ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿದ್ದಣ್ಣ ಮಸಳಿ


 ಸಿದ್ದಣ್ಣ ಮಸಳಿ


ಸಿದ್ದಣ್ಣ ಮಸಳಿ ಮಹಾನ್ ಕವಿ.  ಅವರ ರಚನೆಯಾದ 'ಪಂಜರದ ಪಕ್ಷಿ' ಕವಿತೆ ಶಾಲೆಯಲ್ಲಿ ಓದಿದ್ದು, ಇಂದೂ ನನ್ನ ಮನದಲ್ಲಿ ಪ್ರಭಾವಿಯಾಗಿ ನಿಂತಿದೆ.

ಸಿದ್ದಣ್ಣ ಮಸಳಿ 1927ರ ಏಪ್ರಿಲ್ 6ರಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಜನಿಸಿದರು.  ತಂದೆ ಗಿರಿಮಲ್ಲಪ್ಪ.  ತಾಯಿ ತಂಗೆಮ್ಮ. ಹಿರೇಮಸಳಿಯಲ್ಲಿ ಪ್ರಾಥಮಿಕ ಶಿಕ್ಷಣ, ವಿಜಯಪುರದಲ್ಲಿ ಮಾಧ್ಯಮಿಕ ಶಿಕ್ಷಣ,  ಬಿ.ಎ.ಪದವಿ,  ಬಿ.ಎಡ್. ಪದವಿ  ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಗಳನ್ನು ಗಳಿಸಿದರು.   1953ರ ಜೂನ್ 25ರಂದು
ಪ್ರಭಾವತಿಯವರೊಂದಿಗೆ ಅವರ ವಿವಾಹವಾಯಿತು.
.

ಸಿದ್ದಣ್ಣ ಮಸಲಿ 1952-1965 ಅವಧಿಯಲ್ಲಿ ಕೆಎಲ್‌ಇ ಸಂಸ್ಥೆಯ ಆರ್. ಎಲ್. ಎಸ್. ಹೈಸ್ಕೂಲ್‌ನಲ್ಲಿ ಸಹಶಿಕ್ಷಕರಾಗಿ, 1965-71 ಅವಧಿಯಲ್ಲಿ
ಚಿಕ್ಕೋಡಿ ತಾಲೂಕಿನ ಗಳಗತಿಯ ಪಿ. ಆರ್.ಚಿಕ್ಕೋಡಿ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯರಾಗಿ,  1971-80 ಅವಧಿಯಲ್ಲಿ ಕೆಎಲ್‌ಇ ಎಸ್.ಕೆ. ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ,  1980-82 ಅವಧಿಯಲ್ಲಿ ಬೆಳಗಾವಿಯ ಕೆಎಲ್‌ಇ ಜಿ.ಎ.ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಸಿದ್ದಣ್ಣ ಮಸಲಿ ಅವರು 1982-2000 ಅವಧಿಯಲ್ಲಿ ಬೆಳಗಾವಿಯ ಕನ್ನಡಮ್ಮ ದಿನಪತ್ರಿಕೆಯಲ್ಲಿ ಸಹಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. 

ಸಿದ್ದಣ ಮಸಲಿ ಅವರು 1954ರಲ್ಲಿ ಮನೆತುಂಬಿದ ಬೆಳಕು, 1961ರಲ್ಲಿ ದೀಪಾವತಾರ, 2003ರಲ್ಲಿ ಪಂಜರದ ಪಕ್ಷಿ ಕಾವ್ಯ ಸಂಕಲನ ಪ್ರಕಟಿಸಿದರು. ಸಂಚಾರಿ ಅಪ್ರಕಟಿತ ಕೃತಿ. ಇದಲ್ಲದೆ ರೇಡಿಯೋ ನಾಟಕಗಳು,  ವಿವಿಧ ಪತ್ರಿಕೆಗಳಲ್ಲಿ ಕಥೆಗಳು,  ವಿಮರ್ಶಾ ಲೇಖನಗಳು,  ಬಸವರಾಜ ಕಟ್ಟಿಮನಿ ಬದುಕು ಬರೆಹ ಹಾಗೂ ಸಂಪಾದಿತ ಕೃತಿಯಾದ 'ಕವಿ ಗಂಗಾವತಿಯವರ ಚೈತ್ರ ಪಕ್ಷಿ' ಕೃತಿಗಳನ್ನು ಪ್ರಕಟಿಸಿದ್ದರು.

ಸಿದ್ದಣ್ಣ ಮಸಳಿ ಅವರಿಗೆ 1958ರಲ್ಲಿ ಮನೆತುಂಬಿದ ಬೆಳಕು ಕಾವ್ಯ ಕೃತಿಗೆ ಮೈಸೂರು ಸರ್ಕಾರದಿಂದ 1000  ರೂಪಾಯಿಗಳ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1962ರಲ್ಲಿ ದೀಪಾವತಾರ ಕಾವ್ಯಕೃತಿಗೆ ಆಕಾಶವಾಣಿ ಕೇಂದ್ರದಿಂದ ಮನ್ನಣೆ,  ದೆಹಲಿಯಲ್ಲಿ ನಡೆದ ಸರ್ವ ಭಾಷಾ ಕವಿಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಆಹ್ವಾನ, ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯಿಂದ ಗೌರವ ಮುಂತಾದ ಅನೇಕ ಗೌರವಗಳು ಸಂದಿದ್ದವು.

ಸಿದ್ದಣ್ಣ ಮಸಳಿ 2017ರ ಜನವರಿ 4ರಂದು ಈ ಲೋಕವನ್ನಗಲಿದರು.

On Remembrance Day of great poet Siddhanna Masali 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ