ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ ಕೇಂದ್ರಮಂತ್ರಿಗಳಾಗಿ, ಅರ್ಥಶಾಸ್ತ್ರಜ್ಞೆಯಾಗಿ, ವಾಗ್ಮಿಯಾಗಿ, ಸಮಾಜ ಸೇವಕಿಯಾಗಿ ಹೆಸರಾಗಿದ್ದಾರೆ. ಪ್ರಸಕ್ತದಲ್ಲಿ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಅವರು ಈ ಹಿಂದೆ ರಕ್ಷಣಾ ಸಚಿವೆಯಾಗಿ, ವಾಣಿಜ್ಯ ಮತ್ತು ಕೈಗಾರಿಕೆ ಮುಂತಾದ ಖಾತೆಗಳಲ್ಲೂ ಕೆಲಸ ಮಾಡಿದ್ದಾರೆ.
ನಿರ್ಮಲಾ ಸೀತಾರಾಮನ್ 1959ರ ಆಗಸ್ಟ್
18ರಂದು ಮದುರೈನಲ್ಲಿ ಜನಿಸಿದರು. ತಿರುಚ್ಚಿರಾಪಳ್ಳಿಯಲ್ಲಿ ಬಿ.ಎ. ಪದವಿ ಪಡೆದು, ನಂತರ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು.
ನಿರ್ಮಲಾ ಸೀತಾರಾಮನ್ ಲಂಡನ್ನಲ್ಲಿ ಗೃಹಲಂಕಾರ ವಸ್ತುಗಳ ಮಳಿಗೆಯಾದ ಹ್ಯಾಬಿಟಾಟ್ನಲ್ಲಿ ಕೆಲಸ ಮಾಡಿದರು. ನಂತರ ಬ್ರಿಟನ್ನಿನ ಅಗ್ರಿಕಲ್ಚರಲ್ ಇಂಜಿನಿಯರ್ಸ್ ಅಸೋಸಿಯೇಷನ್ನಲ್ಲಿ ಸೇವೆ ಸಲ್ಲಿಸಿದರು. ಲಂಡನ್ನಲ್ಲಿ ಪ್ರೈಸ್ ವಾಟರ್ ಹೌಸ್ ಕೂಪರ್ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಅನೇಕ ವರ್ಷ ಸೇವೆ ಸಲ್ಲಿಸಿದರು. ಕೆಲಕಾಲ ಬಿಬಿಸಿ ವರ್ಲ್ಡ್ ಸರ್ವೀಸ್ನಲ್ಲಿ ಸಹಾ ಸೇವೆ ಸಲ್ಲಿಸಿದ್ದರು.
ನಿರ್ಮಲಾ ಸೀತಾರಾಮನ್ ಹೈದರಾಬಾದ್ನಲ್ಲಿ 'ಪ್ರಣವ'ದ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾದರು. 2003-2005ರ ಅವಧಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದರು.
2008ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದ ನಿರ್ಮಲಾ ಸೀತಾರಾಮನ್ ಆ ಪಕ್ಷದ ವಕ್ತಾರೆಯಾಗಿ ಸೇವೆ ಸಲ್ಲಿಸಿದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ನಿರ್ಮಲಾ ಅವರು ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಪ್ರವೇಶಿಸಿದ್ದರು. ಪ್ರಸ್ತುತದಲ್ಲಿ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಹಲವಾರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿರುವ ನಿರ್ಮಲಾ ಅವರು ದೇಶದ ಪ್ರಮುಖ ಖಾತೆಯಾದ ರಕ್ಷಣಾ ಖಾತೆಯನ್ನು ನಿರ್ವಹಿಸಿ ಮುಂದೆ ಮತ್ತೊಂದು ಪ್ರಮುಖ ಖಾತೆಯಾದ ಹಣಕಾಸು ಖಾತೆಯನ್ನು ನಿರ್ವಹಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
On the birthday of our great lady Nirmala Sitharaman carrying great responsibilities
ಕಾಮೆಂಟ್ಗಳು