ಹಾ
ವಿದ್ಯಾ ಸಿನ್ಹಾ ಸರಳ ಸುಂದರ ಕಲಾವಿದೆ. ತಾವು ನಿರ್ವಹಿಸಿದ ಅನೇಕ ಪಾತ್ರಗಳಲ್ಲಿ ಸರಳ ಸಾಮಾನ್ಯರಂತೆ ಅವರು ಅಭಿನಯಿಸಿದ್ದ ರೀತಿ ಅವಿಸ್ಮರಣೀಯ.
ವಿದ್ಯಾ ಸಿನ್ಹಾ 1947ರ ನವೆಂಬರ್ 15ರಂದು ಮುಂಬೈನಲ್ಲಿ ಜನಿಸಿದರು.
ವಿದ್ಯಾ ಸಿನ್ಹಾ ರಜನಿಗಂಧ (1974), ಛೋಟಿ ಸಿ ಬಾತ್ (1975) ಮತ್ತು ಪತಿ ಪಟ್ನಿ ಔರ್ ವೋ (1978) ಮುಂತಾದ ಚಿತ್ರಗಳಲ್ಲಿನ ಸುಂದರ ಅಭಿನಯದಿಂದ ಮನೆಮಾತಾಗಿದ್ದರು.
ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ವಿದ್ಯಾ ಸಿನ್ಹಾ ಮಿಸ್ ಬಾಂಬೆ ಪ್ರಶಸ್ತಿಯನ್ನು ಗೆದ್ದಿದ್ದರು. ಕಿರಣ್ ಕುಮಾರ್ ಜೊತೆಗೆ ನಟಿಸಿದ ರಾಜಾ ಕಾಕಾ (1974) ಅವರ ಮೊದಲ ಚಿತ್ರ. ಬಸು ಚಟರ್ಜಿ ಅವರು ನಿರ್ದೇಶಿಸಿದ ರಜನಿಗಂಧ (1974) ಅವರಿಗೆ ಖ್ಯಾತಿ ತಂದಿತು. ಮುಂದೆ ಛೋಟಿ ಸಿ ಬಾತ್, ಕರ್ಮ್, ಮುಕ್ತಿ , ಇಂಕಾರ್, ಪತಿ ಪಟ್ನಿ ಔರ್ ವೋ, ಕಿತಾಬ್, ಮೀರಾ ಮುಂತಾದ ಸುಮಾರು 30 ಚಿತ್ರಗಳಲ್ಲಿ ನಟಿಸಿದರು. ರಾಜ್ ಸಿಪ್ಪಿ ನಿರ್ದೇಶನದ ಜೋಶ್ ಚಿತ್ರದಲ್ಲಿ ಅವರು ಒಮ್ಮೆ ನಕಾರಾತ್ಮಕ ಪಾತ್ರವನ್ನೂ ನಿರ್ವಹಿಸಿದ್ದರು. ಲವ್ ಸ್ಟೋರಿ ಚಿತ್ರದಲ್ಲಿ ನಾಯಕಿ ವಿಜೇತಾ ಪಂಡಿತ್ ತಾಯಿಯಾಗಿ ನಟಿಸಿದ್ದರು.
ಆಸ್ಟ್ರೇಲಿಯಾದಲ್ಲಿ ಕೆಲಕಾಲ ನೆಲೆಸಿದ್ದ ವಿದ್ಯಾಸಿನ್ಹಾ ಭಾರತಕ್ಕೆ ಮರಳಿದ ನಂತರ ದೂರದರ್ಶನದ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಸುಮಾರು 20 ವರ್ಷಗಳ ನಂತರದಲ್ಲಿ 2011 ವರ್ಷದಲ್ಲಿ ಬಿಡುಗಡೆಯಾದ ಬಾಡಿಗಾರ್ಡ್ ಎಂಬ ಚಿತ್ರದಲ್ಲಿ ನಟಿಸಿದ್ದರು.
ಚಿತ್ರಜೀವನದಲ್ಲಿ ಇದ್ದರೆ ಹೀಗಿರಬೇಕು ಸರಳ ಲವಲವಿಕೆಯಿಂದ ಎಂಬ ಮೂಡಿಸಿದ್ದ ವಿದ್ಯಾಸಿನ್ಹಾ ಅವರಿಗೆ ನಿಜಜೀವನ ಕಷ್ಟಗಳಿಂದ ಕೂಡಿತ್ತು.
ವಿದ್ಯಾ ಸಿನ್ಹಾ 2019ರ ಆಗಸ್ಟ್ 15ರಂದು ಈ ಲೋಕವನ್ನಗಲಿದರು. ಅವರು ತಮ್ಮ ಸುಂದರ ಪಾತ್ರ ನಿರ್ವಹಣೆಗಳಿಂದ ನೆನಪಲ್ಲಿ ಉಳಿದಿದ್ದಾರೆ.
On the birth anniversary of lovely actress Vidya Sinha
ಕಾಮೆಂಟ್‌ಗಳು