ಶ್ರೀನಿವಾಸ ಎನ್ನಿ
ಶ್ರೀನಿವಾಸ ಎನ್ನಿ
ಆತ್ಮೀಯ ಯುವ ಗೆಳೆಯ ಗಂಗಾವತಿಯ ಶ್ರೀನಿವಾಸ ಎನ್ನಿ ಅವರು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಯಾಗ್ರಹಣದಲ್ಲಿ ಸಾಧನೆ ಮಾಡುತ್ತಾ ನಡೆದಿದ್ದಾರೆ. ಛಾಯಾಗ್ರಹಣವನ್ನು ಗಂಭೀರ ಆಸಕ್ತಿಯಾಗಿ ಪರಿಗಣಿಸಿರುವ ಶ್ರೀನಿವಾಸ್ ಗಂಗಾವತಿಯಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮದಲ್ಲಿ ಇಂಜಿನಿಯರ್ ಆಗಿದ್ದಾರೆ.
ಶ್ರೀನಿವಾಸ್ ಎನ್ನಿ ಅವರ ಚಿತ್ರಗಳು ಹಲವು ಪ್ರತಿಷ್ಟಿತ ಛಾಯಾಚಿತ್ರ ಪ್ರದರ್ಶನಗಳಲ್ಲಿ ಬಹುಮಾನ ಗಳಿಸಿರುವುದೇ ಅಲ್ಲದೆ ಜಿಯಾಗ್ರಫಿಕ್ ಸೊಸೈಟಿ ಹಾಗೂ ವಿವಿಧ ಅಂತರರಾಷ್ಟ್ರೀಯ ಛಾಯಾಗ್ರಹಣ ಸಂಸ್ಥೆಗಳ ಮನ್ನಣೆ, ಮೆಚ್ಚುಗೆ ಮತ್ತು ಸದಸ್ಯತ್ವ ಗೌರವಗಳಿಗೆ ಪದೇ ಪದೇ ಗಮನ ಸೆಳೆಯುತ್ತಿರುವುದು ನಮಗೆಲ್ಲ ಹೆಮ್ಮೆ ತರುತ್ತಿರುವ ಸಂಗತಿಯಾಗಿದೆ.
ಯುವ ಗೆಳೆಯ ಶ್ರೀನಿವಾಸ್ ಅವರ ಛಾಯಾಗ್ರಹಣದ ಆಸಕ್ತಿ ಅವರನ್ನು ಇನ್ನೂ ಮಹತ್ವದ ಸಾಧನೆಗಳ ಮೂಲಕ ಅತ್ಯಮೂಲ್ಯ ವಿಶ್ವಪ್ರಸಿದ್ಧಿಗೆ ಕೊಂಡೊಯ್ಯಲಿ ಎಂಬುದು ನಮ್ಮೆಲ್ಲರ ಆಪ್ತ ಆಶಯ. ಹುಟ್ಟುಹಬ್ಬದ ಆತ್ಮೀಯ ಶುಭಹಾರೈಕೆಗಳು ಶ್ರೀನಿವಾಸ್
On the birthday of great achiever in photography and affectionate friend Shreenivas Yenni
ಕಾಮೆಂಟ್‌ಗಳು