ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಸಿ. ಶಿವಪ್ಪ


 ಕೆ. ಸಿ. ಶಿವಪ್ಪ


'ಮುದ್ದುರಾಮ' ಎಂದೇ ಪ್ರಖ್ಯಾತರಾದವರು ಹಿರಿಯ ಸಾಹಿತಿ ಕೆ. ಸಿ. ಶಿವಪ್ಪನವರು. 

ಶಿವಪ್ಪನವರು ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯಲ್ಲಿ 1937ರ ಜುಲೈ 26ರಂದು ಜನಿಸಿದರು.  ಚಾಮರಾಜನಗರ, ಮೈಸೂರಿನಲ್ಲಿ ಅವರ  ವಿದ್ಯಾಭ್ಯಾಸ ನಡೆಯಿತು.

ಶಿವಪ್ಪನವರು ಸರ್ಕಾರಿ ತರಬೇತಿ ಮಹಾವಿದ್ಯಾಲಯ (ಮೈಸೂರು), ಕೇಂದ್ರ ಚರ್ಮಸಂಶೋಧನಾಲಯ (ಚೆನ್ನೈ), ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸಚಿವಾಲಯ (ವಿಧಾನಸೌಧ), ಜೆ.ಎಸ್.ಎಸ್ ಮಹಾವಿದ್ಯಾಪೀಠ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದರು. 

ಶಿವಪ್ಪನವರ ಕೃತಿಗಳಲ್ಲಿ ರಾಗರತಿ, ಅನುರಾಗ, ರಾಧಾಮಾಧವ, ಚಿತ್ತಭಿತ್ತಿ, ಚಿತ್ರಾಂಬರ, ಚೆಂಬೆಳಕು, ಚಿದಾನಂದ, ಚೆಲುವೆ, ಚಂದ್ರಿಕೆ, ಚಾರುಲತೆ, ಚಿತ್ರಪತ್ರ (ಕವನ ಸಂಕಲನಗಳು); ಮುದ್ದು ರಾಮನ ಮನಸು, ಮುದ್ದುರಾಮನ ಬದುಕು-ಬೆಳಕು (ಚೌಪದಿಗಳ ಸಂಕಲನ); ಬದುಕಿಗೊಂದು ಭರವಸೆ, ಚಿತ್ತಚಿತ್ತಾರ (ವ್ಯಕ್ತಿ ವಿಕಸನ); ಮೌನಸ್ಪಂದನ, ಚಿತ್ತಪರಿಪಾಕ (ಚಿಂತನ ಬಿಡಿನುಡಿ ಸಂಚಯ); ಜೀವಸತ್ವಗಳು, ಬೆಡಗಿನ ಬಾಟಿಕ್, ಭೂಮಿ, ಶುಕ್ರದೆಸೆ (ಅನುವಾದ); ಅರವಿಂದ ದರ್ಶನ, ವಂದನಾ, ವಿಶ್ವಧರ್ಮ ದರ್ಶನ ಸಂಪುಟ-2, ರಾಜೇಂದ್ರ ಚಿತ್ರಸಂಪುಟ, ರಾಜೇಂದ್ರ ನುಡಿನಮನ, ರಾಜೇಂದ್ರ ಕವನಕುಸುಮ (ಸಂಪಾದನೆ); ಬಾಳಬಣ್ಣ, ಪಂಚತಂತ್ರದ ಕತೆಗಳು, ವಿನಯ ಕನ್ನಡ ಭಾರತಿ ಮುಂತಾದವು ಸೇರಿವೆ.  ಇಂಗ್ಲಿಷಿನಲ್ಲಿಯೂ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. 

ಕೆ. ಸಿ. ಶಿವಪ್ಪನವರಿಗೆ ಡಿ.ವಿ.ಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ, ಕುಲಪತಿ ಕೆ.ಎಂ. ಮುನ್ಷಿ ಸನ್ಮಾನ, ರಮಣಶ್ರೀ ಶರಣ ಪ್ರಶಸ್ತಿ, ಬಸವ ವೇದಿಕೆಯ ವಚನ ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಗೌರವ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ, ದಶಮಾನೋತ್ಸವ ಹೊಯ್ಸಳ ಪ್ರಶಸ್ತಿ, ಭಾರತ ಸರ್ಕಾರದ ಎಕ್ಸೆಲೆನ್ಸ್ ಇನ್ ಪ್ರಿಂಟಿಂಗ್ ಅವಾರ್ಡ್(ಬೆಂವಿವಿ ಪ್ರಕಟಣೆಗಳಿಗೆ), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಅನೇಕ ಗೌರವಗಳು ಸಂದಿವೆ.

On the birthday of great scholar and writer K. C. Shivappa Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ