ಕೆ.ಸಿಎನ್ ಚಂದ್ರಶೇಖರ್
ಕೆ. ಸಿ. ಎನ್. ಚಂದ್ರಶೇಖರ್
ಕೆ. ಸಿ. ಎನ್. ಚಂದ್ರಶೇಖರ್ ಕನ್ನಡ ಚಲನಚಿತ್ರರಂಗದ ಅದ್ಭುತ ಶಕ್ತಿಯಾಗಿದ್ದವರು. ಇಂದು ಅವರಸಂಸ್ಮರಣೆ ದಿನ.
ಚಲನಚಿತ್ರ ನಿರ್ಮಾಣ, ವಿತರಣೆ ಮತ್ತು ಪ್ರದರ್ಶನಗಳಲ್ಲಿ ಕೆ. ಸಿ. ಎನ್. ಕುಟುಂಬದ ಕೊಡುಗೆಬಹುದೊಡ್ಡದು. ಕೆ.ಸಿ. ಎನ್. ಚಂದ್ರಶೇಖರ್ ಈ ಕಾರ್ಯಗಳ ಜೊತೆಗೆ ಚಲನ ಚಿತ್ರ ವಾಣಿಜ್ಯಮಂಡಳಿ ಮತ್ತು ದಕ್ಷಿಣ ಭಾರತೀಯ ಚಲನಚಿತ್ರ ರಂಗ, ಭಾರತೀಯ ಚಲನಚಿತ್ರ ಒಕ್ಕೂಟಗಳನೇತೃತ್ವ ವಹಿಸಿ ಎಲ್ಲ ರೀತಿಯಲ್ಲಿ ಚಲನಚಿತ್ರರಂಗದ ಸಮನ್ವಯಕಾರರಂತಿದ್ದವರು. ತೂಕದಮಾತು, ಸನ್ನಡತೆ, ಸ್ನೇಹಪರತೆ ಅವರ ವಿಶಿಷ್ಟ ಗುಣಗಳು.
ರೇಷ್ಮೆ ಉದ್ಯಮದಲ್ಲಿದ್ದು ಕನ್ನಡ ಚಿತ್ರರಂಗದಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸಿದ ಕೆ. ಸಿ. ಎನ್. ಗೌಡರ ಪುತ್ರರಾಗಿ, ಅವರ ಮಾರ್ಗದರ್ಶನದಲ್ಲಿ ಬೆಳೆದ ಕೆ. ಸಿ. ಎನ್. ಚಂದ್ರಶೇಖರ್ ಮುಂದೆಬೆಳೆದ ಹಾದಿ ಬಲು ದೊಡ್ಡದು. ಇವರ ಕುಟುಂಬ ದೊಡ್ಡಬಳ್ಳಾಪುರದಲ್ಲಿ ರಾಜ್ಕಮಲ್, ಬೆಂಗಳೂರಿನಲ್ಲಿ ಊರ್ವಶಿ ಮತ್ತು ನವರಂಗ್ ಚಿತ್ರಮಂದಿರಗಳ ಒಡೆತನ ಹೊಂದಿತ್ತು. ಕೆ. ಸಿ. ಎನ್. ಚಂದ್ರಶೇಖರ್ ಅವರು ಬೆಂಗಳೂರಿನಲ್ಲಿ ಬಿ. ಕಾಂ. ಓದಿದರು.
ಪದವಿ ವಿದ್ಯಾಭ್ಯಾಸ ಪೂರೈಸಿದ ನಂತರ ಚಿತ್ರೋದ್ಯಮದಲ್ಲಿ ಪೂರ್ಣ ತೊಡಗಿಕೊಂಡಚಂದ್ರಶೇಖರ್ 'ದಾರಿತಪ್ಪಿದ ಮಗ' ಚಿತ್ರದ ಸಹನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಮುಂದೆ ಹುಲಿಯ ಹಾಲಿನ ಮೇವು, ಬಬ್ರುವಾಹನ, ಅಂತ ಮುಂತಾದ ಪ್ರಸಿದ್ಧಚಿತ್ರಗಳನ್ನೊಳಗೊಂಡಂತೆ ಅನೇಕ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದರು.
ಐವತ್ತಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಕೆ.ಸಿ. ಎನ್. ಚಂದ್ರಶೇಖರ್ 500ಕ್ಕೂಹೆಚ್ಚು ಚಿತ್ರಗಳ ವಿತರಣೆ ಮಾಡಿದ್ದರು. ಸೆನ್ಸಾರ್ ಮಂಡಳಿ, ಭಾರತೀಯ ಪನೋರಮಾ ವಿಭಾಗ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿ, ರಾಜ್ಯ ಚಲನಚಿತ್ರ ಪ್ರಶಸ್ತಿ ಸಲಹಾ ಸಮಿತಿ ಹೀಗೆಎಲ್ಲೆಲ್ಲಿಯೂ ಆಹ್ವಾನಿತರಾಗಿದ್ದರು. ಮೂರು ಬಾರಿ ಭಾರತೀಯ ಚಲನಚಿತ್ರ ಒಕ್ಕೂಟದಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.
ಕೆಸಿಎನ್ ಸಾಹಿತ್ಯದ ಉತ್ತಮ ಓದುಗರೂ ಆಗಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕನ್ನಡ ಚಲನಚಿತ್ರ ಸಾಹಿತ್ಯ ಕಮ್ಮಟ ಏರ್ಪಡಿಸಿಭಾರತದ ಹೆಸರಾಂತ ಚಿತ್ರ ನಿರ್ದೇಶಕರು ಮತ್ತು ಸಾಹಿತಿಗಳನ್ನು ಒಂದೆಡೆ ತಂದಿದ್ದರು. ಕನ್ನಡಚಲನಚಿತ್ರ ಇತಿಹಾಸ ದಾಖಲಿಸುವ ಕೃತಿ ರಚನೆಯ ಕ್ರಿಯೆಗೂ ಚಾಲನೆ ನೀಡಿದ್ದರು. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಒಳಗೊಂಡ ಹಾಗೆ ಎಲ್ಲರೊಂದಿಗೆ ಆತ್ಮೀಯಬಾಂಧವ್ಯಹೊಂದಿ ಎಲ್ಲರೊಡನೆ ಕೆಲಸ ಮಾಡುತ್ತಾ ಬಂದರು.
ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಕೆ. ಸಿ. ಎನ್. ಚಂದ್ರಶೇಖರ್ ಶೇಷಾದ್ರಿಪುರಂಶಿಕ್ಷಣ ದತ್ತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನೂರಾರು ವಿದ್ಯಾರ್ಥಿಗಳಿಗೆ ಆಶ್ರಯನೀಡಿರುವ ಬೆಂಗಳೂರಿನ ಕೆ.ಎಸ್.ವಿ. ನಿಲಯದ ಕಾರ್ಯದರ್ಶಿಗಳೂ ಆಗಿದ್ದರು.
ಕೆ. ಸಿ. ಎನ್. ಚಂದ್ರಶೇಖರ್ ಅವರ ಸಹಪಾಠಿ ಗೆಳೆಯರಾಗಿದ್ದ, ನನ್ನ ಗೆಳೆಯರೊಬ್ಬರ ಜೊತೆಅವರನ್ನು 1992ರ ವರ್ಷ ಒಂದೆರಡು ಬಾರಿ ಭೇಟಿ ಮಾಡಿದಾಗ ಅತ್ಯಂತ ಸರಳ ಸ್ನೇಹದಲ್ಲಿಮಾತಾಡಿ ನಮ್ಮ ಕನ್ನಡ ಚಟುವಟಿಕೆಗಳಿಗೆ ಆತ್ಮೀಯವಾಗಿ ಕೊಡುಗೆಯನ್ನೂ ನೀಡಿದ್ದರು. ಅವರಿದ್ದದೊಡ್ಡ ಮನೆಯ ವಾತಾವರಣ, ಅವರಿಗಿದ್ದ ಹೆಸರು ಇವುಗಳ ನಡುವೆ ಹೀಗೊಬ್ಬ ಸರಳ ವ್ಯಕ್ತಿಯೂಇರಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಕೆ. ಸಿ. ಎನ್. ಚಂದ್ರಶೇಖರ್ ಅವರ ಜೊತೆಯಸಂದರ್ಶನಗಳ ಹಲವು ವಿಡಿಯೋಗಳು ಯೂಟ್ಯೂಬ್ನಲ್ಲಿವೆ. ಆ ಮಾತುಕತೆಗಳಲ್ಲೆಲ್ಲ ಅವರಿಗಿದ್ದಚಿತ್ರರಂಗದ ಕುರಿತಾದ ನಿಖರ ತಿಳುವಳಿಕೆ, ಸ್ಪಷ್ಟ ನೇರ ಅಭಿವ್ಯಕ್ತಿ ಮತ್ತು ತಾನೊಬ್ಬ ಸರಳ ವ್ಯಕ್ತಿಎಂಬ ನಡೆ ಮೆಚ್ಚುಗೆ ಹುಟ್ಟಿಸುತ್ತದೆ.
ಕೆ. ಸಿ. ಎನ್. ಚಂದ್ರಶೇಖರ್ 2021ರ ಜೂನ್ 13ರಂದು ನಿಧನರಾದರು. ಲೋಕದಲ್ಲಿ ಕೆಲವುವ್ಯಕ್ತಿಗಳು ಹೋಗಿಬಿಟ್ಟಾಗ ಲೋಕಕ್ಕೆ ನಷ್ಟ ಎಂಬ ಮಾತು ಕೇಳಿಬರುತ್ತದೆ. ಕೆ. ಸಿ. ಎನ್. ಚಂದ್ರಶೇಖರ್ ಹೋಗಿಬಿಟ್ಟದ್ದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲ, ಕನ್ನಡ ಸಾಂಸ್ಕೃತಿಕ ಲೋಕಕ್ಕೇಆದ ದೊಡ್ಡ ನಷ್ಟ.
On remembrance day of great film producer, distributor and administrator K. C. N. Chandrashekar
ಕಾಮೆಂಟ್‌ಗಳು