ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ8




 

ಜಯದೇವಕವಿಯ ಗೀತಗೋವಿಂದ

ಅಷ್ಟಪದಿ 7

*ಸಂಕ್ಷಿಪ್ತ ಭಾವ*


ಇಲ್ಲಿ ಕೃಷ್ಣನು ರಾಧೆಯನ್ನು ಕುರಿತು ಆಡುವ ನುಡಿಗಳಿವೆ. ಅವನ ವಿರಹ, ಪಶ್ಚಾತ್ತಾಪ ಇಲ್ಲಿನ ವಸ್ತು.

ತನ್ನ ಸುತ್ತ ಹಲವಾರು ಸ್ತ್ರೀಯರು ಇದ್ದುದನ್ನು ನೋಡಿ ಮುನಿಸಿಕೊಂಡ ರಾಧೆಯನ್ನು ಕಂಡು ಹೆದರಿದ ಕೃಷ್ಣ ಅಪರಾಧಿ ಭಾವದಿಂದ ಅವಳನ್ನು ತಡೆಯಲು ಪ್ರಯತ್ನಿಸಿದರೂ ಅವಳು ನಿಲ್ಲದೆ ನಡೆದಳು.

ಅವಳು ವಿರಹದ ತಾಪದಲ್ಲಿ ಏನನ್ನು ನುಡಿದಳೋ, ಏನನ್ನು ಮಾಡಿದಳೋ ತಿಳಿಯದು. ಐಶ್ವರ್ಯ, ಪರಿವಾರ, ಭವ್ಯವಾದ ಮನೆ..ಎಲ್ಲವೂ ಇದ್ದು ಪ್ರಯೋಜನವೇನು?  ಕೋಪದಿಂದ ಹುಬ್ಬನ್ನು ಬಿಗಿದ ಅವಳ ಮುಖ ಕೆಂಪಾಗಿತ್ತು. ಕೆಂದಾವರೆಯೆಂದು ಭ್ರಮಿಸಿ ದುಂಬಿಗಳು ಮುತ್ತಿದವಲ್ಲ!

ಈಗ ಏನು ಮಾಡಲಿ? ಅವಳೊಡನೆ ಇದ್ದುದನ್ನು ನೆನೆಯಲೆ, ಅನುಸರಿಸಿ ನಡೆಯಲೆ, ಸುಮ್ಮನೇ ಇಲ್ಲಿ ಚಿಂತಿಸಿದರೆ ಏನು ಪ್ರಯೋಜನವೆಂದು ಹರಿಯ ಚಿಂತೆ ಸಾಗಿದೆ.

ಅವಳು ಎಲ್ಲಿ ಇರುವಳೆಂದು ತಿಳಿದರೆ ಅವಳನ್ನು ಅನುನಯದಿಂದ ಸಂತೈಸುತ್ತೇನೆ. ಬರಿದೇ ಮತ್ಸರದಿಂದ ಸವೆಯದಿರು ಎಂದು ಕೇಳುವೆನು. ನನ್ನ ಕಣ್ಣ ಎದುರಿಗೆ ನಿಂತಿರುವಂತಿದೆ, ನನ್ನ  ಎದುರಿಗೆ ನಡೆದಾಡುತ್ತಿರುವಂತೆ ಭಾಸವಾಗುತ್ತಿದೆಯೆಂದು ಹರಿಯು ಕೊರಗುವನು

ನಾನು ಏನಾದರೂ ತಿಳಿಯದೆ ತಪ್ಪು ಮಾಡಿರುವುದಾದಲ್ಲಿ ಕ್ಷಮಿಸು, ಮತ್ತೆ ಹಾಗೆ ನಡೆಯದಂತೆ ನೋಡಿಕೊಳ್ಳುವೆ. ದಯವಿಟ್ಟು ದರ್ಶನ ನೀಡು. ಮನ್ಮಥನ ಬಾಧೆಗೆ ಒಳಗಾಗಿರುವೆನು ಎಂದು ಬೇಡಿಕೊಳ್ಳುವನು.

ಶ್ರೀ ಜಯದೇವಕವಿಯು ಬಣ್ಣಿಸಿರುವ ಈ ಸುಂದರವಾದ, ವಿರಹಗೀತೆಯಂತಿರುವ ಈ ಭಾಗವು ಭಕ್ತರನ್ನು ಪೊರೆಯಲಿ.

( ಇಲ್ಲಿಗೆ ಮೂರನೆಯ ಸರ್ಗ ಮುಗಿಯಿತು. ಇದರಲ್ಲಿಯೂ ಒಂದೇ ಅಷ್ಟಪದಿಯಿದೆ )


*ಪರಮೇಶ್ವರ ಭಟ್ಟರ ಕನ್ನಡ ರೂಪ*

ಅಷ್ಟಪದಿ ೭

ನಾನು ಆದರ ತೋರದಾದೆನು ಮುನಿಸಿಕೊಂಡವಳಾಹ ಹೋದಳು ಹರಿ ಹರಿ 

ವಧುಗಳೊಡವೆರೆದಾನು ನಲಿಯುತಲಿದ್ದುದನು ತಾ ನೋಡಿ ರಾಧೆಯು ನಡೆದಳು 

ಹೆದರಿ ನಾನಪರಾಧಿಯಾದುದರಿಂದಲವಳನ್ನು ತಡೆಯದಾದೆನು ನಡೆದಳು. ೧

ಆಕೆ ಚಿರವಿರಹದೊಳು ನವೆಯುತೆ ನುಡಿವಳೇನನು ಗೈವಳೇನನು ತಿಳಿಯದು 

ಧನವಿದೇವುದು ಜನವಿದೇವುದು ಗೃಹವಿದೇವುದು ನನ್ನ ಜೀವಿತವೇವುದು. ೨

ಕೋಪಭರದೊಳು ಆಕೆ ಹುಬ್ಬನು ಬಿಗಿದ ಮೊಗವನು ನಾನು ಚಿಂತಿಸುತಿರುವೆನು 

ಕೆಂಪು ತಾವರೆ ಮೇಲೆ ಬಂಡುಣಿವಿಂಡು ತಾ ಬಂದೆರಗಿದಂದದ ಮೊಗವನು. ೩

ಎದೆಯೊಳೊಡವೆರೆದ ನಿಶಮಿರುವಾಕೆಯನ್ನು ನೆನೆಯಲೆ ವನದೊಳೇನನುಸುರಲೆ

ಅಲ್ಲದಿರೆ ನಾನಾಕೆಯನು ಕುರಿತಿಲ್ಲಿ ನಮೆಯುತೆ ಬರಿದೆ ಸಲೆ ಹಂಬಲಿಸಲೆ. ೪

ಬರಿದೆ ಕರುಬಿದ ಕತದೊಳಸಿಯಳೆ ದುಗುಡದೊಳು ಬಗೆ ಸಿಲುಕಿತೆಂದೇ ಬಗೆವೆನು

ಎಲ್ಲಿಗೈದಿಹೆಯೆನುವುದರಿಯದೆ ನಮನ ಮಾತ್ರದೆ ನಿನ್ನನನುನಯಗೊಳಿಪೆನು. ೫

 ಕಣ್ಣೆದುರಿನೊಳೆ ನೀ ನಡೆದಾಡುವಂತಿದೆ ಕಣ್ಗೆ ಕಾಣಿಸುವಂತಿದೆ. ವರೇತಕೆ ಮೊದಲಿನಂದದೆ ತಬ್ಬಿಕೊಳ್ಳದೆ ನೀನು ನಿಂದಿಹೆ ದೂರದೆ. ೬

ಕ್ಷಮಿಸು ನಾ ತಪ್ಪೇನನಾದರು ಗೈದುದಾದರೆ ಮತ್ತೆ ನಾನಂತೆಸಗೆನು  ದೇಹಿ ಸುಂದರಿ ದರ್ಶನವನೆನಗಾನು ಮನ್ಮಥಬಾಧೆಗೊಳಗಾಗಿರುವೆನು. ೭

ಗೀತವಿದನೊಲಿದಿಂತು ಬಣ್ಣಿಸಿದವನು ಶ್ರೀ ಜಯದೇವ ಕವಿ ಹರಿಭಕ್ತನು 

ಕಿಂದುಬಿಲ್ವ ಸಮುದ್ರ ಸಂಭವ ರೋಹಿಣೀಪತಿಯೆಂದು ಮೆರೆದಿರುವಾತನು. ೮


*ಮೂಲಭಾಗ*

ತೃತೀಯ ಸರ್ಗಃ – ಮುಗ್ಧ ಮಧುಸೂದನಮ್

ಕಂಸಾರಿರಪಿ ಸಂಸಾರವಾಸನಾಬದ್ಧ ಶೃಂಖಲಾಂ

ರಾಧಾಮಾಧಾಯ ಹೃದಯೇ ತತ್ಯಾಜವ್ರಜ ಸುಂದರೀ: ||೧||


ಇತಸ್ತತಸ್ತಾಮನುಸೃತ್ಯರಾಧಿಕಾಮನಂಗಬಾಣವ್ರಣಖಿನ್ನ ಮಾನಸಃ

ಕೃತಾನುತಾಪಃ ಸ ಕಲಿಂದನಂದಿನೀತಟಾಂತಕುಂಜೇ ನಿಷಸಾದ ಮಾಧವಃ ||೨||


 ಗೀತಂ – ಅಷ್ಟಪದೀ – 7- ಮುಗ್ಧ ಮಧುಸೂದನ ಹಂಸಕ್ರೀಡಮ್ 1 ಗುರ್ಜರೀರಾಗ, ಪ್ರತಿಮಂಠತಾಲ


ಮಾ ಮಿಯಂ ಚಲಿತಾ ವಿಲೋಕ್ಯ ವೃತಂ ವಧೂನಿಚಯೇನ

ಸಾಪರಾಧತಯಾ ಮಯಾsಪಿ ನ ವಾರಿತಾsತಿಭಯೇನ 

ಹರಿ ಹರಿ ಹತಾದರತಯಾ ಗತಾ ಸಾ ಕುಪಿತೈವ ||ಧ್ರುವಮ್|| ||೩||


ಕಿಂ ಕರಿಷ್ಯತಿ ಕಿಂ ವದಿಷ್ಯತಿ ಸಾ ಚಿರಂ ವಿರಹೇಣ 

ಕಿಂ ಧನೇನ ಜನೇನ ಕಿಂ ಮಮ ಜೀವಿತೇನ ಗೃಹೇಣ ||೪||


ಚಿಂತಯಾಮಿ ತದಾನನಂ ಕುಟಿಲಭ್ರು ಕೋಪಭರೇಣ ಶೋಣಪದ್ಮಮಿವೋಪರಿ ಭ್ರಮತಾಕುಲಂ ಭ್ರಮರೇಣ ||೫||


ತಾಮಹಂ ಹೃದಿ ಸಂಗತಾಮನಿಶಂ ಭ್ರಶಂ ರಮಯಾಮಿ 

ಕಿಂ ವನೇsನುಸರಾಮಿ ತಾಮಿಹ ಕಿಂ ವೃಥಾ ವಿಲಪಾಮಿ ||೬||


ತನ್ವಿ ಖಿನ್ನ ಮಸೂಯಯಾ ಹೃದಯಂ ತವಾಕಲಯಾಮಿ

ತನ್ನ ವೇದ್ಮಿ ಕುತೋ ಗತಾಸಿ ನತೇನ ತೇsನುನಯಾಮಿ ||೭||


ದೃಶ್ಯಸೇ ಪುರತೋ ಗತಾಗತಮೇವ ಮೇ ವಿದಧಾಸಿ

ಕಿಂಪುರೇವ ಸಸಂಭ್ರಮಂ ಪರಿರಂಭಣಂ ನ  ದದಾಸಿ ||೮||


ಕ್ಷಮ್ಯತಾಮಪರಂ  ಕದಾಪಿ ತವೇದೃಶಂ  ನ ಕರೋಮಿ

ದೇಹಿ ಸುಂದರಿ ದರ್ಶನಂ ಮಮ ಮನ್ಮಥೇನ ಮನೋಮಿ ||೯||


ವರ್ಣಿತಂ ಜಯದೇವಕೇನ ಹರೇರಿದಂ ಪ್ರವಣೇನ

ಕಿಂದುಬಿಲ್ವಸಮುದ್ರಸಂಭವರೋಹಿಣೀ ರಮಣೇನ ||೧೦||


ಹೃದಿ ಬಿಸಲತಾಹಾರೋ ನಾಯಂ ಭುಜಂಗಮನಾಯಕಃ

ಕುವಲಯದಲಶ್ರೇಣೀ ಕಂಠೇ ನ ಸಾಗರಲದ್ಯುತಿಃ 

ಮಲಯಜರಜೋ ನೇದಂ ಭಸ್ಮ ಪ್ರಿಯಾರಹಿತೇ ಮಯಿ

ಪ್ರಹರಸಿ ಹರಭ್ರಾಂತ್ಯಾsನಂಗ ಕ್ರುಧಾ ಕಿಮು ಧಾವಸಿ ||೧೧||


ಪಾಣೌ ಮಾ ಕುರು ಚೂತಸಾಯಕಮಮುಂ ಮಾ ಚಾಪಮಾರೋಪಯ ಕ್ರಿಡಾನಿರ್ಜಿತವಿಶ್ವ ಮೂರ್ಚ್ಛಿತಜನಾಘಾತೇನ ಕಿಂ ಪೌರುಷಂ 

ತಸ್ಮಾ ಏವ ಮೃಗೀದೃಶೋ ಮನಸಿಜಪ್ರೇಂಖತ್ಕಟಾಕ್ಷಾಶುಗ_ ಶ್ರೇಣೀಜರ್ಜರಿತಂ ಮನಾಗಪಿ ಮನೋ ನಾದ್ಯಾಪಿ ಸಂಧುಕ್ಷತೇ ||೧೨||


ಭೂಪಲ್ಲವಂ ಧನುರವಾಂಗತರಂಗಿತಾನಿ

ಬಾಣಾ ಗುಣಃ ಶ್ರವಣಪಾಲಿರಿತಿ ಸರೇಣ ತಸ್ಯಾಮನಂಗಜಯಜಂಗಮದೇವತಾಯಾ_

ಮಸ್ತ್ರಾಣಿ ನಿರ್ಜಿತಜಗಂತಿ ಕಿಮರ್ಪಿತಾನಿ ||೧೩||


ಭ್ರೂಚಾಪೇ ನಿಹಿತಃ ಕಟಾಕ್ಷವಿಶಿಖೋ ನಿರ್ಮಾತು ಮರ್ಮವೃಥಾಂ ಶ್ಯಾಮಾತ್ಮಾ ಕುಟಿಲಃ ಕರೋತು ಕಬರೀಭಾರೋಽಪಿ ಮಾರೋದ್ಯಮಂ ಮೋಹಂ ತಾವದಯಂ ಚ ತನ್ನಿ ತನುತಾಂ ಬಿಂಬಾಧರೋ ರಾಗವಾನ್ ಸದ್ವೃತ್ತಃ ಸ್ತನಮಂಡಲಸ್ತವ ಕಥಂ ಪ್ರಾಣೈರ್ಮಮ ಕ್ರೀಡತಿ ||೧೪||


ತಾನಿಸ್ಪರ್ಶಸುಖಾನಿ ತೇ ಚ ತರಲಾಃ ಸ್ನಿಗ್ಧಾದೃಶೋರ್ವಿಭ್ರಮಾ ಸ್ತದ್ವಕ್ತ್ರಾಂಬುಜಸೌರಭಂ ಸ ಚ ಸುಧಾಸ್ಯಂದೀಗಿರಾಂ ವಕ್ರಿಮಾ

ಸಾ ಬಿಂಬಾಧರ ಮಾಧುರೀತಿ ವಿಷಯಾಸಂಗೇಽಪಿ ಚೇನ್ಮಾನಸಂ ತಸ್ಯಾಂ ಲಗ್ನ ಸಮಾಧಿ ಹಂತ ವಿರಹವ್ಯಾಧಿಃ ಕಥಂ ವರ್ಧತೇ ||೧೫||


 ತಿರ್ಯಕ್ಕಂಠವಿಲೋಲಮೌಲಿತರಲೋತ್ತಂಸಸ್ಯ ವಂಶೋಚ್ಚರ_ ದೀಪ್ತಿಸ್ಥಾನಕೃತಾವಧಾನಲಲನಾಲಕ್ಷೈರ್ನ ಸಂಲಕ್ಷಿತಾಃ 

ಸಮ್ಮುಗ್ಧೇ ಮಧುಸೂದನಸ್ಯ ಮಧುರೇ ರಾಧಾಮುಖೇಂದೌ ಸುಧಾ_

ಸಾರೇ ಕಂದಲಿತಾಶ್ಚಿರಂ ದದತುವಃ ಕ್ಷೇಮಂ ಕಟಾಕ್ಷೋರ್ಮಯ: II೧೬||


|| ಇತಿ ಶ್ರೀ ಗೀತಗೋವಿಂದೇ ಮಹಾಕಾವ್ಯೇ ಮುಗ್ಧ ಮಧುಸೂದನೋನಾಮ ತೃತೀಯ ಸರ್ಗಃ ||


ಕೃತಜ್ಣತೆ:

1. ಮೂಲ: ಜಯದೇವ ಕವಿಯ 'ಗೀತಗೋವಿಂದ'

 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ

3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ