ಶಿವನಾಥ ಶಾಸ್ತ್ರಿ
ಶಿವನಾಥ ಶಾಸ್ತ್ರಿ
ಶಿವನಾಥ ಶಾಸ್ತ್ರಿ ಅವರು ಮಹಾನ್ ಸಮಾಜ ಸುಧಾರಕ, ಬರಹಗಾರ, ಅನುವಾದಕ, ವಿದ್ವಾಂಸ, ಸಂಪಾದಕ, ತತ್ವಶಾಸ್ತ್ರಜ್ಞ ಮತ್ತು ಇತಿಹಾಸಕಾರ.
ಶಿವನಾಥ ಶಾಸ್ತ್ರಿಯವರು 1847ರ ಜನವರಿ 31ರಂದು ಜನಿಸಿದರು. ಧರ್ಮನಿಷ್ಠ ಹಿಂದೂ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಯೌವನದಲ್ಲಿ ಬ್ರಹ್ಮ ಸಮಾಜಕ್ಕೆ ಆಕರ್ಷಿತರಾದರು. ಶಿವನಾಥ್ ಅವರು ತಮ್ಮ ವಿಶ್ವವಿದ್ಯಾನಿಲಯ ವೃತ್ತಿಜೀವನವನ್ನು ಪೂರ್ಣಗೊಳಿಸುವ ಮೂರು ವರ್ಷಗಳ ಮೊದಲು, 1869ರಲ್ಲಿ ಆನಂದ ಮೋಹನ್ ಬೋಸ್, ಕೃಷ್ಣ ಬಿಹಾರಿ ಸೇನ್, ರಜನಿ ನಾಥ್ ರೇ ಮತ್ತು ಇತರರೊಂದಿಗೆ ಕೇಶುಬ್ ಚಂದ್ರ ಸೇನ್ ಅವರಿಂದ ಬ್ರಹ್ಮವಾದಕ್ಕೆ ದೀಕ್ಷೆ ಪಡೆದರು. ಇದಕ್ಕಾಗಿ ಅವರು ತಮ್ಮ ಹತ್ತಿರವಾದ ಬಂಧುಗಳಿಂದ ಮತ್ತು ಆತ್ಮೀಯರಾದವರಿಂದ ತೀವ್ರ ಕಿರುಕುಳವನ್ನು ಸಹಿಸಬೇಕಾಯಿತು. ಅವರು ವಿಗ್ರಹಾರಾಧನೆಯನ್ನು ತ್ಯಜಿಸಿದರು. ಪವಿತ್ರ ದಾರವನ್ನು ಸಹ ತ್ಯಜಿಸಿದರು. ಹೀಗೆ ತಮ್ಮ ಪೋಷಕರು ಮತ್ತು ನೆರೆಹೊರೆಯವರ ಅವಕೃಪೆಗೆ ಒಳಗಾದರು.
ಶಿವನಾಥರು ವಿಶ್ವವಿದ್ಯಾನಿಲಯವನ್ನು ತೊರೆದ ಸ್ವಲ್ಪ ಸಮಯದ ನಂತರ, ಬ್ರಹ್ಮ ಸಮಾಜದ ಕೆಲಸದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರಾರಂಭಿಸಿದರು. ಪ್ರತಿಕೂಲವಾದ ದೇಶೀಯ ಪರಿಸ್ಥಿತಿಗಳಿಂದಾಗಿ ವಿಭಿನ್ನ ಸಾಂಸ್ಕೃತಿಕ ನೆಲೆಯ ಕೆಲಸವನ್ನು ಅವರು ಸ್ವೀಕರಿಸಬೇಕಾಯಿತು. ಅವರ ಮನಸ್ಸು ಈ ಪರಿಸ್ಥಿತಿಯಲ್ಲಿ ಸುಲಭವಾಗಿ ಹೊಂದಿಕೊಳ್ಳಲಾಗಲಿಲ್ಲ. ಅವರಲ್ಲಿದ್ದ ಬ್ರಹ್ಮ ಸಮಾಜಕ್ಕೆ ಪೂರ್ಣ ಹೃದಯದಿಂದ ಸೇವೆ ಸಲ್ಲಿಸುವ ಆಕಾಂಕ್ಷೆಯು, ಅತ್ಯಂತ ಭರವಸೆಯ ವೃತ್ತಿಜೀವನವನ್ನು ತ್ಯಜಿಸುವಂತೆ ಮಾಡಿತು.
1878ರಲ್ಲಿ ಬ್ರಹ್ಮ ಸಮಾಜವನ್ನು ಸ್ಥಾಪಿಸಿದಾಗಿನಿಂದ, ಶಿವನಾಥ್ ಅವರು ಬ್ರಹ್ಮ ಸಮಾಜದ ಜೀವನ ಮತ್ತು ಆತ್ಮರಾದರು. ಸಮಾಜದ ಸಂಘಟಕರಾಗಿ ಮತ್ತು ಅದರ ಮುಖ್ಯ ಸಭೆಯ ಪ್ರಧಾನರಾಗಿದ್ದರು. ಅವರು ಆನಂದ ಮೋಹನ್ ಬೋಸ್ ಅವರೊಂದಿಗೆ ಸಿಟಿ ಸ್ಕೂಲ್, ಸಿಟಿ ಕಾಲೇಜ್ ಮತ್ತು ಸ್ಕೂಲ್ ಸ್ಥಾಪನೆ ಮಾಡಿ ಅದರ ಮೊದಲ ಕಾರ್ಯದರ್ಶಿ ಆದರು. ಅವರು ಅನೇಕ ವರ್ಷಗಳ ಕಾಲ ಸಾಧಾರಣ ಬ್ರಹ್ಮ ಸಮಾಜದ ಬಂಗಾಳಿ ಅಂಗವಾದ ತತ್ತ್ವಕೌಮುದಿಯ ಸಂಪಾದಕರಾಗಿದ್ದರು. ಅವರು ಬ್ರಹ್ಮೊ ಸಾರ್ವಜನಿಕ ಅಭಿಪ್ರಾಯದ ಅಂಕಣಗಳಿಗೆ ನಿಯಮಿತವಾಗಿ ಕೊಡುಗೆ ನೀಡಿದರು ಮತ್ತು ಪತ್ರಿಕೆಯು ಅಸ್ತಿತ್ವ ಕಳೆದುಕೊಂಡ ನಂತರ ಇಂಡಿಯನ್ ಮೆಸೆಂಜರ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶಾಸ್ತ್ರಿ ಅವರು ಬ್ರಹ್ಮೋ ಬಾಲಿಕಾ ಶಿಕ್ಷಣಾಲಯದ ಸ್ಥಾಪನೆಗೆ ಸಹಾಯ ಮಾಡಿದರಲ್ಲದೆ ಅದರ ಕಾರ್ಯದರ್ಶಿಯಾದರು. ಪಾಟ್ನಾದಲ್ಲಿ ರಾಮಮೋಹನ್ ರಾಯ್ ಸೆಮಿನರಿಯನ್ನು ಸ್ಥಾಪಿಸಿದರು. ಸಾಧನ್ ಆಶ್ರಮವನ್ನು ಆಧ್ಯಾತ್ಮಿಕ ಚಟುವಟಿಕೆಯ ಕೇಂದ್ರವಾಗಿ ಹಾಗೂ ಮಿಷನ್ ಕಾರ್ಯಕರ್ತರ ತರಬೇತಿ ಕೇಂದ್ರವನ್ನಾಗಿ ಸ್ಥಾಪಿಸಿದರು. ಉಪನ್ಯಾಸಕರಾಗಿ ನೂರಾರು ಉತ್ಸಾಹಿ ಕೇಳುಗರ ಮೇಲೆ ಆಳವಾದ ಪ್ರಭಾವ ಬೀರಿದರು. ಮಿಷನರಿಯಾಗಿ ಅವರು ಬ್ರಹ್ಮ ಸಮಾಜದ ಸಂದೇಶವನ್ನು ಭಾರತದ ಮೂಲೆ ಮೂಲೆಗಳಿಗೆ ಕೊಂಡೊಯ್ದರು. ಹೋದಲ್ಲೆಲ್ಲಾ ಉತ್ಸಾಹದಿಂದ ಕೇಳುಗರ ಗುಂಪನ್ನು ಆಕರ್ಷಿಸಿದರು. ಇಂಗ್ಲೆಂಡ್‌ಗೆ ಭೇಟಿ ನೀಡಿದರು. ಅವರ ಸ್ಪೂರ್ತಿದಾಯಕ ವಾಕ್ಚಾತುರ್ಯದಿಂದ, ಅವರ ಶ್ರದ್ಧೆಯಿಂದ, ಉದಾತ್ತ ಚಿಂತನೆಯಿಂದ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಅನುಭವದ ಸಂಪತ್ತಿನಿಂದ, ಆರಾಧನೆಯ ಸಂತೋಷ ಮತ್ತು ಪ್ರಾರ್ಥನೆಯ ಶಕ್ತಿಗೆ ನಿರಂತರ ಸಾಕ್ಷಿಯನ್ನು ಹೊಂದಿದ್ದರಿಂದ ಅಂದಿನ ತಮ್ಮ ಸಮಕಾಲೀನರ ಜೀವನ ನಿರ್ಮಾಣದಲ್ಲಿ ಅವರು ಪ್ರಧಾನ ಪ್ರಭಾವ ಹೊಂದಿದ್ದರು.
ಶಿವನಾಥ ಶಾಸ್ತ್ರಿ ಅವರು ಮೂಲತತ್ವಗಳಿಂದ ಅಡ್ಡ ಹಾದಿ ಹಿಡಿದ ಕೆಶುಬ್ ಮತ್ತು ಅವರ ಹೊಸ ಡಿಸ್ಪೆನ್ಸೇಶನ್ ಅನ್ನು ಪರಿಣಾಮಕಾರಿಯಾಗಿ ವಿರೋಧಿಸಿದರು. ಅವಿಭಜಿತ ಭಾರತದ ತಮ್ಮ ವ್ಯಾಪಕವಾದ ಮಿಷನ್ ಪ್ರವಾಸಗಳಲ್ಲಿ ಅಸಂಖ್ಯಾತ ಬ್ರಹ್ಮೋಸ್ ಅನ್ನು ಅವರಿಗೆ ಗೆಲ್ಲಲು ಸಾಧ್ಯವಾಯಿತು, ಕೇಶುಬ್ನ ವಿಮುಖ ಹಾದಿಯಿಂದ ಬ್ರಹ್ಮವಾದವನ್ನು ಉಳಿಸಲು ಸಾಧಾರಣ್ ಬ್ರಹ್ಮ ಸಮಾಜವು ಅಸ್ತಿತ್ವಕ್ಕೆ ಬಂದಿತು. ಅವರು ಮಿಷನರಿಗಳ ಉತ್ತಮ ಶಿಕ್ಷಕರೆಂದು ಸಾಬೀತುಪಡಿಸಿದರು. ತಮ್ಮ ತರ್ಕಬದ್ಧವಾದ ಆಸ್ತಿಕತೆ, ಸಾಮಾಜಿಕ ಸುಧಾರಣೆ, ಮಾನವತಾವಾದ ಮತ್ತು ರಾಜಕೀಯ ಉದಾರವಾದದ ಪ್ರೀತಿಯಿಂದ ಜನರಲ್ಲಿ ಸ್ಫೂರ್ತಿ ತುಂಬಿದರು. ಪೂರ್ವ ಬಂಗಾಳದಲ್ಲಿ ಬಿಜೋಯ್ ಕೃಷ್ಣ ಗೋಸ್ವಾಮಿ, ಪಂಜಾಬ್‌ನಲ್ಲಿ ಶಿವನಾರಾಯಣ ಅಗ್ನಿಹೋತ್ರಿ, ಪಂಜಾಬ್‌ನಲ್ಲಿ ಬಿಪಿನ್ ಚಂದ್ರ ಪಾಲ್, ದಕ್ಷಿಣ ಭಾರತದಲ್ಲಿ ಹೇಮ ಚಂದ್ರ ಸರ್ಕಾರ್, ಪಶ್ಚಿಮ ಭಾರತದಲ್ಲಿ ನಾಗೇಂದ್ರನಾಥ ಚಟರ್ಜಿ, ಪೂರ್ವ ಭಾರತದಲ್ಲಿ ರಾಮ್ ಕುಮಾರ್ ವಿದ್ಯಾರತ್ನ ಮತ್ತು ಅಸ್ಸಾಂನಲ್ಲಿ ನೀಲ್ಮಣಿ ಚಕ್ರವರ್ತಿ ಮುಂತಾದ ಪ್ರತಿಭಾವಂತ ಮತ್ತು ಉನ್ನತ ಆಧ್ಯಾತ್ಮಿಕ ಮಿಷನರಿಗಳನ್ನು ವಿವಿಧ ಸಮಯಗಳಲ್ಲಿ ಶಿವನಾಥ್ ಹೊಂದಿದ್ದರು.
ಶಿವನಾಥ ಶಾಸ್ತ್ರಿ ಅವರು ರಾಜಕೀಯ ಪ್ರಗತಿಗಾಗಿ ತಮ್ಮ ದೇಶವಾಸಿಗಳ ಆಕಾಂಕ್ಷೆಗಳೊಂದಿಗೆ ಉತ್ಕಟವಾದ ಸಹಾನುಭೂತಿ ಹೊಂದಿದ್ದರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮುಂಚಿನ ಅಂಗವಾದ ಇಂಡಿಯನ್್ ಅಸೋಸಿಯೇಷನ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಅವರು ಸಂಯಮ ಮತ್ತು ಸಾಮಾಜಿಕ ಸುಧಾರಣೆಯ ಕಾರಣಕ್ಕಾಗಿ ಕಾರ್ಮಿಕರಲ್ಲಿ ಎದ್ದುಕಾಣುವ ಸ್ಥಾನವನ್ನು ಪಡೆದಿದ್ದರು. ಉಪಯುಕ್ತ ಚಟುವಟಿಕೆಯ ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷನೊಂದಿಗೆ ಸಹೋದ್ಯೋಗಿಯ ಸ್ಥಾನವನ್ನು ಮಹಿಳೆಯರಿಗೆ ಒದಗಿಸಲು ಶ್ರಮಿಸಿದರು.
ತಮ್ಮ ನಿರಂತರ ಚಟುವಟಿಕೆಗಳ ನಡುವೆಯೂ ಶಿವನಾಥ ಶಾಸ್ತ್ರಿ ಅವರು ಕವಿಯಾಗಿ ಬಂಗಾಳಿ ಸಾಹಿತ್ಯಕ್ಕೆ ಅಮೂಲ್ಯವಾದ ಸೇವೆಗಳನ್ನು ಸಲ್ಲಿಸಿದರು. ಅವರು ಬಂಗಾಳಿ ಗದ್ಯದ ಅತ್ಯುತ್ತಮ ಬರಹಗಾರರಲ್ಲಿ ಒಬ್ಬರು. ಅವರ ಕವನ ಸಂಕಲನ ಪೂಷಮಾಲಾ ಮತ್ತು ಪೂಷಾಂಜಲಿ ಹಾಗೂ ಅವರ ಕಾದಂಬರಿಗಳಾದ ಯುಗಾಂತರ್ ಮತ್ತು ನಯನತಾರಾ, ಅವರ ಆತ್ಮಚರಿತ್ರೆ ಮತ್ತು ಐತಿಹಾಸಿಕ ಮೇರುಕೃತಿ ರಾಮತಾನು ಲಾಹಿರಿ ಅಥವಾ ತತ್ಕಾಲೀನ ಬಂಗ ಸಮಾಜ ಮತ್ತು ಧಾರ್ಮಿಕ ಜೀವನ ವಿಧಾನದ ಧರ್ಮಜೀವನ ಪುಸ್ತಕಗಳನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸಬಹುದು. ಕೆಲವೊಮ್ಮೆ ಒಂದು ದೃಷ್ಟಿಯ ಸಮರ್ಥನೆ ಎನಿಸಿದರೂ ಅವರು ಪ್ರಾರಂಭದಿಂದ 1911 ರವರೆಗಿನ ಬ್ರಹ್ಮ ಸಮಾಜದ ಇತಿಹಾಸವನ್ನು ಬರೆದಿದ್ದಾರೆ.
ಶಿವನಾಥ ಅವರು ತಮ್ಮ ಬರವಣಿಗೆಗಳ ಮೂಲಕ ಸದಾಚಾರ ಮತ್ತು ಸತ್ಯದ ಸಾಕ್ಷಾತ್ಕಾರವನ್ನು ಪಡೆಯಲು ಪ್ರೋತ್ಸಾಹಿಸಿದರು. "ಇಂದ್ರಿಯವನ್ನು ಅದರ ಸಾವಿನ ನಿದ್ರೆಯಿಂದ ಎಬ್ಬಿಸಿ, ನಿರ್ಮಲತೆಯನ್ನು ಆಹ್ವಾನಿಸಿ, ಖಾಲಿ ಮತ್ತು ಅನುಪಯುಕ್ತ ನರಗಳನ್ನು ಸದ್ವಿನಿಯೋಗಿಸಿಕೊಂಡು ಜಯಗಳಿಸಿ" ಎಂಬುದು ಅವರ ಸಂದೇಶ.
ಶಿವನಾಥ ಶಾಸ್ತ್ರಿಯವರು 1919ರ ಸೆಪ್ಟೆಂಬರ್ 30 ರಂದು ನಿಧನರಾದರು.
On the birth anniversary of Sivanath Sastri, a great social reformer, writer, philoshoper and historian
ಕಾಮೆಂಟ್‌ಗಳು