ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ79


ಕುಮಾರವ್ಯಾಸನ

ಕರ್ಣಾಟ ಭಾರತ ಕಥಾಮಂಜರಿ 

ಉದ್ಯೋಗ ಪರ್ವ  ಹತ್ತನೆಯ ಸಂಧಿ


ಭಯರಹಿತ ನಿರ್ಗುಣನಮಲಾ

ದ್ವಯನ ಬಂಧಿಸಲೆಂದು ಕುರುಪತಿ

ನಿಅಯಮಿಸಲು ಬೆಳಗಿದನು ಮುರರಿಪು ವಿಶ್ವರೂಪದೊಳು


ಮುನಿದು ದುರ್ಯೋಧನನು ದುಶ್ಯಾ

ಸನನು ಕೆಲದರಮನೆಯೊಳಾಲೋ

ಚನೆಯ ಮಾಡಿದರಂದು ಸೌಬಲ ಕರ್ಣರೊಡಗೂಡಿ

ದನುಜ ವೈರಿ ಕುತ್ರಂತ್ರದೊಳು ಬೊ

ಪ್ಪನೊಳು ಖಾತಿಯನಿಕ್ಕದನು ಕೈ

ಮನದ ಕಲಿಗಳು ಕಟ್ಟಿ ಕೃಷ್ಣನೆಂದನಾ ಭೂಪ 


ಎರಡು ಬಲವನು ಮಸೆದು ಕೊಲಿಸುವ

ಭರವು ಯಾದವನದು ನಿದಾನಿಸ

ಲರಿ ನಮಗೆ ಮುರವೈರಿಯಲ್ಲದೆ ಪಾಂಡುನಂದನರೆ

ತರಿಸಿ ಹುರಿನೇಣುಗಳೊಳೀತನ

ಕರವೆರಡ ನೆರೆ ಬಿಗಿದೊಡವದಿರು

ಕೆರಳಿ ಮಾಡುವುದಾವುದೆಂದನು ಕೌರವರ ರಾಯ 


ಗಾಳಿಯುಪಶಮಿಸಿದೊಡೆ ವಹ್ನಿ

ಜ್ವಾಲೆ ತಾನೇ ನಿಲುವುದೀತನ

ತೋಳ ಬಿಗಿದೊಡೆ ಬಳಿಕ ಮನಗುಂದುವರು ಪಾಂಡವರು

ಮೇಳವಿಸಿ ನೇಣುಗಳನೆನುತೆ ನೃ

ಪಾಲಕನು ಕಳವಳಿಸಿ ನುಡಿವುದ

ನಾಲಿಸುತೆ ಸಾತ್ಯಕಿ ಕರೆದು ಕೃತವರ್ಮಗಿಂತೆಂದ 


ಎಂದು ಸುಭಟರಿಗರುಹಿ ಸಾತ್ಯಕಿ

ಬಂದು ಕೃಷ್ಣನ ಕಿವಿಯ ಹತ್ತಿರೆ

ನಿಂದು ವದನವ ಚಾಚಿ ಬಿನ್ನಹ ಮಾಡಿದನು ಹದನ

ಮಂದಮತಿಗಳು ತಪ್ಪಿದೊಡೆ ಮನ

ಗುಂದಲಾಗದು ದೇವ ಚಿತ್ತೈ

ಸೆಂದೊಡಸುರಾರಾತಿ ನಗುತಾ ಭೀಷ್ಮಗಿಂತೆಂದ 


ಎಂದು ಸುಭಟರಿಗರುಹಿ ಸಾತ್ಯಕಿ

ಬಂದು ಕೃಷ್ಣನ ಕಿವಿಯ ಹತ್ತಿರೆ

ನಿಂದು ವದನವ ಚಾಚಿ ಬಿನ್ನಹ ಮಾಡಿದನು ಹದನ

ಮಂದಮತಿಗಳು ತಪ್ಪಿದೊಡೆ ಮನ

ಗುಂದಲಾಗದು ದೇವ ಚಿತ್ತೈ

ಸೆಂದೊಡಸುರಾರಾತಿ ನಗುತಾ ಭೀಷ್ಮಗಿಂತೆಂದ 


ಪರಿಣತ ಪ್ರೌಢಿಗಳಿಗಂತಃ

ಕರಣ ನೆನೆವುದು ಸುಜನರಿಗೆ ನಿ

ಷ್ಠುರತೆಗಲ್ಲದೆ ಮನವನೀಯದು ಮಹಿಯ ಮೂಢಜನ

ಕರಗುವುದು ಶಶಿಕಾಂತ ಚಂದ್ರನ

ಕಿರಣ ತಾಗಲು ವಜ್ರಹತಿಯನು

ಧರಿಸಿದಲ್ಲದೆ ಗಿರಿಗಳಳುಕವು ಭೀಷ್ಮಕೇಳೆಂದ  


ದೂತರನು ಕಟ್ತುವುದು ರಾಯರಿ

ಗೇತರುಚಿತವು ನಮ್ಮ ಬಿಗಿಯಲು

ಕಾತರಿಸುತಿದೆ ನಿನ್ನ ಮೊಮ್ಮಂದಿರನು ನೀ ಕರೆಸಿ

ಮಾತನಾಡಿಸಿ ನೋಡು ನಮಗಾ

ಭೀತಿ ತಾನಿಲ್ಲೆನಲು ಗಂಗಾ

ಜಾತ ಧೃತರಾಷ್ಟ್ರನಿಗೆ ನುಡಿದನು ಕೌರವನ ಹದನ 


ರೂಪಯುಕ್ತನರೂಪ ವಿಶ್ವ

ವ್ಯಾಪಿ ದುಗ್ಧಾಂಗೋಧಿವಾಸಿ ಕೃ

ಪಾಪರನ ನಿರುಪಮನ ನಿತ್ಯನ ನಿರ್ಮಳಾತ್ಮಕನ

ವೈಪರೀತ್ಯ ಚರಿತ್ರನನು ಚಿ

ದ್ರೂಪನನು ತನತನಗೆ ಕೌರವ

ಭೂಪತಿಯ ನೇಮದೊಳು ಬಂಧಿಸಲೆಂದು ನೆಗಳಿದರು 


ತುಡುಕಲರಿಯದು ದಿವ್ಯಮಂತ್ರದ

ಗಡಣ ಬೊಮ್ಮಾದಿಗಳ ಸೋಂಕಿನ

ಗೊಡವೆಗಳು ಗೋಚರಿಸಲರಿಯವು ಗರುವ ಹರಿಯಿರವ

ಜಡಮತಿಯ ಬಹು ಮೂಢಜನರವ

ಗಡಿಸಿ ದೇವನ ಬಿಗಿಯಲೆಂದಳ

ವಡಿಸಿದರು ನೇಣುಗಳನೆಂದನು ಭೀಷ್ಮನಾ ನೃಪಗೆ 


ಅವನಿಪತಿ ಕೇಳಿದನು ಕನಲಿದು

ಶಿವಶಿವೆಂದನು ವಿದುರ ಕರೆ ಕೌ

ರವನು ಮಗನೇ ಮೃತ್ಯುವಲ್ಲಾ ಭರತ ಸಂತತಿಗೆ

ಅವಳ ಬರಹೇಳಿತ್ತ ಮಗನಾ

ಟವನು ನೋಡಲಿ ಹೆತ್ತ ಮೋಹದ

ಹವಣುಗಳ ಬೆಸಗೊಳ್ವ ಗಾಂಧಾರಿಯನು ಕರೆಯೆಂದ ೧೦


ಜನಪನಾಜ್ಞೆಯ ಮೇಲೆ ದುರ್ಯೋ

ಧನನ ತಂದರು ಸಭೆಗೆ ಬಳಿಕೀ

ವನಜಮುಖಿಗೀ ಹದನನರುಹಿದರಾಗಳೈತಂದು

ದನುಜರಿಪುವನು ಕಟ್ಟುವೈ ಕೃ

ಷ್ಣನನು ಬಿಗಿವೈ ದಿಟ ಮಗನೆ ಹೆ

ತ್ತೆನಗೆ ಹರುಷವ ತಂದೆಯೆಂದಳು ಮುಳಿದು ಗಾಂಧಾರಿ ೧೧


ನೆಟ್ಟನೆಲೆ ಧೃತರಾಷ್ಟ್ರ ನೃಪನೀ

ನಿಟ್ಟ ಕಿಚ್ಚಿದು ಪಾಪಿಮಗನನು

ಹುಟ್ಟಿದಾಗಳೆ ಬಿಸುಡ ಹೇಳರೆ ಬಾಳುಗೆಡೆದವನ

ಕಟ್ಟುವನು ಗಡ ಕೃಷ್ಣನನು ಕೈ

ಮುಟ್ಟುವನು ಗಡ ಗಗನವನು ಬಲು

ದಿಟ್ಟತನಕಿನ್ನೇನನೆಂದಪೆಯೆಂದಳಿಂದುಮುಖಿ ೧೨


ಮರುಳು ಮಗನೇ ಕೃಷ್ಣರಾಯನ

ಕೆರಳಿಚುವರೇ ಯಾದವರು ನಮ

ಗೆರವಿಗರೆ ವಸುದೇವಗೆಮ್ಮೊಳು ಭೇದವೇ ನಿನಗೆ

ತರಳತನವಿದು ಬೇಡ ಖುಲ್ಲರ

ನೆರವಿಯೊಳಗಾಡಿದೊಡೆ ತಪ್ಪದು

ನರಕವೆಂದನು ಕುರುಪತಿಗೆ ಧೃತರಾಷ್ಟ್ರಭೂಪಾಲ ೧೩


ಎಲೆ ಮರುಳೆ ಧೃತರಾಷ್ಟ್ರ ನಂಟಿನ

ಬಳಕೆವಾತಿನ ಬಂಧುಕೃತ್ಯದ

ಬಳವಿಗೆಯೊಳೀ ನಿನ್ನ ಮಕ್ಕಳ ಬೇಡಿಕೊಳಲೇಕೆ

ಮುಳಿದು ಬಗುಳುವ ನಾಯ್ಗೆ ಚಂದ್ರಮ

ನಳುಕುವನೆ ನರಿಯೊರಲಿದೊಡೆ ಕಳ

ವಳಿಸುವುದೆ ಕಲಿ ಸಿಂಹವೆಂದನು ಖಾತಿಯೊಳು ವಿದುರ ೧೪


ನೊರಜುಹೊಕ್ಕೊಡೆ ಕದಡುವುದೆ ಸಾ

ಗರದ ಜಲ ನೊಣವೆರಗಿದೊಡೆ ಕುಲ

ಗಿರಿಗಳಲ್ಲಾಡುವುವೆ ಕೇಳ್ ಧೃತರಾಷ್ಟ್ರ ಭೂಪಾಲ

ತೆರಳಲರಿವನೆ ಕೊಬ್ಬಿದೊಳ್ಳೆಯ

ಮರಿಗೆ ಗರುಡನು ನಿನ್ನ ಮಕ್ಕಳ

ದುರುಳುತನಕಂಜುವನೆ ಮುರರಿಪುವೆಂದನಾ ವಿದುರ ೧೫


ಲೋಕ ಮೈಮರೆವಂದು ಜಲಧಿಗ

ಳೌಕಿ ಹಳಚುವ ಹೊತ್ತು ತಾನಿಹ

ನೇಕಮೇವಾದ್ವಿತಯ ಪರಮೇಕೈ ಕಹಂಯೆಂದು

ಏಕನಾತುಮನೆಂದು ವೇದಾ

ನೀಕ ಕೈವಾರಿಸಲು ಮೆರೆವನಿ

ರಾಕೃತಿಯ ಪರಬೊಮ್ಮತತ್ತ್ವವದೀತ ನೋಡೆಂದ ೧೬


ಸಲಿಲಮಯವಾದಖಿಳ ಭುವನಾ

ವಳಿಯೊಳೊಮ್ಮೆ ವಿರಿಂಚಿ ತಾನೇ

ಮುಳುಗುತೈತಂದಾಲದೆಲೆ ಮಂಚದೊಳು ಪವಡಿಸಿದ

ಹೊಳೆವನಿವನಾರೆಂದು ಜಠರದೊ

ಳಿಳಿದು ತದ್ಬ್ರಹ್ಮಾಂಡ ಶತದೊಳು

ಹೊಲಬುಗಿಡೆ ಹೊಕ್ಕುಳೊಳು ಬೊಮ್ಮನನೀತನುಗುಳಿದನು ೧೭


ಲೀಲೆಯಿಂದ ರಜೋಗುಣಕೆ ಮನ

ಮೇಳವಾದರೆ ಮಾಡುವನು ಭುವ

ನಾಳಿಯನು ಸಲಹುವನು ಸಾತ್ವಿಕ ಗುಣಕೆ ಮನ ಮುರಿಯೆ

ಮೇಲೆ ತಾಮಸಗುಣಕೆ ತಿರುಗಿದೊ

ಡಾಲಯವ ಮಾಡುವನು ಗುಣಸಂ

ಮೇಳದೊಳು ಗುಣರಹಿತನೆಂಬ ಮಹಾತ್ಮ ನೋಡೀತ ೧೮


ಸಂಗಿಯೆನಿಸನು ಜಗವ ಹುಟ್ಟಿಸಿ

ನುಂಗಿದೊಡೆ ನಿಷ್ಕರುಣಿಯೆನಿಸನು

ಅಂಗರಕ್ಷೆಯ ಮಾಡಿ ಮೋಹಿತನಲ್ಲ ಮೂಜಗಕೆ

ಜಂಗಮ ಸ್ಥಾವರಕೆ ಚೈತ

ನ್ಯಾಂಗನುತ್ತಮ ಘನಕೆ ಘನನಣು

ಮಿಂಗೆ ತಾನಣುವೆನಿಪ ಪರತರವಸ್ತು ನೋಡೆಂದ ೧೯


ಅವನೊಬ್ಬನ ಬೆಳಗಿನಿಂದವೆ

ಜೀವನವು ರವಿಶಶಿಗಳಿಗೆ ಮಗು

ಳಾವನೊಬ್ಬನ ನೇಮದಿಂದವೆ ಪವನ ಪಾವಕರು

ಜೀವಿಸುವರಿಂತೊಬ್ಬನುರುಲೀ

ಲಾ ವಿನೋದದೆ ಬ್ರಹ್ಮ ವಿಷ್ಣು ಶಿ

ವಾವಳಿಗಳುದ್ಭವಿಸಿ ತೋರುವುವಾತ ನೋಡೀತ ೨೦


ಈತನಾ ಮಧುಕೈಟಭರ ಮುರಿ

ದಾತನುದಧಿಯೊಳಿಳಿದು ವೇದವ

ನೀತ ತಂದನು ಜಯವಿಜಯರಾದೈತ್ಯ ಜನ್ಮವನು

ಈತ ತೊಡೆದನು ಪೌಂಡ್ರಕನನಂ

ದೀತ ಕೊಂದನು ಹಂಸಡಿಬಿಕರ

ನೀತನೊರಸಿದನರಸ ಚಿತ್ತೈಸೆಂದನಾ ವಿದುರ ೨೧


ಪೊಸತಲಾ ಶ್ರುತಿಕೋಟಿಗಳು ಉಪ

ನಿಷದ ರಾಶಿಗಳರಸಿ ಕಾಣವು

ಬಸಿರೊಳಗೆ ಬ್ರಹ್ಮಾಂಡಕೋಟಿಯ ಧರಿಸಿಕೊಂಡಿಹನು

ನುಸಿಗಳೀ ಕರ್ಣಾದಿ ದುಷ್ಟ

ಪ್ರಸರ ಮಂತ್ರಿಗಳಿವನ ನೇಮದೊ

ಳಸುರರಿಪುವನು ಬಿಗಿಯಲಳವಡಿಸಿದರು ನೇಣುಗಳ ೨೨


ಪರಮತತ್ತ್ವವೆ ತದ್ವಚನಗೋ

ಚರವವಿದ್ಯಾಶಕ್ತಿ ಬೊಮ್ಮದ

ವರಮಹತ್ತೆಂದೆನಿಸಿತಾತನ ಮಗನಹಂಕಾರ

ಸ್ಪುರದಹಂಕಾರಕ್ಕೆ ಮಕ್ಕಳು

ಮೆರೆದರಿವರು ಭೂತವೆಸರೊಳು

ಹರಹಿದಾವನ ದೆಸೆಯೊಳುದಿಸಿದುದಾತ ನೋಡೀತ ೨೩


ಸೂಚಿಸುವ ಶ್ರುತಿನಿಚಯ ಬರೆಬರೆ

ನಾಚಿದವು ವೇದಾಂತ ನಿಚಯದ

ವಾಚನೆಗಳಳವಳಿದು ನಿಂದವು ನಿಜವ ಕಾಣಿಸದೆ

ಆಚರಿಸಲಳವಲ್ಲ ಮುನಿಗಳ

ಗೋಚರಕೆ ಮನಗುಡದ ಹರಿಯನು

ನೀಚರಿವದಿರು ಬಿಗಿಯಲಳವೇ ಭೂಪ ಕೇಳೆಂದ ೨೪


ವಿದುರನಿಂತೆನುತಿರಲು ಮಿಂಚಿನ

ಹೊದರು ಹುರಿಗೊಂಡಂತೆ ರವಿ ಶತ

ಉದುರಿದವು ಮೈ ಮುರಿದು ನಿಂದಡೆ ದೇವರಂಗದಲಿ

ಸದೆದುದಾಸ್ಥಾನವನು ಘನತೇ

ಜದಲಹರಿಲೀಲೆಯಲಿ ಹರಿ ತೋ

ರಿದನು ನಿರುಪಮ ವಿಶ್ವರೂಪವನಾ ಮಹಾಸಭೆಗೆ ೨೫


ಮಗುಳೆ ಗಜಬಜವಾಯ್ತು ಭೀಷ್ಮಾ

ದಿಗಳ ನುಡಿಗಳು ಬಳಲಿದವು ತಾ

ಳಿಗೆಗೆ ನೀರಸವಾಗೆ ಬೆಂಡೆದ್ದೊದರಿದನು ಭೂಪ

ಬಗೆದು ತಮತಮಗೆದ್ದು ನೃಪನೋ

ಲಗದೊಳಸುರಾಂತಕನ ಕೈಗಳ

ಬಿಗಿಯಲಂದನುವಾಗೆ ಹಿಡಿದನು ವಿಶ್ವರೂಪವನು ೨೬


ಚರಣದುಂಗುಟದಲ್ಲಿ ದೇವರು

ತುರುಗಿದರು ನೊಸಲಿನೊಳು ಕಮಲಜ

ನುರದೊಳಗ್ಗದ ರುದ್ರನಾಸ್ಯದೊಳಗ್ನಿ ವಾಯುಗಳು

ಬೆರಳೊಳಿಂದ್ರಾದಿಗಳು ನಯನಾಂ

ಬುರುಹದೊಳು ರವಿ ನಾಭಿಯೊಳು

ವರಭುಜಾಗ್ರದೊಳಖಿಳ ದಿಕ್ಪಾಲಕರು ರಂಜಿಸಿತು ೨೭


ಸುರರು ಖಚರರು ಕಿನ್ನರರು ಕಿಂ

ಪುರುಷರನುಪಮ ಸಿದ್ಧ ವಿದ್ಯಾ

ಧರರು ವಸುಗಳು ಮನುಗಳಾದಿತ್ಯರು ಭುಜಂಗಮಯ

ಗರುಡ ಗಂಧರ್ವಾಶ್ವಿನಿ ದೇ

ವರುಗಳಖಿಳಾಪ್ಸರಿಯರೆಸೆದರು

ಪರಮ ಪುರುಷನ ರೋಮರೋಮದ ಕುಳಿಯ ಚೌಕದೊಳು ೨೮


ಬಲದ ಭುಜದಲಿ ಪಾರ್ಥನೆಡದಲಿ

ಹಲಧರನು ಚರಣದಲಿ ಧರ್ಮಜ

ಕಲಿವೃಕೋದರ ನಕುಲ ಸಹದೇವಾದಿ ಯಾದವರು

ಲಲಿತ ಕಾಂತಿಯೊಳಖಿಳತಾರಾ

ವಳಿಗಳಮಳ ಗ್ರಹವಿರಲು ತೊಳ

ತೊಳಗಿ ಮೆರೆದನು ವಿಶ್ವರೂಪ ವಿಹಾರಿ ಮುರವೈರಿ ೨೯


ಕಿವಿಗಳಲಿ ಕಂಗಳಲಿ ನಾಸಾ

ವಿವರದಲಿ ಹೊಗೆ ಮಸಗಿ ದಳ್ಳುರಿ

ತಿವಿದುದಾಕಾಶವನು ಕವಿದುದು ಕಾಂತಿ ದೆಸೆದೆಸೆಗೆ

ರವಿಯ ತಗಡೆನೆ ತಳಿತವಾಯುಧ

ನಿವಹ ಸಾಸಿರ ಭುಜದ ಬಹುಳತೆ

ಯವಗಡಿಸಿ ವೈಕುಂಠನೆಸೆದನು ವಿಶ್ವರೂಪದಲಿ ೩೦


ಅರಳಮಳೆ ಸೂಸಿದವು ದುಂದುಭಿ

ಮೊರೆದುದಾಕಾಶದೊಳು ಮುದದಿಂ

ಧರಣಿ ಬಿರಿದುದು ತನುವನೂಕಿತು ಜಲಧಿ ದೆಸೆದೆಸೆಗೆ

ಕರಿಕಮಠರುಬ್ಬಾಳುತನ ಮಿ

ಕ್ಕಿರೆ ಮಹಾದ್ಭುತವಾಯ್ತು ಕಂಡರು

ಹರಿಯ ರೂಪವನೊಬ್ಬ ಕೌರವನಲ್ಲದುಳಿದವರು ೩೧


ತಳುಕನುಗಿದೀಡಾಡಿ ಪರಿಣತ

ಪುಳಕ ಜಲದೊಳು ನೆನೆದು ಹರುಷದ

ಜಲಧಿಯೊಳು ಮನಮುಳುಗಿ ಭಕ್ತಿಯ ಭಾರದೊಳು ಕುಸಿದು

ಅಳುಕಿ ತಮತಮಗೆದ್ದು ಮುನಿಸಂ

ಕುಲ ಸಹಿತ ಗಾಂಗೇಯ ಕೃಪ ನಿ

ರ್ಮಲ ವಿದುರ ಗುರು ಸಂಜಯಾದಿಗಳೆರಗಿದರು ಪದಕೆ ೩೨


ಒಳಗೆ ಹೊಳೆದನು ಬಾಹ್ಯದೊಳು ಪ್ರ

ಜ್ವಲಿಸಿದನು ತಾನಲ್ಲದನ್ಯರ

ಬಳಕೆ ಮತ್ತೊಂದಿಲ್ಲದಂತಿರೆ ಕೂಡೆ ತೋರಿದನು

ಒಳಗೆ ಬಿಗಿವೆವೊ ಹೊರಗೆ ಕೃಷ್ಣನ

ಸಿಲುಕಿಸುವೆವೋ ತಿಳಿಯೆ ಕೃಷ್ಣರು

ಹಲಬರಾಗಿಹರಾರ ಕಟ್ಟುವೆವೆಂದರಾ ಖಳರು ೩೩


ಅನುಪಮಾದ್ವಯದಲ್ಲಿ ಮುಳ್ಳಿನ

ಮೊನೆಗೆ ಮೋಹುವೊಡಿಲ್ಲ ತೆರಹೆಂ

ಬಿನಿತು ಪರಿಪೂರ್ಣದಲಿ ಸಚ್ಚಿನ್ಮಾತ್ರರೂಪದೊಳು

ಮನದ ಬಗೆ ಮುಟ್ಟದ ಮಹಾಮಹಿ

ಮನನು ಕಟ್ಟುವೆ ವೆಂತೆನುತೆ ತಮ

ತಮಗೆ ಕರ್ಣಾದಿಗಳು ಕೈಗಳ ಕದಪ ತೂಗಿದರು ೩೪


ಅಮಿತ ಕರುಣಾಸಿಂಧು ನೀನನು

ಪಮಚರಿತ್ರನು ನಿಮ್ಮಡಿಯ ಪದ

ಕಮಲ ದರುಶನದಿಂದ ಹಿಂಗಿದವಘದರಾಶಿಗಳು

ಸಮತೆಯಲಿ ನೀನೋಡು ಶರಣರ

ಮಮತೆ ಬೇಹುದು ಜೀಯ ಲಕ್ಷ್ಮೀ

ರಮಣ ಕೃಪೆ ಮಾಡೆನುತ ಮೈಯಿಕ್ಕಿದಳು ಗಾಂಧಾರಿ ೩೫


ಮಾನ ನಿನ್ನದು ಭಕ್ತ ಜನದಪ

ಮಾನ ನಿನ್ನದು ನಿನ್ನ ಶರಣರ

ಹಾನಿ ವೃದ್ಧಿಗಳೆಲ್ಲ ನಿನ್ನದು ಬೇರೆ ಗತಿಯುಂಟೆ

ಅನತರ ತೇಜೋಭಿಮಾನವ

ನೀನೊಲಿದು ಸಲಹೆನುತೆ ಭಯದಲಿ

ಭಾನುಮತಿ ಮೈಯಿಕ್ಕಿದಳು ಮುರಹರನ ಚರಣದೊಳು ೩೬


ಕಂಗಳನು ಕರುಣಿಸಿದನಂಧನೃ

ಪಂಗೆ ಬಳಿಕೀ ಕೃಷ್ಣರಾಯನ

ಮಂಗಳ ಶ್ರೀ ಮೂರ್ತಿಯನು ಮನದಣಿಯೆ ನೋಡಿದನು

ಕಂಗಳಡಗಲಿ ದೇವ ನಿಮ್ಮೀ

ಯಂಗವಟ್ಟವ ಕಂಡು ಮಗುಳೀ

ಕಂಗಳಿತರವ ಕಾಣಲಾಗದು ಕೃಪೆಯ ಮಾಡೆಂದ ೩೭


ತಾತ ಹೆದರದಿರೀ ಮುಕುಂದನ

ಕೈತವಕೆ ಬೆಚ್ಚದಿರು ಸಂಧಿಯ

ಮಾತು ತಾನಿದು ಹೃದಯವೇ ಬೆಸಗೊಳ್ಳಿ ಮುರಹರನ

ಈತನಂತರ್ಯಾಮಿ ಜೀವ

ವ್ರಾತದಲಿ ಜನಜನಿತವಿದು ಜಗ

ವೀತನಾಜ್ಞೆಯೊಳೊಲೆವುದೆಂದನು ಕೌರವರ ರಾಯ ೩೮


ಎನ್ನ ಹೃದಯದೊಳಿರ್ದು ಮುರಿವನು

ಗನ್ನದಲಿ ಸಂಧಿಯನು ರಿಪುಗಳೊ

ಳಿನ್ನು ನಿನ್ನೊಳಗಿವರೊಳಿದ್ದಾ ಹದನ ತಾನರುಪಿ

ಭಿನ್ನನಂತಿರೆ ತೋರಿ ಭಿನ್ನಾ

ಬಿನ್ನನೆನಿಸಿಯೆ ಮೆರೆವ ತಿಳಿಯಲ

ಭಿನ್ನ ನೀ ಮುರವೈರಿ ನಾವಿನ್ನಂಜಲೇಕೆಂದ ೩೯


ಹಳಚುವುವು ಹಾಹೆಗಳು ಸೂತ್ರವ

ನಲುಗಿದೊಡೆ ತತ್ಪುಣ್ಯ ಪಾಪಾ

ವಳಿಗಳಾ ಹಾಹೆಗಳಿಗುಂಟೇ ಸೂತ್ರಧರನಿರಲು

ಕೊಲುವನನ್ಯರನನ್ಯರಿಂದವೆ

ಕೊಲಿಸುವನು ಕಮಲಾಕ್ಷನಲ್ಲದೆ

ಉಳಿದ ಜೀವವ್ರಾತಕೀ ಸ್ವಾತಂತ್ರ್ಯವಿಲ್ಲೆಂದ ೪೦


ಇಳಿದನವನಿಗೆ ಧಾರುಣಿಯ ಹೊರೆ

ಗಳೆಯಲೋಸುಗವಿಲ್ಲಿ ನಮ್ಮೊಳ

ಗೊಳಗೆ ವೈರವ ಬಿತ್ತಿ ಬರಿಕೈವನು ಮಹಾಬಲವ

ಛಲಕೆ ಮಣಿಯದೆ ರಾವಣಾದಿಗ

ಳಳಿದರಿದಲಾ ಕೀರ್ತಿ ಕಾಯವಿ

ದಳಿವುದಗ್ಗದ ಕೀರ್ತಿಯುಳಿವುದು ಅಂಜಲೇಕೆಂದ ೪೧


ನಾವು ಸಂಧಿಯನೊಲಿವೆವೆಮ್ಮಯ

ಭಾವದಲಿ ಹುಳುಕಿಲ್ಲ ಸಂಪ್ರತಿ

ದೇವನಭಿಮತವಲ್ಲ ಬಲ್ಲೆನು ಮುರ್ಹರನ ಮನವ

ನೀವು ಮೇಗರೆಯರಿತದವರೀ

ರಾವಣಾರಿಯ ಬಗೆಯ ಬಲ್ಲೆನು

ಸಾವೆನೀತನ ಕೈಯಬಾಯಲಿ ಭೀತಿ ಬೇಡೆಂದ ೪೨


ಮಣಿದು ಬದುಕುವನಲ್ಲ ಹಗೆಯೊಳು

ಸೆಣಸಿ ಬಿಡುವವನಲ್ಲ ದಿಟಧಾ

ರುಣಿಯ ಸಿರಿಗಳುಪುವವನಲ್ಲಳುಕಿಲ್ಲ ಕಾಯದಲಿ

ರಣ ಮಹೋತ್ಸವವೆಮ್ಮ ಮತ ಕೈ

ದಣಿಯೆ ಹೊಯ್ದಾಡುವೆವು ಕೃಷ್ಣನ

ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ ೪೩


ಎನಲು ನಸುನಗುತಸುರರಿಪು ಮು

ನ್ನಿನ್ನ ಮನುಷ್ಯಾಕಾರವನು ಮಗು

ಳನುಕರಿಸಿ ಧೃತರಾಷ್ಟ್ರ ಭೀಷ್ಮರಿಗೆಂದನೀ ಹದನ

ಘನ ಸುಯೋಧನ ಪಾಂಡುವಿನ ನಂ

ದನರೊಳಾದ ವಿವಾದ ನಮಗೇ

ಕೆನುತ ರಾಜಾಲಯವನಸುರಧ್ವಂಸಿ ಹೊರವಂಟ  ೪೪


ಬಂದು ವಿದುರನ ಮನೆಗೆ ದೇವ ಮು

ಕುಂದ ಕುಂತಿಯ ಕರೆದು ನಿನ್ನಯ

ಕಂದರೈವರ ಮೇಲೆ ಕೌರವ ನೃಪನ ಖತಿ ಹಿರಿದು

ಇಂದು ಮುರಿದುದು ಸಂಧಿ ನಿನ್ನಯ

ಕಂದ ಕರ್ಣನ ಬೇಡಿಕೊಳು ನೀ

ನೆಂದು ನೇಮಿಸಿ ಮರಳಿದನು ಮುರವೈರಿ ಹರುಷದಲಿ ೪೫


ವಿದುರ ಭಾರದ್ವಾಜ ಗೌತಮ

ನದಿಯ ಮಗ ಧೃತರಾಷ್ಟ್ರನಾತನ

ಸುದತಿ ಕರ್ಣ ವಿಕರ್ಣ ಶಲ್ಯ ಸುಬಾಹು ಗುರುಸುತರು

ವದನದುತ್ಸವವಡಗಿ ಕೃಷ್ಣನ

ಪದವ ನೋಲೈಸುತ್ತ ಬರೆ ಕರು

ಣದಲಿ ಮುರಹರನವರನುಚಿತೋಕ್ತಿಯಲಿ ಬೀಳ್ಕೊಟ್ಟ ೪೬


ನಯದೊಳೇಕಾಂತದೊಳು ಸಲೆ ಕಾ

ರಿಯವ ನುಡಿದವನಾಶೆ ವಾಸಿಯ

ಬಯಸಲಾಗದು ಹಿತವನೇ ಬಯಸುವುದು ಕುರುಕುಲಕೆ

ನಿಯತವಿದು ಪಾಂಡವರೊಡನೆ ಸಂ

ಧಿಯೆ ಸರಸ ಸಮರಾಂಗವೀಯ

ನ್ವಯಕೆ ನಿರ್ಣಯವೆಂದು ನೀವಾತಂಗೆ ಸಾರುವುದು ೪೭


ಎಂದು ಗಾಂಗೇಯಾದಿಗಳನರ

ವಿಂದ ನಾಭನು ಬೀಳುಕೊಟ್ಟನು

ನಿಂದು ತಾಂ ರವಿಸುತನ ಕರೆದನು ರಥದ ಹೊರೆಗಾಗಿ

ಬಂದು ಕಿರಿದೆಡೆಗಾಗಿ ಕಳುಹುವು

ದೆಂದು ನೇಮಿಸಿ ಬಳಿಕ ತಾಪಸ

ವೃಂದವನು ಕಳುಹಿದನು ಗದುಗಿನ ವೀರನಾರಯಣ ೪೮


ಸಂಕ್ಷಿಪ್ತ ಭಾವ



ಕೃಷ್ಣನನ್ನು ಬಂಧಿಸಲು ದುರ್ಯೋಧನನ ಪ್ರಯತ್ನವಿಶ್ವರೂಪ ದರ್ಶನ.


ದುರ್ಯೋಧನ ತನ್ನವರೊಂದಿಗೆ ಮಂತ್ರಾಲೋಚನಾ ಸಭೆಯಲ್ಲಿ ಚಿಂತಿಸಿದನುಎಲ್ಲರೂ ಕೃಷ್ಣನನ್ನುಜರಿದರುಇವನನ್ನು ಹಗ್ಗದಿಂದ ಬಂಧಿಸಿಬಿಟ್ಟರೆ ಪಾಂಡವರ ಬಲವು ಕುಗ್ಗುವುದುಗಾಳಿ ಇಲ್ಲದಿದ್ದರೆಬೆಂಕಿಯು  ತಾನಾಗಿ ಆರುತ್ತದೆ ಎಂದು ಆಲೋಚಿಸಿದರು ವಿಚಾರ ಸಾತ್ಯಕಿಗೆ ತಿಳಿದು ಅವನುಕೃತವರ್ಮನಿಗೆ ಆಯುಧಗಳೊಂದಿಗೆ ಸಜ್ಜಾಗಿರುವಂತೆಯೂ ಸಮಯ ಬಂದರೆ ಸೂಚನೆ ಕೊಟ್ಟತಕ್ಷಣ ಬರುವಂತೆಯೂ ವ್ಯವಸ್ಥೆ ಮಾಡಿದನುಕೃಷ್ಣನ ಬಳಿ ಬಂದು  ವಿಚಾರ ತಿಳಿಸಿದನುಕೃಷ್ಣನುನಕ್ಕು ಭೀಷ್ಮನಿಗೆ ಹೇಳಿದನುದೂತರನ್ನು ಕಟ್ಟುವುದು ರಾಜನೀತಿಯಲ್ಲವೆಂದು ಭೀಷ್ಮನುಧೃತರಾಷ್ಟ್ರನ ಗಮನಕ್ಕೆ ತಂದನುದಿವ್ಯಮಂತ್ರದ ಗಡಣಕ್ಕೆ ಸಿಗದ ಕೃಷ್ಣನನ್ನು ಮೂಢರು ಹಗ್ಗದಿಂದಬಂಧಿಸಲು ಹೊರಟಿರುವುದು ಎಂತಹ ವಿಪರ್ಯಾಸ.


ಧೃತರಾಷ್ಟ್ರನು ಇದನ್ನು ಕೇಳಿ ಕಂಗೆಟ್ಟು ಗಾಂಧಾರಿಯನ್ನು ಕರೆಸಿದನುಇಬ್ಬರೂ ಮಗನಿಗೆ ಬುದ್ಧಿಹೇಳಲು ಪ್ರಯತ್ನಿಸಿ ಸೋತರುವಿದುರನು ಈಗ ಸಿಟ್ಟುಗೊಂಡು ಏನು ಫಲನಾಯಿ ಬೊಗಳಿದರೆಚಂದ್ರ ಅಳುಕುವನೆಮುರರಿಪು ನಿನ್ನ ಮಕ್ಕಳ ದುರುಳತನಕ್ಕೆ ಅಂಜುವನೆ ಎಂದನುಪರಮಾತ್ಮನು ಇಡೀ ಲೋಕದ ವ್ಯವಸ್ಥೆ ನೋಡುವವನುಸೃಷ್ಟಿ ಸ್ಥಿತಿ ಮತ್ತು ಲಯಗಳಿಗೆಒಡೆಯನುಇವನಿಂದಲೆ ಜಗತ್ತು ನಡೆಯುವುದುಇವನೇ  ಮಧುಕೈಟಭರನ್ನುಹಂಸಡಿಬಿಕರನ್ನುರಾವಣನನ್ನು ಸಂಹರಿಸಿದವನು ಎಂದು ಕೃಷ್ಣನ ಮಹಿಮೆಯನ್ನು ವಿದುರನುಕೊಂಡಾಡಿದನು.


ದುರ್ಯೋಧನನ ಕಡೆಯವರು ಕೃಷ್ಣನನ್ನು ಕಟ್ಟಲು ನೋಡಿದರುಕೃಷ್ಣನು ತಕ್ಷಣ ತನ್ನ ವಿರಾಟ್ರೂಪ ತಾಳಿದಭೀಷ್ಮಾದಿಗಳು ಮೂಕರಾದರುಇಡೀ ಶರೀರದಲ್ಲಿ ನಾನಾ ರೀತಿಯದೇವದೇವತೆಗಳು ಮೈದೋರಿದರು.ಯಕ್ಷ ರಾಕ್ಷಸ ಗಂಧರ್ವಕಿನ್ನರರುಪಾಂಡವರುಸಕಲಭೂಪಾಲಕರು ಕಾಣಿಸಿದರುದೆಸೆದೆಸೆಗೆ ಕಾಂತಿ ಚಿಮ್ಮಿತುದೇವತೆಗಳು ಹೂಮಳೆಗರೆದರುಗುರುದ್ರೋಣಕೃಪಸಕಲ ಮುನಿಗಣ ಎಲ್ಲರೂ ಪಾದಕ್ಕೆರಗಿದರು.


ಎಲ್ಲೆಡೆಯೂ ಕೃಷ್ಣನೇ ಕಾಣುತ್ತಿರಲು ಯಾರನ್ನು ಕಟ್ಟುವುದೆಂದು ಕರ್ಣಾದಿಗಳು ಬೆದರಿದರುಧೃತರಾಷ್ಟ್ರ ಮತ್ತು ಗಾಂಧಾರಿಯರು ಸಹಾ ದಿವ್ಯ ಚಕ್ಷುಗಳ ಸಹಾಯದಿಂದ ಕೃಷ್ಣನ ವಿಶ್ವರೂಪವನ್ನುನೋಡಿದರುಇದನ್ನು ನೋಡಿದ ಮೇಲೆ ಬೇರೇನೂ ಬೇಡದೃಷ್ಟಿಯನ್ನು ಮರಳಿ ತೆಗೆದುಕೋಎಂದು ಬೇಡಿದನುದುರ್ಯೋಧನನು ತಂದೆಗೆ ಧೈರ್ಯ ಹೇಳಿದನುಇವನಿಗೆ ಏಕೆಅಂಜುವಿರೆಂದನು.


ತನ್ನ ಮನದಲ್ಲಿ ಕುಳಿತು ಸಂಧಿಯು ಮುರಿಯುವಂತೆ ಮಾಡುತ್ತಿರುವವನು ಇವನೇ ಎಂದನುನಮ್ಮನಮ್ಮಲ್ಲಿ ವೈರವನ್ನು  ಮೂಡಿಸಿದವನೂ ಇವನೇಇಷ್ಟಾದ ಮೇಲೆ ನಾನು ಹಗೆಗಳಿಗೆತಲೆಬಾಗುವವನಲ್ಲಕೃಷ್ಣನನ್ನು ಕೆಣಕಿದರೆ ಕೈವಲ್ಯ ಸಿಗುವುದು.


ನಂತರ ಕೃಷ್ಣನು ಮೊದಲಿನ ರೂಪವನ್ನು ತಾಳಿದನುರಾಜಾಲಯದಿಂದ ಹೊರಟನುವಿದುರನಮನೆಗೆ ಬಂದು  ಕುಂತಿಯನ್ನು ಕರೆದು ಎಲ್ಲ ವಿವರಿಸಿ ನಿನ್ನ ಕಂದ ಕರ್ಣನನ್ನು ಬೇಡುವುದು ಎಂದುಹೇಳಿದನುಮುನಿಗಣವನ್ನೆಲ್ಲ‌ ಉಚಿತದಲಿ ಬೀಳ್ಕೊಟ್ಟನುಗಾಂಗೇಯಾದಿಗಳನ್ನುಸಮಾಧಾನಗೊಳಿಸಿ ಕಳಿಸಿದನುನಂತರ ಕರ್ಣನನ್ನು ಕರೆದುಕೊಂಡು ಸ್ವಲ್ಪ ದೂರಹೋಗಿಬರೋಣವೆಂದು ಹೊರಟನು.



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ