ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾಣೀ ಸುರೇಶ್


 ವಾಣೀ ಸುರೇಶ್


ಇಂದು ಹಿರಿಯರಾದ ವಾಣೀ ಸುರೇಶ್ ಅವರ ಹುಟ್ಟು ಹಬ್ಬ.

ವಾಣೀ ಸುರೇಶ್ ಬರಹಾರ್ತಿ, ವೀಣಾ ವಾದಕಿ. ಪ್ರಕೃತಿ ಮತ್ತು ಮಾನವ ಪ್ರೇಮಿ.  ಅವರ ವಿವಿಧ ಕ್ಷೇತ್ರಗಳ ಕುರಿತಾದ ಆಸಕ್ತಿ, ಸ್ನೇಹ ಪ್ರಿಯ ಸಾಂಸ್ಕೃತಿಕ ಮನೋಭಾವ, ಅಪರಿಮಿತ ಜೀವನೋತ್ಸಾಹ ಇವೆಲ್ಲ ಬದುಕನ್ನು ಹೇಗೆ ಕ್ರಮಿಸಬೇಕೆಂಬುದಕ್ಕೆ ಮಾರ್ಗದರ್ಶಿಗಳಂತೆ ಗೋಚರಿಸುತ್ತವೆ. 

ಕೆಲವು ತಿಂಗಳ ಹಿಂದಿನ ಅವರ ಪೋಸ್ಟ್ ಅವರ 50ನೇ ವಿವಾಹ ವಾರ್ಷಿಕೋತ್ಸವದ ಬಗ್ಗೆ, ಒಂದು ಪೋಸ್ಟ್ ತಮ್ಮ ಗುರು ವೈಣಿಕ ವಿದ್ವಾಂಸರಾದ ಸಿ. ಕೃಷ್ಣಮೂರ್ತಿ ಅವರ ಬಗ್ಗೆ, ಒಂದು ಅವರ ಅಪರಂಜಿಯಲ್ಲಿನ ಬರಹದ ಬಗ್ಗೆ, ಮತ್ತೊಂದು ಅವರು ಹಲವರೊಡನೆ ಕೂಡಿ ಬರೆದಿರುವ ಸಂಕಲನ 'ಸ್ನೇಹ ಗುಚ್ಚ'ದ ಬಗ್ಗೆ, ಹಲವು ಅವರ ಪ್ರಕೃತಿ ಪ್ರೇಮದ ಬಗ್ಗೆ, ಈ ಸಮಸ್ತಗಳಲ್ಲೂ ಕಾಣುವುದು ಅರಳಿ ನಿಂತಿರುವ ನಸುನಗೆ ಮತ್ತು ಸದಾ ಪ್ರೀತಿಯ ಸವಿ ಮಾತು.  ಇದಕ್ಕಿಂತ ಮಿಗಿಲಾಗಿ ಬದುಕಿಗೆ ಬೇರೆ ಏನಾದರೂ ಅಮೂಲ್ಯತೆ ಇದೆಯೇ!

ದೂರವಾಣಿಯಲ್ಲಿ ಮಾತನಾಡುವಾಗಲೂ ಅವರ ಧ್ವನಿಯಲ್ಲಿ ಎಷ್ಟು ಇಂಪು ಮತ್ತು ಅಕ್ಕರೆಯಿದೆ ಎಂದರೆ ಆ ವಾತ್ಸಲ್ಯದಲ್ಲಿ ಕರಗಿಹೋಗುವಷ್ಟು.  ಅವರ ಸಂದೇಶಗಳು ಕೂಡಾ ತುಂಬಿ ತುಳುಕುವಷ್ಟು ಹೊರಸೂಸುತ್ತವೆ. "ನಾನು ತಾಯೆ ಬಂದು ನೆಲೆಸೌ ಇಂದಿರೆ ಎನ್ನಯ ಮಂದಿರದೊಳಗಾನಂದದಿ" ಹಾಡನ್ನು ಇಲ್ಲಿ ಹಂಚಿಕೊಂಡಾಗ ಅದರಿಂದ ಆನಂದಿಸಿದ ವಾಣಿ ಅವರು ಅದನ್ನು ತಮ್ಮ ವೀಣಾವಾದನ ಮತ್ತು ಗಾಯನದ ಯುಗಳತೆಯಲ್ಲಿ ಆಡಿಯೊ ರೆಕಾರ್ಡ್ ಮಾಡಿ ಕಳಿಸಿದರು. ಅದನ್ನು ಎಷ್ಟು ಕೇಳಿದರೂ ಸಾಕೆನಿಸದು.  ಅವರ ಪ್ರೀತಿ ವಾತ್ಸಲ್ಯವೂ ಅಷ್ಟೇ.  ಇದಲ್ಲವೇ ವಾಣಿಯ ವೀಣೆ-ವಾತ್ಸಲ್ಯ-ನುಡಿಗಳ ಸ್ವರ ಮಾಧುರ್ಯ.  ಸಾಂಸ್ಕೃತಿಕ ಬದುಕಿನ ಔನ್ನತ್ಯವನ್ನು ಸಾಕ್ಷಾತ್ಕರಿಸಿಕೊಂಡವರಿಗಷ್ಟೇ ಇದು ಸಾಧ್ಯ 🌷🙏🌷

ಆತ್ಮೀಯ ಹಿರಿಯರಾದ ವಾಣೀ ಸುರೇಶ್ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 

Happy birthday Vaanee Suresh 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ