ತಿರುಪ್ಪಾವೈ30
ತಿರುಪ್ಪಾವೈ 30
ಬನ್ನಿ ಅವನನ್ನು ಸ್ಮರಿಸಿ ಅವನೊಳಗೊಂದಾಗೋಣ
Thiruppavai 30
ವಂಗಕ್ಕಡಲ್ ಕಡೈಂದ ಮಾಧವನೈ ಕ್ಕೇಶವನೈ
ತಿಂಗಳ್ ತಿರುಮುಹುತ್ತುಚೇಯಿಳೈಯಾರ್ ಶನ್ನಿರೈಂಜಿ
ಅಂಗಪ್ಪರೈ ಕೊಂಡ ವಾತ್ತೈ ಅಣಿಪುದುವೈ ಪೈಂಗಮಲತ್ತರಿಯಲ್ ಪಟ್ಟರ್‌ಪಿರಾನ್ ಕೊದೈಶೊನ್ನ
ಶಂಗತ್ತಮಿಳ್ ಮಾಲೈ ಮುಪ್ಪದುಂ ತಪ್ಪಾಮೇ
ಇಂಗಪ್ಪರಿಶುರೈಪ್ಪಾರ್ ಈರಿರಂಡು ಮಾಲ್ವರೈತ್ತೋಳ್
ಶೆಂಗಳ್ ತಿರುಮುಹತ್ತು ಚೆಲ್ವರುಮಾಲಾಲ್
ಎಂಗುಂ ತಿರುವರುಳ್ ಪೆತ್ತು ಇನ್ಬುರುವರೆಂಭಾವಾಯ್
ಭಾವಾನುವಾದ 30
ಭವಸಾಗರದನಂತ ನಾವೆಗಳ ನಾವಿಕನ ಜ್ಞಾನಗಮ್ಯಾದಿ ದೇವನನು
ಮಾರ್ಗಶಿರ ನೋಂಪಿಯಿಂಪಾಡಿಕೊಂಡಾಡುತ ಪರಮನಡಿ ಸೇರೋಣ
ಬನ್ನಿ ಬನ್ನಿರೆನ್ನೆಲ್ಲ ಬಾಂಧವರೆ ಮೋಕ್ಷ ಕಾಮಿಗಳಾಗುವ ಬನ್ನಿರೊಲವಿಂದ ಗೋದೆ ರಚಿಸಿದೀ ಆರೈದು ಹೊನ್‌ತಮಿಳ ಗೀತೆಗಳ ತಪ್ಪದೆಲೆ ಪಾಡಿ
ನೋಂಪಿಯನಾಚರಿಸಿ
ಈ ಪರಿಯೊಳಪ್ರಮೇಯನನು ಪಾಡಿ ಬದುಕಿದೊಡೆ ಮಂಗಳವು ಸಕಲರಿಗೆ ಧನ್ಯವೀ ಗೋದೆಯ ಜನ್ಮಧನ್ಯವೀ ಸಿರಿಗೋದೆ ತೌರೂರು ಸಿರಿವಿಲ್ಲಿಪುತ್ತೂರು ಧನ್ಯಳೆನ್ನೆಮ್ಮ ಭಾರತಿಯು ಧನ್ಯರೆನ್ನೊಲಮೆಯಲಿ ಸಲಹಿದೆನ್ನಯ್ಯ
ಶ್ರೀವಿಷ್ಣುಚಿತ್ತಮುನಿ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು
ಭಾವಾರ್ಥ 30
ಬನ್ನಿ ಎಲ್ಲರೊಂದಾಗಿ ಬನ್ನಿ, ಓ ನನ್ನೆಲ್ಲ ಗೆಳತಿಯರೇ, ಭವಸಾಗರದ ನೌಕೆಗಳನ್ನು ಮುಳುಗದಂತೆ ಕಾಪಿಡುವ ಆ ಕ್ಷೀರಸಾಗರ ಶಯನನಾದ ಕಮಲನಾಭನನ್ನು ತದೇಕಚಿತ್ತದಿಂದ ಧ್ಯಾನಿಸಿ ಕೀರ್ತಿಸಿ ಧನ್ಯರಾಗೋಣ.
ಜನನ ಮರಣಗಳ ಜಾಲದಿಂದ ಬಿಡಿಸಿಕೊಳ್ಳೋಣ. ಭವದಾಸೆಗಳ ತೊರೆದು ಮೋಕ್ಷಕಾಮಿಗಳಾಗುವ ಬನ್ನಿ.
ಶ್ರೀಮನ್ನಾರಾಯಣನು ತಪ್ಪದೇ ನಮ್ಮನ್ನು ಸಲಹುತ್ತಾನೆ. ಈ ಮಂಗಳಕರವಾದ ಮಾರ್ಗಶಿರ ಮಾಸದಲ್ಲಿ ಶ್ರೀವಿಷ್ಣುಚಿತ್ತಮುನಿ ಕರಕಮಲ ಸಂಜಾತೆ ಗೋದಾದೇವಿ ರಚಿಸಿರುವ ಈ ಮೂವತ್ತು ಪದ್ಯಗಳನ್ನೂ ತಪ್ಪದೆಯೇ ಅನುಸಂಧಾನ ಮಾಡಿ ವ್ರತವನ್ನಾಚರಿಸಿ, ದಾನ ಧರ್ಮಗಳನ್ನು ಮಾಡಿ, ಗುರುಹಿರಿಯರಿಗೆ ನಮಸ್ಕರಿಸಿ ಆಶೀರ್ವಾದಗಳನ್ನು ಪಡೆದು ಶ್ರೀಹರಿಯ ಕೃಪೆಗೆ ಪಾತ್ರರಾದಲ್ಲಿ ಈ ಸಿರಿವಿಲ್ಲಿ ಪುತ್ತೂರಿನ ಸಿರಿಗುವರಿಯ ಜನ್ಮಸಾರ್ಥಕ. ನನ್ನನ್ನೆತ್ತಿ ಪೋಷಿಸಿದೆನ್ನಯ್ಯ ವಿಷ್ಣುಚಿತ್ತರ ಜನ್ಮಸಾರ್ಥಕ.
ನಮ್ಮೆಲ್ಲರಿಗೂ ಜನ್ಮದಾತೆಯಾದ ವಿಶ್ವಮಾತೆಯಾದ ಭಾರತಿಯು ಧನ್ಯಳು. ನನ್ನ ತವರೂರು ಸಿರಿವಿಲ್ಲಿಪುತ್ತೂರು ಧನ್ಯ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
ಕಾಮೆಂಟ್‌ಗಳು