ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜನ್ ಮಿಶ್ರಾ


 ಪಂಡಿತ್ ರಾಜನ್ ಮಿಶ್ರಾ

ಖಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪಂಡಿತ್ ರಾಜನ್ ತಮ್ಮ ಸಹೋದರ ಸಾಜನ್ ಮಿಶ್ರಾ ಅವರಿಗೆ ಜೋಡಿಯಾಗಿ ಖಯಾಲ್ ಸಂಗೀತದಲ್ಲಿ ಹೆಸರುವಾಸಿಯಾಗಿದ್ದರು.  ಇಂದು ರಾಜನ್ ಮಿಶ್ರಾ ಸಂಸ್ಮರಣಾ ದಿನ. 

ರಾಜನ್ ಮಿಶ್ರಾ 1951ರಲ್ಲಿ ಮತ್ತು ಅವರ ಸಹೋದರ ಸಾಜನ್ ಮಿಶ್ರಾ 1956ರಲ್ಲಿ ವಾರಾಣಸಿಯಲ್ಲಿ ಜನಿಸಿದರು.  ಈ ಸಹೋದರರು ತಮ್ಮ ತಂದೆ ಹನುಮಾನ್ ಪ್ರಸಾದ್, ತಾತ ಬಡೇ ರಾಮ್ ದಾಸ್‍ಜಿ ಮಿಶ್ರಾ ಮತ್ತು ಚಿಕ್ಕಪ್ಪ ಸಾರಂಗಿ ಕಲಾವಿದ ಗೋಪಾಲ್ ಪ್ರಸಾದ್ ಮಿಶ್ರಾ ಅವರುಗಳಲ್ಲಿ ಸಂಗೀತ ಸಾಧನೆ ಮಾಡಿದರು.

ಬನಾರಸ್ ಘರಾಣಾ ಸಂಗೀತ ಪ್ರಕಾರಕ್ಕೆ ಹೆಸರಾದ ರಾಜನ್ ಮಿಶ್ರಾ - ಸಾಜನ್ ಮಿಶ್ರಾ ಸಹೋದರರು ಭಾರತದೆಲ್ಲೆಡೆಯಲ್ಲಿ ಅಲ್ಲದೆ 1978ರಲ್ಲಿ ಶ್ರೀಂಕಾದಲ್ಲಿ ಮೊದಲ್ಗೊಂಡಂತೆ ಜರ್ಮನಿ, ಫ್ರಾನ್ಸ್, ಸ್ವಿಡ್ಜರ್ಲ್ಯಾಂಡ್, ಆಸ್ಟ್ರಿಯಾ, ಅಮೆರಿಕಾ, ಯುಕೆ, ನೆದರ್ಲ್ಯಾಂಡ್ಸ್, ರಷ್ಯಾ, ಸಿಂಗಪೂರ್, ಖತಾರ್, ಬಾಂಗ್ಲಾದೇಶ, ಮಸ್ಕತ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತಮ್ಮ ಗಾನಸುಧೆ ಹರಿಸಿದ್ದರು.

ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಗಂಧರ್ವ ರಾಷ್ಟ್ರೀಯ ಪ್ರಶಸ್ತಿ, ತಾನಸೇನ್ ಪ್ರಶಸ್ತಿ,  ಕರ್ನಾಟಕದ ಆಳ್ವಾಸ್ ವಿರಾಸಾತ್ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳಿಗೆ ರಾಜನ್ ಮಿಶ್ರಾ - ಸಾಜನ್ ಮಿಶ್ರಾ  ಸಹೋದರರು ಭಾಜನರಾಗಿದ್ದರು.

ಪಂಡಿತ್ ರಾಜನ್ ಮಿಶ್ರಾ 2021ರ ಏಪ್ರಿಲ್ 25ರಂದು ಈ ಲೋಕವನ್ನಗಲಿದರು. ಅವರ ಸಂಗೀತ ಅಮರ.

On Remembrance Day of Pandit Rajan Mishra l🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ