ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಮರ್ಥ ಕೃಷ್ಣಮೂರ್ತಿ


 ಸಮರ್ಥ ಕೃಷ್ಣಮೂರ್ತಿ


ನಮ್ಮ ಸಮರ್ಥ ಕೃಷ್ಣಮೂರ್ತಿಗಳು ಅವರ ಹೆಸರೇ ಹೇಳುವಂತೆ ಹಲವು ವೈಶಿಷ್ಟ್ಯಗಳ  ಸಾಮರ್ಥ್ಯಶಾಲಿ. ಇಂದು ಕೃಷ್ಣಮೂರ್ತಿಗಳ ಹುಟ್ಟುಹಬ್ಬ.

ಕೃಷ್ಣಮೂರ್ತಿಗಳ ಛಾಯಾಚಿತ್ರಗಳನ್ನು ನೋಡುವುದೇ ಒಂದು ಸಂತೋಷ. ವಿಶ್ವ ವಿಶಾಲತೆಯ ಸೊಬಗನ್ನು ಹೋದಲ್ಲೆಲ್ಲ ಬೊಗಸೆಯಲ್ಲಿ ತುಂಬಿ ತಂದು ಅದನ್ನು ಸುಂದರ ಹೂಗಳನ್ನು ಚೆಲ್ಲುವಂತೆ, ಸುಂದರ ಮಾತುಗಳು ಮತ್ತು ಸೊಬಗಿನ ಚೌಕಟ್ಟಿನಲ್ಲಿ ಅವರು ಅಭಿವ್ಯಕ್ತಿಸುವ ಸೊಬಗೇ ಸೊಬಗು.  ಅವರ ಚಿತ್ರಗಳ ಸೊಬಗಿನಷ್ಟೇ ಅವರ ನಿರ್ಮಲ ನಗೆಮೊಗವೂ ಸೊಬಗಿನದು.

ಆತ್ಮೀಯ ಹಿರಿಯರೂ, ಪ್ರತಿಭಾವಂತರೂ ಆದ ಸಮರ್ಥ ಕೃಷ್ಣಮೂರ್ತಿಗಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday A. N. Krishnamurthy Sir 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ