ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆಳಗಾಯಿತು


ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿವಾಸ ಶ್ರೀ ವೆಂಕಟೇಶ
ಏಳಯ್ಯ ಬೆಳಗಾಯಿತು….ಏಳಯ್ಯ ಬೆಳಗಾಯಿತು ||

ದಾಸರೆಲ್ಲರು ಬಂದು ಧೂಳಿದರ್ಶನಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಕೇಶವನೆ ನಿಮ್ಮ ಸಿರಿನಾಮವನು ಸ್ಮರಿಸುತಲಿ
ವಾಸುದೇವನೆ ಉದಯದಲ್ಲಿ ಪಾಡುತಿಹರು ||೧||

ಕಾಸಿದ್ದ ಹಾಲುಗಳ ಕಾವಡಿಯ ತುಂಬಿಟ್ಟು
ಲೇಸಾಗಿ ಕೆನೆಮೊಸರು ಬೆಣ್ಣೆಯನು ಮೆದ್ದು
ಶೇಷಶಯನನೆ ಏಳು ಸಮುದ್ರಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ ||೨||

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿಹರಯ್ಯ ಸುಜನರೊಡೆಯ
ಅರವಿಂದಲೋಚನನೆ ಕೋಳಿ ಕೂಗಿತು ಏಳು
ಪುರಂದರವಿಠಲನೆ ಬೆಳಗಾಯಿತು ||೩||

ಸಾಹಿತ್ಯ: ಪುರಂದರದಾಸರು
Art by: Keshav




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ