ಸವಿತಾ ಶಾಸ್ತ್ರಿ
ಸವಿತಾ ಶಾಸ್ತ್ರಿ
ಸವಿತಾ ಶಾಸ್ತ್ರಿ ಅವರು ಬರಹಗಾರ್ತಿಯಾಗಿ, ಕನ್ನಡದ ಸಕ್ರಿಯ ಕಾರ್ಯಕರ್ತೆಯಾಗಿ, ಸಂಘಟನಾ ಚತುರೆಯಾಗಿ ಮತ್ತು ಉತ್ತಮ ಉಪನ್ಯಾಸಕಿಯಾಗಿ ಹೆಸರಾಗಿದ್ದಾರೆ.
ಜುಲೈ 24 ಸವಿತಾ ಮಾಧವ ಶಾಸ್ತ್ರಿ ಅವರ ಜನ್ಮದಿನ. ಅವರ ಮೂಲ ಊರು ಮರವಂತೆ. ಮಾಧವ ಶಾಸ್ತ್ರಿಗಳ ಜೊತೆ ವಿವಾಹವಾಗಿ ಉಡುಪಿಯ ಸಾಲಿಗ್ರಾಮದ ನಿವಾಸಿಯಾಗಿದ್ದಾರೆ. ಬಿ.ಎಸ್ಸಿ ಮತ್ತು ಇಂಗ್ಲಿಷ್ ಎಂ. ಎ. ವಿದ್ಯಾಸಾಧನೆಗಳನ್ನು ಮಾಡಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಥೆ, ಕವನ, ಪ್ರಬಂಧ, ಚಿಂತನೆ ಹೀಗೆ ಸವಿತಾ ಶಾಸ್ತ್ರಿ ಅವರ ಬರಹಗಳು ಕನ್ನಡದ ಎಲ್ಲ ನಿಯತಕಾಲಿಕಗಳು ಮತ್ತು ವಿಶೇಷಾಂಕಗಳಲ್ಲಿ ರಾರಾಜಿಸುತ್ತ ಸಾಹಿತ್ಯಲೋಕದಲ್ಲಿ ಗಮನ ಸೆಳೆದಿವೆ.
ಸದಾ ಸಾಹಿತ್ಯ ಲೋಕದಲ್ಲಿ, ವಿದ್ಯಾಸಂಸ್ಥೆಗಳಲ್ಲಿ ವಿಚಾರ ಸಂಕಿರಣ ಮತ್ತು ಮಕ್ಕಳಿಗೆ ಪ್ರೇರಣೆಯಾಗಿ ಮಾತಿಗೆ ಆಹ್ವಾನಿತರಾದ ಸವಿತಾ ಶಾಸ್ತ್ರಿ ಅವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ನೇಮಕಗೊಂಡು ಉತ್ತಮ ಕೆಲಸಕ್ಕೂ ಹೆಸರಾಗಿದ್ದಾರೆ.
ಸವಿತಾ ಶಾಸ್ತ್ರಿ ಅವರಿಗೆ ಸಾಹಿತ್ಯ ಗಂಗೋತ್ರಿ ಮತ್ತು ಇತರ ಗೌರವಗಳು ಸಂದಿವೆ.
ಪ್ರತಿಭಾವಂತೆ, ಸಕ್ರಿಯೆ, ಉತ್ಸಾಹಿ, ಹಸನ್ಮುಖಿ ಸವಿತಾ ಶಾಸ್ತ್ರಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Savita Shastri
ಕಾಮೆಂಟ್‌ಗಳು