ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಾನಕಿ ಮುರಳಿ



ಜಾನಕಿ ಮುರಳಿ

ಆತ್ಮೀಯರಾದ ಜಾನಕಿ ಮುರಳಿ ಸಂಗೀತ, ಸಾಹಿತ್ಯ, ನೃತ್ಯ, ರಂಗಭೂಮಿ, ಸಂಸ್ಕೃತಿ, ಯೋಗ, ವೇದ ಗಣಿತ ಹೀಗೆ ಅನೇಕ ವಿಷಯಗಳಲ್ಲಿ ಅಪಾರ ಆಸಕ್ತೆ.  ಈ ಎಲ್ಲ ಕ್ಷೇತ್ರಗಳ ಸಂಘಟನೆಗಳಲ್ಲಿ ಪಾತ್ರಧಾರಿ.  ಹಲವು ಕ್ಷೇತ್ರಗಳಲ್ಲಿ ಅವರು ತೋರುವ ಅಭಿವ್ಯಕ್ತಿ ಅವರಲ್ಲಿರುವ ಗಮನಾರ್ಹ ಪರಿಣತಿಗಳನ್ನೂ ಕಾಣಿಸುತ್ತದೆ. ಗಣಿತ ಎಂಬುದು ಕಬ್ಬಿಣದ ಕಡಲೆ ಎಂಬುವರಿಗೆ, ಬನ್ನಿ ಇದು ಕಡಲೆ ಕಾಯಿ ತಿನ್ನುವ ಹಾಗೆ ಸ್ವಾದಿಷ್ಟ ಎಂದು ಇವರು ಮಾರ್ಗದರ್ಶಿಸುವುದಿದೆ.  ಅವರ ಬರಹಗಳು ಅಲ್ಲಲ್ಲಿ ನಿಯತಕಾಲಿಕಗಳಲ್ಲಿವೆ.  ಎಲ್ಲಿ ಒಳ್ಳೆಯ ಕೆಲಸ ನಡೆಯುತ್ತದೊ ಅಲ್ಲಿ ಮೊದಲು ತಾವಿದ್ದು ಕೆಲಸ ಮಾಡುತ್ತಾರೆ. ಕೋವಿಡ್ ಸಮಯದಲ್ಲಿ ಬಹಳ ಜನ ತಮಗೇನಾಗುತ್ತದೊ ಎಂದು ಮುದುರಿ ಮೂಲೆಯಲ್ಲಿದ್ದರೆ, ಇವರು ಹೊರಗೆ ಹೋಗಿ ಸ್ವಯಂಸೇವಕಿಯಾಗಿ ಸೇವೆಸಲ್ಲಿಸಿದ್ದಾರೆ. ಅವರು ತಮ್ಮ ಬಗ್ಗೆ ಹೇಳಿಕೊಳ್ಳುವುದೇ ಇಲ್ಲ. ಅದರೂ ಎಲ್ಲ ಅಭಿರುಚಿಗಳು ಅವರ ವಿಶಾಲ ಕಣ್ಗಳ ಮಿಂಚಿನಲ್ಲಿ ಅವರ ಅಪ್ತರಿಗೆಲ್ಲ ಫಳಫಳಿಸುತ್ತದೆ. 

ಈ ಎಲ್ಲಕ್ಕೂ ಮಿಗಿಲಾಗಿ ಜಾನಕಿ ಅವರು ಆಪ್ತ ಸರಳ ಸ್ನೇಹ ಜೀವಿ.  ನನ್ನ ಬರಹ ಕಾಯಕಕ್ಕೆ ಅವರು ನಿರಂತರ ನೀಡುತ್ತ ಬಂದಿರುವ ಪ್ರೋತ್ಸಾಹ ಬೆಂಬಲ ಅಪರಿಮಿತ.

ಆತ್ಮೀಯರಾದ ಜಾನಕಿ ಮುರಳಿ ಅವರಿಗೆ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 


🎂🎉🍰🎁🍦💐😊
Happy birthday to our affectionate Janaki Murali

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ