ತಿರುಪ್ಪಾವೈ21
ತಿರುಪ್ಪಾವೈ 21
ಭುವನ ಬ್ರಹ್ಮಾಂಡವೆಲ್ಲಾ ನಿನಗೆ ಸುಪ್ರಭಾತವನ್ನು ಹಾಡುತ್ತಿದೆ
Thiruppavai 21
ಏಟ್ರಕಲಂಗಳೆದಿರ್ ಪೋಂಗಿ ಮೀದಳಿಪ್ಪ
ಮಾಟ್ರಾದೇ ಪಾಲ್‍ಶೋರಿಯುಂ ವಳ್ಳಲ್ ಪೆರುಂ ಪಶುಕ್ಕಲ್
ಆತ್ತ ಪ್ಪಡೈತ್ತಾನ್ ಮಗನೇ ಅರಿವುರಾಯ್
ಊತ್ತ ಮುಡೈಯಾಯ್ ಪೆರಿಯಾಯ್ ಉಲಗಿನಿಲ್
ತೋತ್ತ ಮಾಯ್ ನಿನ್ರ ಶುಡರೇ ತುಯಿಲೆಳಾಯ್
ಮಾತ್ತಾರುನಕ್ಕು ವಲಿತೊಲೈಂದುನ್ ವಾಶಲ್‍ಕಣ್
ಆತ್ತದು ವಂದುನ್ನಡಿಪಣಿಯುಮಾಪ್ಪೋಲೇ
ಪೋತ್ತಿಯಾಂ ವಂದೋಂ ಪುಗಳಿನ್ದೇಲೋರೆಂಬಾವಾಯ್
ಭಾವಾನುವಾದ - ೨
ಕಾಮಧೇನುಗಳೊಡೆಯನೆ ಮಹಾನಿಧಿಯೇ ವಾತ್ಸಲ್ಯ ವಾರಿಧಿಯೇ
ಮಾರ್ಗಶಿರ ನೋಂಪಿಯನಾಚರಿಸಿ ಬಂದಿರುವೆಮ್ಮಸಲಹಯ್ಯ
ಬೆಳಗಿಹರು ಶಶಿಸೂರ್ಯ ಕೋಟಿಕೋಟಿ ತಾರಾ ಮಂಡಲಾಧಿಪರು
ನೀ ಪರಮ ಪರಮಪುರುಷ ಪರಂಧಾಮ ಜನಕ ಜನನಿ ಚರಾಚರಕೆ
ಸುಪ್ರಭಾತವು ನಿನಗೆ ಯಾದವಾಚಲವಾಸ ಶ್ರೀತುಳಸಿ ವನಮಾಲಿ
ಸುಪ್ರಭಾತವು ನಿನಗೆ ಗರುಡಾದ್ರಿವಾಸ ವಿಶ್ವವಂದಿತ ಚರಣ ಶ್ರೀಶ್ರೀನಿವಾಸ ಸಹಿಸಲಾಗದು ನಿನ್ನಗಲಿಕೆಯ ದರ್ಶನವ ನೀಡೆಮಗೆ ಸ್ವಸ್ತಿದಕ್ಷಿಣನೆ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ
ಮುಂಬೆಳಕು
ಭಾವಾರ್ಥ 21
ಇಲ್ಲಿಂದ ಮುಂದೆ ಶರಣಾಗತಿಯನ್ನು ನಾವು ಕಾಣುತ್ತೇವೆ. ಹೇ ಕೃಪಾಸಿಂಧು, ನೀನು ಗೋಕುಲದಲ್ಲಿ ಹುಟ್ಟಿ ಕಾಮಧೇನುಗಳ ಒಡೆಯನೆನಿಸಿ ದುಷ್ಟ ದಾನವರನ್ನೆಲ್ಲ ಕೊಂದು, ನಿನ್ನ ಬಾಲಲೀಲೆಗಳಿಂದ ಲೋಕ ಕಲ್ಯಾಣವನ್ನು ಮಾಡಿದವನು. ಸಕಲರಿಗೂ ಜೀವನಾಧಾರನಾಗಿರುವೆ.
ನೀನು ಯುಗಯುಗಳಲ್ಲಿಯೂ ಧರ್ಮರಕ್ಷಣೆಗಾಗಿ ಅವತಾರ ಮಾಡುತ್ತಾ ಬಂದಿರುವ ಕಮಲನಾಭ ಶ್ರೀಯಃಪತಿ.
ಶಶಿಸೂರ್ಯ ಕೋಟಿ ತಾರಾಮಂಡಲಗಳೂ ನಿನ್ನಿಂದಲೇ ಬೆಳಗುತ್ತಿವೆ. ಭುವನ ಬ್ರಹ್ಮಾಂಡವೆಲ್ಲಾ ನಿನಗೆ ಸುಪ್ರಭಾತವನ್ನು ಹಾಡುತ್ತಿದೆ.
- ಓಂಕಾರ ನಾದಮಯವಾಗಿದೆ ಸೃಷ್ಟಿ, ಇಂತಹ ಶುಭ ಮಾರ್ಗಶಿರ ಮಾಸದಲ್ಲಿ ವ್ರತವನ್ನಾಚರಿಸಿ ನಿನಗೆ ಸುಪ್ರಭಾತವನ್ನು ಆಚರಿಸುತ್ತಿದ್ದೇವೆ. ಕಣ್ತೆರೆದು ನೋಡು, ನಿನ್ನ ಯೋಗನಿದ್ರೆಯ ಆಟ ಸಾಕು. ಭಕ್ತರ ಕರೆಗಾಗಿಯೇ ಕಾದು ಕಣ್ಮುಚ್ಚಿಕೊಂಡು ಕುಳಿತಿರುವ ಭಕ್ತಭವದೀಯನಲ್ಲವೇ ನೀನು? ಕಣ್ತೆರೆದು ನೋಡು. ಬೇಗೆದ್ದು ಬಾ. ನಿನ್ನನ್ನಗಲಿ ನಮಗೆ ಬದುಕಿಲ್ಲ. ಆದ್ದರಿಂದ ತ್ವರೆಮಾಡಿ ಬಂದು ನಮ್ಮನ್ನು ಕರುಣಿಸು.
ಇದರಿಂದ ನಮ್ಮವ್ರತವೂ ಈಡೇರಿ ಸಮಸ್ತಲೋಕಕ್ಕೂ ಮಂಗಳವಾಗಲಿ.
ಕಾಮೆಂಟ್‌ಗಳು