ರೇಖಾ ಮಹೇಶ್
ರೇಖಾ ಮಹೇಶ್
ಸರಳ, ಸ್ನೇಹಪರ ಗುಣ ಮತ್ತು ಸಾಂಸ್ಕೃತಿಕ ಮನೋಭಾವಗಳ ಸಂಗಮರಾದ, ಕಲಾವಿದೆ ರೇಖಾ ಮಹೇಶ್ ಅವರ ಹುಟ್ಟುಹಬ್ಬ ಡಿಸೆಂಬರ್ 31ರಂದು.
ರೇಖಾ ಮಹೇಶ್ ಅವರಿಗೆ ರೂಪದರ್ಶಿಯಾಗಿ ಮತ್ತು ಕಲಾವಿದೆಯಾಗಿ ಕಾರ್ಯನಿರ್ವಹಿಸುವುದು ಒಂದು ಆಪ್ತ ಹವ್ಯಾಸ. ಜೊತೆಗೆ ಅವರು ತಮ್ಮ ಕುಟುಂಬದ ಸೆಕ್ಯೂರಿಟಿ ಎಲೆಕ್ಟ್ರಾನಿಕ್ಸ್ , ಕೋವಿಡ್ ಪ್ರೊಟೆಕ್ಷನ್ ಪ್ರಾಡಕ್ಟ್ಸ್ ಮತ್ತು ರೆಸಿನ್ ಆರ್ಟ್ಸ್ ವಹಿವಾಟು ಉದ್ಯಮದಲ್ಲಿ ಮಾನವಸಂಪನ್ಮೂಲ ಮತ್ತು ಲೆಕ್ಕಪತ್ರ ವಿಭಾಗದ ನಿರ್ವಹಣಾ ಉಸ್ತುವಾರಿಯನ್ನೂ ನಿರ್ವಹಿಸುತ್ತಿದ್ದಾರೆ.
ಆತ್ಮೀಯರಾದ ರೇಖಾ ಮಹೇಶ್ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
🎂🎉🍰🎁🍦💐😊
Happy birthday Rekha Mahesh
ಕಾಮೆಂಟ್‌ಗಳು