ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುಂಬಳೆ ಸುಂದರರಾವ್

 


ಕುಂಬಳೆ ಸುಂದರರಾವ್


ಕುಂಬಳೆ ಸುಂದರರಾವ್ ಯಕ್ಷಗಾನ ರಂಗದಲ್ಲಿ ತಮ್ಮ ವರ್ಣರಂಜಿತ ವ್ಯಕ್ತಿತ್ವದಿಂದಹೆಸರಾಗಿದ್ದವರು ಯಕ್ಷಗಾನ ಆಟ-ಕೂಟಗಳಲ್ಲಿ ವಿಜೃಂಭಿಸಿದ ಒಬ್ಬ ಕಲಾವಿದ ತನ್ನ ಮಿತಿಯನ್ನುಮೀರಿ ರಾಜಕೀಯಧಾರ್ಮಿಕಸಾಮಾಜಿಕ ವಲಯದಲ್ಲಿ ಅಸೀಮ ಎತ್ತರಕ್ಕೆ ಏರಿದ ಅಪರೂಪದವಿದ್ಯಮಾನಕ್ಕೆ ಸಾಕ್ಷಿಯಾದವರು ಸುಂದರಣ್ಣ ಎಂದೇ ಖ್ಯಾತರಾಗಿದ್ದ ಸುಂದರರಾವ್


ತಮ್ಮ ಅಸ್ಖಲಿತ ವಾಕ್ಪಟುತ್ವದಿಂದ ಕನ್ನಡ ಭಾಷೆಯ ಸೊಗಸಾದ ನಿರೂಪಣೆ ಮತ್ತು ಪಾತ್ರತಾದಾತ್ಮ್ಯಗಳಿಂದ ಕುಂಬಳೆ ಸುಂದರರಾಯರು ಕಲಾಭಿಮಾನಿಗಳ ಮನಗೆದ್ದವರು


ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿಗೆ 1934 ಮಾರ್ಚ್ 20ರಂದು ಕುಂಬಳೆಯಲ್ಲಿಜನಿಸಿದ ಸುಂದರರಾಯರು ಕಲಿತದ್ದು ಕೇವಲ ಏಳನೆಯ ತರಗತಿಕುಂಬ್ಳೆ ಕುಟ್ಯಪ್ಪನವರಿಂದಅವಶ್ಯವಿದ್ದಷ್ಟು  ಯಕ್ಷಗಾನ ನಾಟ್ಯಾಭ್ಯಾಸ ಮಾಡಿ 1953ರಲ್ಲಿ ಕೂಡ್ಲು ಗೋಪಾಲಕೃಷ್ಣ ಯಕ್ಷಗಾನಮಂಡಳಿಯಲ್ಲಿ ಬಣ್ಣದ ಬದುಕಿಗೆ ಅಡಿಯಿಟ್ಟರುಮುಂದೆ ಇರಾ ಸೋಮನಾಥೇಶ್ವರಸುರತ್ಕಲ್ಮತ್ತು ಧರ್ಮಸ್ಥಳ ಮೇಳಗಳಲ್ಲಿ ನಾಲ್ಕು ದಶಕಗಳ ಕಾಲ ಕಲಾವಿದರಾಗಿ ದುಡಿದ ಅನುಭವಅವರದು.


ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಇಪ್ಪತ್ತೈದು ವರ್ಷ ಸತತ ಕಲಾಸೇವೆ ಮಾಡಿರುವುದುಸುಂದರರಾಯರ ಹೆಚ್ಚುಗಾರಿಕೆರಾಮಕೃಷ್ಣಭರತಪರೀಕ್ಷಿತಸುಧನ್ವವಿಶ್ವಾಮಿತ್ರಕರ್ಣವಿಷ್ಣುಈಶ್ವರಚಾರ್ವಾಕ ಮುಂತಾದವು ಅವರಿಗೆ ಕೀರ್ತಿ ತಂದ ಪಾತ್ರಗಳು ತಾಳಮದ್ದಲೆಕ್ಷೇತ್ರದಲ್ಲಿ ಬಹು ಬೇಡಿಕೆಯ ಅರ್ಥಧಾರಿಯಾಗಿಯೂ ಗುರುತಿಸಿಕೊಂಡಿದ್ದ ಕುಂಬಳೆಯವರಮಾತಿನ ಧಾಟಿಯನ್ನು ಅನುಕರಿಸುವ ಅದೆಷ್ಟೋ ಯುವ ಕಲಾವಿದರಿದ್ದಾರೆಪ್ರಾಸ ಬದ್ಧಮಾತುಗಾರಿಕೆಗೆ ಹೆಸರಾದ ಅವರು ಉಳಿದವರೂ ಅದನ್ನು ಅನುಕರಿಸ ಹೊರಟಾಗ ಪ್ರಾಸಪ್ರಯೋಗವನ್ನೇ ಬಿಟ್ಟುಬಿಟ್ಟರು


ಸುಂದರರಾಯರು ವಿದೇಶಗಳಲ್ಲೂ ಯಕ್ಷಗಾನ ತಂಡದೊಂದಿಗೆ ಸಂಚಾರ ಮಾಡಿದ್ದರುಅಮೇರಿಕಾದ ಚಿಕಾಗೋದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿಯೂ ಪಾಲ್ಗೊಂಡಿದ್ದರುಅನೇಕವರ್ಷಗಳಿಂದ ಚೌತಿಯ ಸಂದರ್ಭದಲ್ಲಿ ತಮ್ಮದೇ ಕಲಾವಿದರ ತಂಡದೊಂದಿಗೆ ಕರ್ನಾಟಕದಉದ್ದಗಲಕ್ಕೆ ಸಂಚರಿಸಿ ನೂರಾರು ಕಾಲಮಿತಿಯ ಯಕ್ಷಗಾನ ಪ್ರದರ್ಶಗಳನ್ನು ನೀಡಿದ ಅನುಭವೂಅವರಿಗಿತ್ತುಇನ್ನೂರಕ್ಕಿಂತ ಹೆಚ್ಚು ಧ್ವನಿ ಸುರುಳಿಗಳು ಇಪ್ಪತ್ತೈದಕ್ಕಿಂತ ಹೆಚ್ಚು ಸಿಡಿ ದೃಶ್ಯತಟ್ಟೆಗಳಲ್ಲೂ ಅವರು ಪಾತ್ರ ವಹಿಸಿದ್ದರು ಆಕಾಶವಾಣಿದೂರದರ್ಶನಗಳಲ್ಲಿಕಾಣಿಸಿಕೊಂಡಿದ್ದರು


ಯಕ್ಷಗಾನ ರಂಗದ ಜನಪ್ರಿಯತೆ ಕುಂಬಳೆಯವರನ್ನು ರಾಜಕೀಯವಾಗಿಯೂ ಗೆಲ್ಲಿಸಿತು. 1994ರಲ್ಲಿ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಅವರು 1998 ತನಕ ಕರ್ನಾಟಕದವಿಧಾನಸಭೆಯಲ್ಲಿ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2009ರಿಂದ 2012 ವರೆಗೆ ಕರ್ನಾಟಕಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿ ದುಡಿದಿದ್ದರುಸಂಸ್ಕಾರ ಭಾರತಿಯ ಕರ್ನಾಟಕಪ್ರಾಂತ್ಯ ರಾಜ್ಯಾಧ್ಯಕ್ಷರಾಗಿ ಕಾಯನಿರ್ವಹಿದ್ದರು ಸಾರ್ವಜನಿಕ ಭಾಷಣಧಾರ್ಮಿಕಪ್ರವಚನಗಳಲ್ಲಿ ಅವರದ್ದು ಎತ್ತಿದ ಕೈ.


ಕರ್ನಾಟಕ ರಾಜ್ಯ ಪ್ರಶಸ್ತಿಬೆಹರಿನ್ ಕರ್ನಾಟಕ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿವಿಶ್ವ ಕನ್ನಡಸಮ್ಮೇಳನ ಪ್ರಶಸ್ತಿಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿಪೇಜಾವರ ವಿಶ್ವೇಶ್ವ ತೀರ್ಥರಿಂದ ವಿಜಯವಿಠಲ ಪ್ರಶಸ್ತಿಸೋದೆ ಮಠದ ಪರ್ಯಾಯ ಪ್ರಶಸ್ತಿಉಡುಪಿ ಕಲಾರಂಗ ಪ್ರಶಸ್ತಿಪಾವಂಜೆ ಯಕ್ಷಗಾನ ಸಪ್ತಾಹಪ್ರಶಸ್ತಿ ಇತ್ಯಾದಿ ನೂರಾರು ಸನ್ಮಾನಗಳಿಗೆ ಕುಂಬಳೆ ಪಾತ್ರರಾಗಿದ್ದರು. 2007ರಲ್ಲಿ ಡಾಡಿ.ಕೆಚೌಟಪ್ರತಿಷ್ಠಾನದಿಂದ ಸುಂದರರಾಯರಿಗೆ ಸಾರ್ವಜನಿಕ ಸಮ್ಮಾನ ಮತ್ತು ‘ಸುಂದರಕಾಂಡ’ ಗ್ರಂಥಸಮರ್ಪಣೆಯಾಗಿತ್ತು.


ಕುಂಬಳೆ ಸುಂದರರಾವ್ ಅವರು 2022 ನವೆಂಬರ್ 30ರಂದು  ಲೋಕವನ್ನಗಲಿದರು.


ಲೇಖನ ಆಧಾರಭಾಸ್ಕರ ರೈ ಕುಕ್ಕುವಳ್ಳಿ ಅವರ ಬರಹ


Yakshagana artiste Kumbale Sundar Rao


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ