ಶ್ರೀಲಕ್ಷ್ಮೀ ಕೆ. ಜೆ.
ಕೆ.ಜೆ. ಶ್ರೀಲಕ್ಷ್ಮೀ
ವಿದುಷಿ ಕೆ. ಜೆ. ಶ್ರೀಲಕ್ಷ್ಮೀ ಪ್ರತಿಭಾನ್ವಿತ ಸಂಗೀತಗಾರ್ತಿ.
ಜೂನ್ 4 ಶ್ರೀಲಕ್ಷ್ಮೀ ಅವರ ಜನ್ಮದಿನ. ತಂದೆ ಕಾಕರ್ಲ ಜಗನ್ನಾಥ ಶರ್ಮ. ತಾಯಿ ಸಿ.ವಿ. ಜಯಲಕ್ಷ್ಮೀ. ಬಾಲ್ಯದಿಂದಲೇ ಸಂಗೀತದಲ್ಲಿ ಒಲವು ಮೂಡಿಸಿಕೊಂಡ ಶ್ರೀಲಕ್ಷ್ಮಿ ಅವರು ಐದನೇ ವಯಸ್ಸಿನಲ್ಲೇ ಶಾಸ್ತ್ರೀಯ ಸಂಗೀತ ಅಭ್ಯಾಸಕ್ಕೆ ತೊಡಗಿದರು. ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ ಅವರಲ್ಲಿ ಸಂಗೀತ ಕಲಿಕೆಯನ್ನು ಆರಂಭಿಸಿದ ಶ್ರೀಲಕ್ಷ್ಮೀ, ಮುಂದೆ ವಿದ್ವಾನ್ ಸೇಲಂ ಪಿ. ಸುಂದರೇಶನ್ ಅವರಲ್ಲಿ ಸಂಗೀತದ ಸೂಕ್ಷ್ಮಜ್ಞತೆಗಳ ಅಭ್ಯಾಸವನ್ನು ಪಡೆದುಕೊಂಡರು. ನಿರಂತರ ಸಂಗೀತ ಜ್ಞಾನಾಕಾಂಕ್ಷಿಯಾದ ಶ್ರೀಲಕ್ಷ್ಮಿ ಅವರು ಸಂಗೀತ ಗುರು ವಿದುಷಿ ಕಲಾವತಿ ಅವಧೂತ್ ಅವರಲ್ಲಿ ಹೆಚ್ಚಿನ ಸಂಗೀತ ಜ್ಞಾನಾರ್ಜನೆಯನ್ನು ಮುಂದುವರೆಸಿದ್ದಾರೆ.
ಶ್ರೀಲಕ್ಷ್ಮೀ ಅವರು ಕರ್ನಾಟಕ ಶಾಸ್ತ್ರೀಯ ಗಾಯನದಲ್ಲಿ ವಿದ್ವತ್ ಪದವಿ ಹಾಗೂ ಜೈನ್ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಉನ್ನತ ಸಾಧನೆಯೊಂದಿಗೆ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಬೆಂಗಳೂರು ಆಕಾಶವಾಣಿಯ ಶ್ರೇಣೀಕೃತ ಕಲಾವಿದೆಯಾಗಿರುವ ಶ್ರೀಲಕ್ಷ್ಮೀ ಅವರು ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರು ಮತ್ತು ಇತರ ಸ್ಥಳಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸುತ್ತ ಬಂದಿದ್ದಾರೆ. ಅನೇಕ ವಿಶಿಷ್ಟ ವಿಷಯಾಧಾರಿತ ಸಂಗೀತ ಕಛೇರಿಗಳನ್ನೂ ಪ್ರಸ್ತುತಪಡಿಸುತ್ತಿದ್ದಾರೆ.
ಕಳೆದ 18 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಗಾಯನವನ್ನು ಬೋಧಿಸುತ್ತ ಬಂದಿರುವ ಶ್ರೀಲಕ್ಷ್ಮೀ ಅವರು 'ರಾಗಶ್ರೀ ಗಾನ ಮಂದಿರ' ಎಂಬ ತಮ್ಮದೇ ಸಂಗೀತ ಶಾಲೆ ನಡೆಸುತ್ತಿದ್ದು, ಆಸಕ್ತ ವಿದ್ಯಾರ್ಥಿಗಳಿಗೆ ಆಪ್ತತೆಯಿಂದ ಸಂಗೀತ ತರಬೇತಿ ನೀಡುತ್ತ ಬಂದಿದ್ದಾರೆ.
ವಿದುಷಿ ಶ್ರೀಲಕ್ಷ್ಮೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Srilakshmi Anand
ಕಾಮೆಂಟ್‌ಗಳು