ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೀಲಿ ಚಿಟ್ಟೆ


 ನೀಲಿ ಚಿಟ್ಟೆ


ಇಂದು ನೀಲಿ ಚಿಟ್ಟೆ ಹುಟ್ಟಿದ ಹಬ್ಬ.  ಚಿಟ್ಟೆಗೆ ಒಂದೇ ಬಣ್ಣವೇ.  ಎಲ್ಲ ಬಣ್ಣಗಳೂ ನೀಲಿ ಎಂಬ ಆಕಾಶದಲ್ಲಿ ಲೀನ. ಅಂತೆಯೇ ನಮ್ಮ ನೀಲಿ ಚಿಟ್ಟೆಯ ಪ್ರತಿಭೆಯೂ ಬಹುಮುಖಿ.  ಅವೆಲ್ಲವೂ ಶಮ್ಮಿ ಎಂಬ ಆಂತರ್ಯದ ನೀಲಿಯಲ್ಲಿ ಲೀನ. ಮುಕ್ತ ಮನಸ್ಸಿನಿಂದ ಹಾರುವ ನೀಲಿ ಚಿಟ್ಟೆ. 

ಸದಾ ಪುಟಿ ಪುಟಿವ ಮುಕ್ತ ವಿಶ್ವಾಸ.  ಎಲ್ಲವನ್ನೂ ತನ್ನ ಕಣ್ಣುಗಳಲ್ಲೇ ಹೀರಿಬೀಡುವ ಅಯಸ್ಕಾಂತೀಯ ನೋಟ. ಅತ್ಯಂತ ಸರಳ ಧುಮ್ಮಿಕ್ಕಿ ಹರಿಯುವ ವಿಸ್ಮಯ ಹುಟ್ಟಿಸುವ ಮುಕ್ತ ಆತ್ಮೀಯತೆ.  ಬಹು ಭಾಷೆಗಳಲ್ಲಿ ಕವಿತೆ, ಕಥೆ, ವಿಚಾರಗಳನ್ನು ಪುಟಗಟ್ಟಲೆ ಬರೆಯುವ ಅಗಾಧತೆ.  ಇವೆಲ್ಲವುಗಳ ನಡುವೆ ತನ್ನೊಳಗೇ ಆಳಕ್ಕಿಳಿದು ಹುಡುಕುತ್ತಿರುವ ಅನ್ವೇಷಕ ಪ್ರವೃತ್ತಿ.  

ನನ್ನ ಈ ಬರಹ ತುಂಬಾ confuse ಆಗಿದ್ರೆ ಬೈಬೇಡಿ.  ಅದೇ ನಮ್ಮ ಈ ಆತ್ಮೀಯ ನೀಲಿ ಚಿಟ್ಟೆ 😊😊😊

ಈಕೆಯ ಬಹುಮುಖಿ ಸಾಮರ್ಥ್ಯದ ಕುರುಹು  ಆಕೆಯ ಈ ಕವನ:

ಇದೊಂದು ಆವರ್ತ. ಹೂ ತೊಟ್ಟಿನಿಂದ
ಕಳಚುವುದೂ ಮತ್ತೆ ಮೊಗ್ಗಾಗುವುದೂ... 
ವಿಚಾರಗಳ ನಿಸ್ತಂತು ತರಂಗಗಳು ಎಲ್ಲೆಲ್ಲು ಅವಿನಾಶಿ...ನಾನು ತರಂಗ ರೂಪಿ...
ಹಾಗಾದರೆ‌ ಹುಟ್ಟು ಸಾವು ಯಾತರದು?

ನನಗೆ ನೋವಿರಲಿಲ್ಲವೆ?
ನಲಿವು? ಒಲವಾಗಲಿಲ್ಲವೆ? 
ಹೃದಯ ಒಡೆದ ಸದ್ದು
ಕೇಳಲಿಲ್ಲವೇ?

ಹಾ...ನಾನವುಗಳನ್ನು ಅನುಭವಿಸಿದ್ದು
 ದೇಹ ಮನಸಿಗೆ ! ನನ್ನೊಳಗಣ ಆನಂದ ಸ್ರೋತ ಇದರಿಂದಾಗಿ ಯಾವತ್ತಾದರು ಬದಲಾಗಿದೆಯೆ?
ಇಲ್ಲ...

ವಿಧಿ ಉರುಳಿಸಿದ ಬಂಡೆಗಳನ್ನು ಹಾಗೆಯೆ ಹೋಗಗೊಟ್ಟು ಪಕ್ಕಕ್ಕೆ ಸರಿದು ನಿಂತಿದ್ದೇನೆ.
ಜೊತೆಗೆ ನಡೆದು ಬಂದ ನೋವುಗಳನ್ನು ಕೂರಿಸಿ ಮಾತನಾಡಿಸಿ ಕಳಿಸಿದ್ದೇನೆ
ಕಷ್ಟಗಳನ್ನು ಕವಿತೆಯಾಗಿ ಬರೆದು ಲೋಕಕ್ಕೆ ತಿಳಿಸಿದ್ದೇನೆ
ಬಂಧನಗಳನ್ನು ನಾನೇ ಸಾಕ್ಷಿಯಾಗಿ ಅವಲೋಕಿಸಿ ಕಳಚಿಕೊಂಡಿದ್ದೇನೆ.

ನನ್ನ ಜೊತೆ ನಡೆದ ಆತ್ಮಗಳನ್ನು ವಂದಿಸಿ ದೂರಾದವರ ಒಳ್ಳಿತಿಗಾಗಿ ಪ್ರಾರ್ಥಿಸಿ ಶಿವನಿಗೆ ಆತ್ಮ ಸಮರ್ಪಣೆ ಮಾಡಿದ್ದೇನೆ.

ನನಗೆ ಹುಟ್ಟಿಗೆ ಹಬ್ಬವು ಇಲ್ಲ
ಸಾವಿಗೆ ಶೋಕವು ಇಲ್ಲ

ನಾನು ಈ ಸನಾತನ ತಲೆಕೆಳಗಾದ 
ಮರಕ್ಕೆ ಅಂಟಿದ  ಹೂ
ಕಳಚುತ್ತೇನೆ 
ಕಾಯಾಗುತ್ತೇನೆ
ಮಾಗುತ್ತೇನೆ
ಮತ್ತೆ ಬೀಜರೂಪಿ ಅದೇ ಸಮಯಕ್ಕೆ 
ಕಾಯುತ್ತೇನೆ

ಇದೋ ಸಹಚರಿಗಳೇ
ನಿಮ್ಮ ನಿಷ್ಕಲ್ಮಶ  ಪ್ರೇಮವನ್ನು ಕೂಡ
ಅಂತರಿಕ್ಷದ ತುಂಬಾ ಹರಡಿದ್ದೇನೆ
ದುಃಖಿ ಹೃದಯಗಳೆಲ್ಲ
ಆಯ್ದುಕೊಳ್ಳಲಿ
-ನೀಲಿಚಿಟ್ಟೆ

ಈ ಆತ್ಮೀಯತೆಯ ಅಗಾಧತೆ ನೀಲಿ ಚಿಟ್ಟೆ ಶಮ್ಮಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 
🎂🎉🍰🎁🍦💐😊   
Happy birthday Shammi Chitte 🙂🙂🙂

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ