ತಿರುಪ್ಪಾವೈ24
ತಿರುಪ್ಪಾವೈ
ಮಂಗಳವು ಪ್ರಭುವೇ ಶುಭಮಂಗಳ
Thiruppavai 24
ಅನ್ರಿವ್ವಲಹಮಳಂದಾಯ್ ಅಡಿಪೋತ್ತಿ ಶೆನ್ರಂಗುತ್ತೆನ್ನಿಲಂಗೈ ಶೆತ್ತಾಯ್ ತಿರಳ್‌ಪೋತ್ತಿ
ಪೊನ್ರಚ್ಚಕಡಮುದೈತ್ತಾಯ್ ಪುಗಳ್‍ಪೋತ್ತಿ
ಕನ್ರು ಕುಣಿಲಾವೆರಿಂದಾಯ್ ಕಳಲ್‌ಪೋತ್ತಿ
ಕುನ್ರು ಕುಡೈಯ್‍ಮಾ ವೆಡುತ್ತಾಯ್ ಗುಣಂ ಪೋತ್ತಿ
ವೆನ್ರುಪಗೈ ಕೆಡುಕ್ಕುಂ ನಿನ್ ಕೈಯಿಲ್ ವೇಲ್‌ಪೋತ್ತಿ
ವೆನ್ರನ್ರುನ್ ಶೇವಕಮೇ ಯೇತ್ತಿಪ್ಪರೈಕೊಳ್ವಾನ್
ಇನ್ರಯಾಂ ವನ್ದೋಂ ಇರಂಗೇಲೋರೆಂಬಾವಾಯ್
ಭಾವಾನುವಾದ
ಮಂಗಳವು ವಾಮನಗೆ ಮಂಗಳವು ಸಿರಿಪಾದಕ್ಕೆ ಶ್ರೀಶ್ರೀನಿವಾಸಗೆ
ಮಂಗಳವು ದಶಕಂಠ ಮರ್ಧನಗೆ ಗೌತಮ ಗಿರಿನಿಲಯ ದಶರಥಾತ್ಮಜಗೆ ಮಂಗಳವು ಪೂತನೀ ಶಕಠಾಸುರ ಸಂಹಾರ ಕಾಳಿಂಗ ಮರ್ಧನಗೆ ಮಂಗಳವು ಪಾಂಡು ತನಯರ ಬೆಂಬಿಡದೆ ಕಾಯ್ದವಗೆ ಕಾವೇಟಿರಂಗನಿಗೆ ಮಂಗಳವು ಯೋಗಿಜನ ವಂದಿತಗೆ ಭೂತಭವ್ಯ ಭವನ್ನಾಥಗೆ
ಶುಭಮಂಗಳವು
ಎಂದಾಡಿ ನೋಂಪಿಯನಾಚರಿಸಿ ಬಂದಿಹೆವು ನಿನ್ನ ದರುಶನಕೆ
ಗೀತಗೋವಿಂದ
ಅಭಯ ಹಸ್ತವ ತೋರುತೆಮ್ಮನು ಸಲಹೋ ದೇವಕೀತನಯನೇ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲೆಡೆ ಮಂಗಳದ
ಮುಂಬೆಳಕು
ತಿರುಪ್ಪಾವೈ - 24
ಭಾವಾರ್ಥ
ದೇವತೆಗಳ ಕಾರ್ಯಕ್ಕಾಗಿ ಬಲಿಯಲ್ಲಿ ಮೂರಡಿ ಜಾಗವನ್ನು ಬೇಡಿ ಮೂರು ಲೋಕಗಳಿಗೂ ಬೆಳೆದು ನಿಂತ ವಾಮನನೇ ನಿನಗೆ ಮಂಗಳ, ದಶಶಿರನನ್ನು ಲೀಲಾಜಾಲವಾಗಿ ಸಂಹರಿಸಿದ ದಶರಥಾತ್ಮಜನೆ ನಿನಗೆ ಮಂಗಳ, ಪೂತನೀ ಶಕಠಾಸುರರಾದಿ ರಾಕ್ಷಸರನ್ನು ಸಂಹರಿಸಿದ ಬಾಲಗೋಪಾಲನೇ ನಿನಗೆ ಮಂಗಳ, ಕೋಪದಿಂದ ಇಂದ್ರನು ಆರ್ಭಟಿಸಿ ಭಯಂಕರವಾಗಿ ಮಳೆಯನ್ನು ಸುರಿಸಿದಾಗ ಗೋವರ್ಧನ ಗಿರಿಯನ್ನು ನಿನ್ನ ಕಿರುಬೆರಳಿನಿಂದ ಎತ್ತಿ ಭಕ್ತರನ್ನು ರಕ್ಷಿಸಿಕೊಂಡವನೇ ನಿನಗೆ ಮಂಗಳ, ಶಿಶುಪಾಲ ದಂತವಕ್ರರರನ್ನು ಸಂಹರಿಸಿ ರಾಜಸೂಯ ಯಾಗವನ್ನು ಯಾವ ಅಡೆತಡೆಗಳೂ ಇಲ್ಲದಂತೆ ನಡೆಸಿಕೊಟ್ಟ ಚಕ್ರರಾಜನೇ ನಿನಗೆ ಮಂಗಳ ಧರ್ಮನಂದನನ ಹೃತ್ಕಮಲವಾಸನೇ ನಿನಗೆ ಮಂಗಳ.
ಯೋಗಿಗಳು ಸದಾಕಾಲ ತಮ್ಮ ಹೃದಯದಲ್ಲಿ ಬೆಳಗಿಸಿಕೊಂಡಿರುವ ಮಹಿಮಾಂತರಂಗನೇ ಯೋಗಿಜನೇಶ್ವರನೇ ನಿನಗೆ ಮಂಗಳ, ಕಂಸಚಾಣೂರರಾದಿ ಮಲ್ಲರನ್ನೆಲ್ಲ ಮರ್ದಿಸಿದ ದೇವಕೀತನಯನೇ ನಿನಗೆ ಮಂಗಳ, ಸಪ್ತಗಿರಿವಾಸ ಭಕ್ತ ಬಾಂಧವನೇ ಹೇ ತಿರುವೇಂಕಟೇಶನೇ, ನಿನಗೆ ಮಂಗಳ.
ಚೆಲುವ ಚೆನ್ನಿಗನಾಗಿ ಬೀಬಿನಾಚಾರ್ಯರು ಹೃದಯೇಶ್ವರನಾದ. ಯದುಶೈಲನಾಥನೇ ನಿನಗೆ ಮಂಗಳ
ಕಾಳಿಂಗಸರ್ಪವನ್ನು ಮರ್ದಿಸಿದ ರಾಧಾರಮಣನೆ ನಿನಗೆ ಮಂಗಳ
ದೇವಾದಿದೇವನೆ ಮಂಗಳ
ಮಾರ್ಗಶಿರ ಮಾಸದ ವ್ರತವನ್ನು ಆಚರಿಸಿ ನಿನ್ನ ದರ್ಶನಾರ್ಥಿಗಳಾಗಿ ಬಂದಿರುವ ನಮಗೆ ಅನುಗ್ರಹಿಸಿ ಉದ್ಧರಿಸು.
ಇದರಿಂದ ನಮ್ಮ ವ್ರತವೂ ಈಡೇರಿ ಸಮಸ್ತಲೋಕಕ್ಕೂ ಮಂಗಳವಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
ಕಾಮೆಂಟ್‌ಗಳು