ಯಶೋವರ್ಮ
ಶಿಕ್ಷಣ ತಜ್ಞರೂ ಎಸ್‌ಡಿಎಂ ಎಜುಕೇಶನ್ ಸೊಸೈಟಿ ಕಾರ್ಯದರ್ಶಿಗಳೂ ಆಗಿದ್ದ ಡಾ. ಬಿ.ಯಶೋವರ್ಮ ನಿಧನರಾಗಿದ್ದಾರೆ. ಇವರಿಗೆ 66 ವರ್ಷ ವಯಸ್ಸಾಗಿತ್ತು.
ಯಶೋವರ್ಮ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಪತ್ನಿ, ಡಾ. ಹೇಮಾವತಿ ಹೆಗ್ಗಡೆಯವರ ಸಹೋದರ.
ಯಶೋವರ್ಮ ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿಪ್ರಾಂಶುಪಾಲರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಯಶೋವರ್ಮ ಅವರು ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಂಶುಪಾಲರ ಸಂಘದ ಅಧ್ಯಕ್ಷತೆಯೂ ಸೇರಿದಂತೆ ಹಲವಾರು ಹುದ್ದೆಗಳ ಮೂಲಕ ಸೇವೆ ಸಲ್ಲಿಸಿದ್ದರು.
ಯಶೋವರ್ಮ ಅವರು ಎಸ್‌ಡಿಎಂಸಿ ಉಜಿರೆಯ ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಕಾಲೇಜುನ್ಯಾಕ್‌ನಿಂದ ಸತತ ಮೂರು ಬಾರಿ 'ಎ' ದರ್ಜೆಯ ಮಾನ್ಯತೆ ಪಡೆದಿತ್ತು. ಕಾಲೇಜು ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆಯಿತು.
1986ರಲ್ಲಿ ಸೈಕಾಲಜಿ ಕ್ಷೇತ್ರದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದ ಯಶೋವರ್ಮ ಅವರುಸಸ್ಯಶಾಸ್ತ್ರದಲ್ಲಿಯೂ ಸಾಕಷ್ಟು ಪರಿಣತಿ
ಪಡೆದಿದ್ದರು. ಅವರು ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಕಟಣೆಗಳಲ್ಲೂ ಪಾತ್ರವಹಿಸಿದ್ದರು.
ಅಗಲಿದ ಚೇತನಕ್ಕೆ ನಮನ.
Respects to departed soul educationist Dr. B. Yasho Varma
ಕಾಮೆಂಟ್‌ಗಳು