ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀವಿದ್ಯಾ


 ಶ್ರೀವಿದ್ಯಾ


ಶ್ರೀವಿದ್ಯಾ ಅವರು ವಿಶಾಲ ವ್ಯಾಪ್ತಿಯ ಸಾಂಸ್ಕೃತಿಕ ಒಳನೋಟಗಳುಳ್ಳ ಬೆರಗು ಹುಟ್ಟಿಸುವ ಬರಹಗಾರ್ತಿ.

ಜುಲೈ 30 ಶ್ರೀವಿದ್ಯಾ ಅವರ ಹುಟ್ಟುಹಬ್ಬ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ. ಇವರ ತಂದೆ ಕುಬಣೂರು ಶ್ರೀಧರರಾಯರು ಯಕ್ಷಗಾನ ಲೋಕದಲ್ಲಿ ತಮ್ಮ ಗಾನಸುಧೆಯನ್ನು ಹರಿಸಿ ಮಹಾನ್ ಭಾಗವತರೆನಿಸಿದವರು.  ಶ್ರೀವಿದ್ಯಾ ಎಸ್ ಡಿ ಎಂ ಕಾಲೇಜಿನಲ್ಲಿ ಓದಿ ಕಲಾ ಪದವಿ ಪಡೆದರು. ಸಂಗೀತ ಸಾಧನೆಯನ್ನೂ ಮಾಡಿರುವ ಇವರು ವಯೊಲಿನ್ ವಾದಕಿ. 

ಶ್ರೀವಿದ್ಯಾ ಹೈದರಾಬಾದಿನ ಈಟಿವಿ, ಬೆಂಗಳೂರಿನ ಟಿವಿ9ಗಳಲ್ಲಿ  5 ವರ್ಷ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದುಡಿದರು. ಕೌಟುಂಬಿಕ ಹಿನ್ನೆಲೆಯಲ್ಲಿ ಕೆಲ ಸಮಯದ  ಬ್ರೇಕ್ ನಂತರ ಟೈಮ್ಸ್ ಸಮೂಹದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀವಿದ್ಯಾ ಅವರ ಅಂಕಣ‍ ಬರಹಗಳು, ಬ್ಲಾಗ್ ಬರಹಗಳು (https://kshrividyarao.wixsite.com/randommusings) ಹಾಗೂ ನಿಯತಕಾಲಿಕಗಳಲ್ಲಿನ ಬಹುಮುಖಿ ಬರಹಗಳು ವಿಶಾಲ ವ್ಯಾಪ್ತಿಯ ಸಾಂಸ್ಕೃತಿಕ ನೆಲೆಗಳ ಆಳದಿಂದ ಮತ್ತು ಪೂರಕ ಚಿತ್ರಗಳಿಂದ ಗಮನ ಸೆಳೆಯುಂತದ್ದಾಗಿವೆ.

ಆತ್ಮೀಯರೂ ಪ್ರತಿಭಾವಂತರೂ ಆದ ಶ್ರೀವಿದ್ಯಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

Happy birthday Shri Vidya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ