ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಶ್ವಿನಿ ಅಶೋಕ್


 ಅಶ್ವಿನಿ ಅಶೋಕ್


ಆಶ್ವಿನಿ ಆಶೋಕ್ ಅದ್ಭುತ ಛಾಯಾಗ್ರಾಹಕಿ.  ಅವರ ಛಾಯಾಗ್ರಹಣ ಮತ್ತು ಅವರು ಕನ್ನಡದಲ್ಲಿ ಮೂಡಿಸುವ ಲಹರಿಗಳು ಅನುಪಮವಾದದ್ದು.

ಡಿಸೆಂಬರ್ 28 ಅಶ್ವಿನಿ ಅವರ ಜನ್ಮದಿನ. ಮೂಲತಃ ಮುಂಡರಗಿ ಅವರಾದ ಇವರು ಮುಂಡರಗಿ ಮತ್ತು ಹೊಸಪೇಟೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ತಮ್ಮ ಕುಟುಂಬದೊಂದಿಗೆ ಬಳ್ಳಾರಿಯ ನಿವಾಸಿಯಾಗಿದ್ದಾರೆ.

ಅಶ್ವಿನಿ ಅಶೋಕ್ ಅವರ ಲಲಿತ ಪ್ರಬಂಧದಂತಹ ಹಾಸ್ಯ ಲೇಪನದ ನಲ್ಮೆಯ ಬರಹಗಳು ಫೇಸ್ಬುಕ್ ಆವರಣದಲ್ಲಿ ನನ್ನನ್ನು ಆಕರ್ಷಿಸಿದ್ದವು.  ಇತ್ತೀಚಿನ ವರ್ಷಗಳಲ್ಲಿ ಅವರು ತಮ್ಮ ಕ್ಯಾಮರಾ ಕಣ್ಣಿನ ಮೂಲಕ ದೃಶ್ಯ ಕಾವ್ಯವನ್ನು ಅದ್ಭುತವಾಗಿ ತೆರೆದಿಡುತ್ತಾ
ಬಂದಿದ್ದಾರೆ. ಅವರ ಕ್ಯಾಮೆರಾ ಕೈಚಳಕ ಅದ್ಭುತವಾಗಿದ್ದು ಅವರು ತೆರೆದಡುತ್ತಿರುವ  ಚಿತ್ರಗಳು ಒಂದಕ್ಕಿಂತ ಒಂದು ಸುಂದರ.

ಸಾಹಿತ್ಯ, ಸಂಸ್ಕೃತಿ, ಸಂಗೀತಗಳಲ್ಲಿ ಕೂಡಾ ಉತ್ತಮ ಆಸಕ್ತಿ ಉಳ್ಳವರು ಅಶ್ವಿನಿ.

ಫೇಸ್ಬುಕ್ ನೀಡಿರುವ ಅತ್ಯಂತ ಆಪ್ತ ಸ್ನೇಹಪೂರ್ಣ ವ್ಯಕ್ತಿಗಳಲ್ಲಿ ಒಬ್ಬರಾದ ಬಹುಮುಖಿ ಪ್ರತಿಭೆ ಅಶ್ವಿನಿ ಅಶೋಕ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Ashwini Ashok

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ