ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುನೀಲ್ ಶೆಟ್ಟಿ


 ಸುನೀಲ್ ಶೆಟ್ಟಿ


ನಮ್ಮ ತುಳು ನಾಡಿನವರಾದ ಸುನೀಲ್ ಶೆಟ್ಟಿ ಪ್ರಸಿದ್ಧ  ಚಲನಚಿತ್ರ ನಟ, ನಿರ್ಮಾಪಕ, ಮತ್ತು ಉದ್ಯಮಿ.   ಕಳೆದ 30 ವರ್ಷಗಳಿಗೂ ಮೀರಿದ  ವೃತ್ತಿಜೀವನದಲ್ಲಿ, ಅವರು ನೂರಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ನಿರ್ವಹಿಸಿರುವ ಪಾತ್ರಗಳು ಆಕ್ಷನ್ ಮತ್ತು ಹಾಸ್ಯಾಭಿವ್ಯಕ್ತಿಗೆ ಹೆಸರಾಗಿವೆ.

ಸುನೀಲ್ ಶೆಟ್ಟಿ ಮಂಗಳೂರಿನ ಮೂಲ್ಕಿಯಲ್ಲಿ  ತುಳು ಮಾತನಾಡುವ ಬಂಟ್ ಕುಟುಂಬದಲ್ಲಿ 1961ರ ಆಗಸ್ಟ್ 11ರಂದು ಜನಿಸಿದರು. 

ಸುನೀಲ್ ಶೆಟ್ 1992ರಲ್ಲಿ ದಿವ್ಯಾ ಭಾರತಿ ಅವರೊಂದಿಗೆ ‘ಬಲ್ವಾನ್‌’ ಚಿತ್ರದ ಮೂಲಕ ಹಿಂದಿ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು. ಅವರು ಬಲ್ವಾನ್, ವಕ್ತ್ ಹಮಾರಾ ಹೈ,  ಪೆಹಚಾನ್, ದಿಲ್ವಾಲೆ , ಅಂಥ್, ಮೊಹ್ರಾ, ಗೋಪಿ ಕಿಶನ್ ಮುಂತಾದ ಯಶಸ್ವಿ ಚಲನಚಿತ್ರಗಳಲ್ಲಿ ನಾಯಕನಾಗಿ ನಟಿಸಿದರು.  ಹಮ್ ಹೇ ಬೆಮಿಸಾಲ್, ಸುರಕ್ಷಾ, ರಘುವೀರ್, ಟಕ್ಕರ್, ಕೃಷ್ಣ, ಸಪೂತ್, ರಕ್ಷಕ್, ಬಾರ್ಡರ್, ಜಡ್ಜ್ ಮುಜ್ರಿಮ್, ಭಾಯಿ, ಕಹರ್, ವಿನಾಶಕ್, ಹೂ ತು ತು ಮುಂತಾದವು ಅವರ  ಯುಗದ ಇತರ ಆಕ್ಷನ್ ಚಿತ್ರಗಳು.  2000ರ ಆರಂಭದಿಂದ, ಅವರು ಮುಖ್ಯವಾಗಿ ಬಹು-ತಾರಾಗಣದ ವಿವಿಧ ಚಿತ್ರಪ್ರಕಾರಗಳಲ್ಲಿ ಕಾಣಿಸಿಕೊಂಡರು. ಅವರು ಅರ್ಜುನ್ ರಾಂಪಾಲ್ ಅವರ ಚೊಚ್ಚಲ ಚಿತ್ರ ಪ್ಯಾರ್ ಇಷ್ಕ್ ಔರ್ ಮೊಹಬ್ಬತ್‍ನಲ್ಲಿ ಇಶಾ ಕೊಪ್ಪಿಕರ್ ಜೊತೆ ನಟಿಸಿದರು. ಹೇರಾ ಫೆರಿ ಧಡ್ಕನ್, ಜಂಗಲ್, ಯೇ ತೇರಾ ಘರ್ ಯೇ ಮೇರಾ ಘರ್, ಮೈ ಹೂ ನಾ, ಫಿರ್ ಹೇರಾ ಫೆರಿ, ಮತ್ತು ರೆಡ್ ಅಲರ್ಟ್: ದಿ ವಾರ್ ವಿಥಿನ್, ಶೂಟೌಟ್ ಅಟ್ ಲೋಖಂಡ್ವಾಲಾ, ಒನ್ ಟೂ ತ್ರೀ, ಡಿ ಡಾನಾ ಡಾನ ಮುಂತಾದ ಅನೇಕ ಚಿತ್ರಗಳಲ್ಲಿ ಅವರದ್ದು ವಿಭಿನ್ನ ಪಾತ್ರಗಳು.  ಧಡ್ಕನ್, ಖೇಲ್ - ನೋ ಆರ್ಡಿನರಿ ಗೇಮ್, ಬಾಜ್: ಎ ಬರ್ಡ್ ಇನ್ ಡೇಂಜರ್. ಮೈ ಹೂ ನಾ, ರುದ್ರಾಕ್ಷ್, ಕ್ಯಾಶ್, ನೋ ಪ್ರಾಬ್ಲಂ, ಎ ಜಂಟಲ್‌ಮ್ಯಾನ್ ಮುಂತಾದ ಚಿತ್ರಗಳಲ್ಲಿ ಖಳಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಸುನೀಲ್ ಶೆಟ್ಟಿ ರಜನಿಕಾಂತ್ ಅವರ ತಮಿಳು ಚಿತ್ರ 'ದರ್ಬಾರ್‌'ನಲ್ಲಿಯೂ ನಟಿಸಿದ್ದರು.

ಸುನೀಲ್ ಶೆಟ್ಟಿ ಪಾಪ್‌ಕಾರ್ನ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ಪ್ರೊಡಕ್ಷನ್ ಹೌಸ್‌ನ ಮಾಲೀಕರಾಗಿದ್ದಾರೆ.  ಈ ಬ್ಯಾನರ್ ಅಡಿಯಲ್ಲಿ ಖೇಲ್ - ನೋ ಆರ್ಡಿನರಿ ಗೇಮ್, ರಕ್ತ್ ಮತ್ತು ಭಾಗಮ್ ಭಾಗ್ ಸೇರಿದಂತೆ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಅನೇಕ ಕಿರುತೆರೆಯ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದಾರೆ.

ಸುನೀಲ್ ಶೆಟ್ಟಿ ಅವರಿಗೆ ಧಡ್ಕನ್ ಚಿತ್ರಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಇತರ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.

On the birthday of actor Suneil Shetty 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ