ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ25


 ಜಯದೇವಕವಿಯ ಗೀತಗೋವಿಂದ

ಅಷ್ಟಪದಿ 24


*ಸಂಕ್ಷಿಪ್ತ ರೂಪ*


ಜಯದೇವನ ಅಷ್ಟಪದಿಗಳಲ್ಲಿ ಕೊನೆಯದಾದ ಈ ಭಾಗದಲ್ಲಿ ರಾಧೆಯು ಮಾಧವನೊಡನೆ ಕ್ರೀಡಿಸುತ್ತ ಆನಂದವನ್ನು ಹೊಂದಿದ ಅವನಿಗೆ ಹೀಗೆ ಹೇಳುವಳು.


 ನನ್ನ ಕುಚಕಲಶಗಳ ಮೇಲೆ ಮಂಗಳ ಚಿತ್ರಗಳನ್ನು ರಚಿಸು. ನಿನ್ನ ಶೀತಲಮಯವಾದ ಕರಗಳಿಂದ ಬೇಗನೇ ಮದನನ ಗುರುತುಗಳನ್ನು ರಚಿಸು.


ನನ್ನ ಕಣ್ಣುಗಳನ್ನು ಚುಂಬಿಸುವ ಭರದಲ್ಲಿ ಕಾಡಿಗೆಯನ್ನೆಲ್ಲ ಕಳೆದಿರುವೆ. ಇದನ್ನು ಅಂಜನದಿಂದ ಮತ್ತೆ ಸಿಂಗರಿಸು. ನಯನಗಳ ವಿಶಾಲತೆಯನ್ನು ತಡೆಯಲೆಂಬಂತೆ ಇರುವ ಪಾಶಗಳೋ ಎನ್ನುವಂತಿರುವ ಕುಂಡಲಗಳನ್ನು ತೊಡಿಸು.


ನನ್ನ ಮುಖ ಮಂಡಲದಲ್ಲಿ ಸದಾ ವಿಹರಿಸುವ ದುಂಬಿಗಳಂತೆ ನನ್ನ  ಮಂಗುರುಳನ್ನು ತೀಡಿ ಹೆರಳನ್ನು ಹಾಕು. ಮುಖಕಮಲದಲ್ಲಿ ಚಂದದ ಕಸ್ತೂರಿಯ ತಿಲಕವನ್ನಿಡು.


ಮದನನ ಧ್ವಜದಂತೆ ನವಿಲಿನ ಗರಿಯಂತೆ ಚಾಮರದಂತೆ ಇರುವ ನನ್ನಮುಡಿಗೆ ಸಿಂಗರದ ಹೂಗಳನ್ನು ಮುಡಿಸು. ಈ ನನ್ನ ಸರಸ ಸುಂದರ ಜಘನವನ್ನು ಮಣಿಮಯ ಒಡ್ಯಾಣಗಳಿಂದ ಅಲಂಕರಿಸು.


ಹೀಗೆ ರಾಧೆಯು ಹೇಳಲು ಅದರಂತೆಯೇ ಮಾಡಿದ ಮಾಧವನು ರಸಿಕರೆಲ್ಲರ ದೋಷಗಳನ್ನು ನಿವಾರಿಸುವನು. ಜಯದೇವ ಕವಿಯ ಈ ಸುಂದರ ವಚನಗಳಿಂದ ಸಹೃದರೆಲ್ಲರೂ ತಮ್ಮ ಹೃದಯಗಳನ್ನು ಸಿಂಗರಿಸಿಕೊಳ್ಳಲಿ.

( ಇಲ್ಲಿಗೆ ಹನ್ನೆರಡನೆಯ ಸರ್ಗ ಮುಗಿಯಿತು )

ಇಲ್ಲಿಗೆ ಗೀತಗೋವಿಂದ ಸುಸಂಪನ್ನವಾಯಿತು.

*ಶ್ರೀ ಕೃಷ್ಣಾರ್ಪಣಮಸ್ತು*



*ಪರಮೇಶ್ವರ ಭಟ್ಟರ ಕನ್ನಡ ರೂಪ*

ಅಷ್ಟಪದಿ ೨೪


ಕ್ರೀಡಿಸುತಿರೆಯಿರೆ ಹೃದಯಾನಂದನನಹ ಯದುನಂದನನಿಂತೆಂದಳು ರಾಧೆ 

ಮೃಗಮದ ಪತ್ರವನಂಗಜ ಮಂಗಳ ಕಲಶಸಹೋದರವೆನುವ ಪಯೋಧರದೆ 

ಓ ಯದುನಂದನ ವಿರಚಿಸು ಚಂದನ ಶೀತಳವೆನುವೀ ಕರದೊಳು ನೀ ಭರದೆ. 1


ವರರತಿನಾಯಕಸಾಯಕಗಳನೆಸೆವಕ್ಷಿಯ ಚುಂಬಿಸಿ ಕಾಡಿಗೆಯನು ಕಳೆದೆ ಸಿಂಗರಿಸಿದನಿಂದಳಿಕುಲ ಗಂಜನದಂಜನದಿಂದೆ ಮುರಾರಿಯೆ ನೀ ಮುದದೆ. 2


ನಯನಕುರಂಗತರಂಗವಿಕಾಸವ ತಡೆದಿರುವಂಗಜ ಪಾಶ ವಿಲಾಸವೆನೆ 

ಮೆರೆವೀ ಶ್ರುತಿಮಂಡಲದೊಳು ಕುಂಡಲಗಳನಿಡು ಸುಂದರರೂಪನೆ ಮಂಗಳನೆ. 3


ಮಾಧವ ಮನಸಮ್ಮುಖದೊಳು ಚಿರಮಿರುವಳಿಕುಲರುಚಿರವಿ ದೆನಲೆಸೆವಳಕವನು

ಕಮಲವನೇಳಿಪ ವಿಮಲಾನನದೊಳು ಸೈತಿರಿಸಿಲೆ ಹರಿ ಲೀಲಾಜನಕವನು. 4


ಹೇ ಕಮಲಾನನ ವಿಶ್ರಮಿತಶ್ರಮ ಶೀಕರನೊಪ್ಪುವ ಅಳಿಕ ಸುಧಾಕರದೆ 

ಮೆರೆವ ಕಳಂಕದ ಕಳೆಗಳನೇಳಿಪ ಚಂದದ ಕತ್ತುರಿ ತಿಲಕವನಿಡು ಭರದೆ. 5


ಕಾಮನ ಗುಡಿಯೆದುರಾಡುವ ಸೀಗುರಿ ತಾನಿದು ನವಿಲಿನ ಗರಿಯನು ಜಯಿಸಿತೆನೆ

ಸುಸಿಲೊಳು ಜಗುಳಿದ ಚಂದದೆ ಮೆರೆಯುವ ಮುಡಿಯೊಳು ಹೂಗಳ ನೀನಿಡು ಮಾನದನೆ.6


ಶಂಬರದಾರಣವಾರಣಕಂದರವೆನುವೀ ಮಮ ಸರಸಸುಘನ ಜಘನವನು ಮಣಿರಶನಾವಸನಾಭರಣಾದಿಗಳಿಂದೆ ಶುಭಾಶಯ ಸಿಂಗರಿಸಿಂದಿದನು. 7


ನಿರ್ಮಿತ ಕಲಿಕಲುಷಜ್ವರವನು ಖಂಡಿಸುವುದು ಹರಿಚರಣ ಸ್ಮರಣಾಮೃತವು 

ಶ್ರೀಜಯದೇವನ ಸುರುಚಿರವಚನದೆ ಸದಯದ ಹೃದಯವ ಸಿಂಗರಿಸಿರಿ ನೀವು. 8



*ಮೂಲಭಾಗ*

ಗೀತಂ_ ಅಷ್ಟಪದೀ_24_ ಸುಪ್ರೀತ ಪೀತಾಂಬರ ತಾಳಶ್ರೇಣಿಮ್

ರಾಮಕರೀರಾಗ, ಯತಿತಾಲ


ಕುರು ಯದುನಂದನ ಚಂದನಶಿಶಿರತರೇಣ ಕರೇಣ ಪಯೋಧರೇ

ಮೃಗಮದಪತ್ರಕಮತ್ರ ಮನೋಭವಮಂಗಲಕಲಶಸಹೋದರೇ

ನಿಜಗಾದ ಸಾ ಯದುನಂದನೇ ಕ್ರೀಡತಿ ಹೃದಯಾನಂದನೇ ||ಧ್ರುವಮ್|| ೧


ಅಲಿಕುಲಗಂಜನಮಂಜನಕಂ ರತಿನಾಯಕಸಾಯಕಮೋಚನೇ ತ್ವದಧರಚುಂಬನಲಂಬಿತಕಜ್ಜಲಮುಜ್ವಲಯ ಪ್ರಿಯಲೋಚನೇ  ೨


ನಯನಕುರಂಗತರಂಗವಿಕಾಸನಿರಾಸಕರೇ ಶ್ರುತಿಮಂಡಲೇ

ಮನಸಿಜಪಾಶವಿಲಾಸಧರೇ ಶುಭವೇಶ ನಿವೇಶಯ ಕುಂಡಲೇ  ೩


ಭ್ರಮರಚಯಂ ರಚಯಂತಮುಪರಿ ರುಚಿರಂ ಸುಚಿರಂ ಮಮ ಸಮ್ಮುಖೇ ಜಿತಕಮಲೇ ವಿಮಲೇ ಪರಿಕರ್ಮಯ ನರ್ಮಜನಕಮಲಕಂ ಮುಖೇ  ೪


ಮೃಗಮದರಸವಲಿತಂ ಲಲಿತಂ ಕುರು ತಿಲಕಮಲಿಕರಜನೀಕರೇ ವಿಹಿತಲಕಲಂಕಕಲಂ ಕಮಲಾನನೆ ವಿಶ್ರಮಿತಶ್ರಮಶೀಕರೇ  ೫


ಮಮ ರುಚಿರೇಚಿಕುರೇ ಕುರು ಮಾನದ ಮನಸಿಜಧ್ವಜಚಾಮರೇ 

ರತಿಗಲಿತೇ ಲಲಿತೇ ಕುಸುಮಾನಿ ಶಿಖಂಡಿಶಿಖಂಡಕಡಾಮರೇ  ೬


ಸರಸಘನೇ ಜಘನೇ ಮಮ ಶಂಬರದಾರಣವಾರಣಕಂದರೇ ಮಣಿರಶನಾವಸನಾಭರಣಾನಿ ಶುಭಾಶಯ ವಾಸಯ ಸುಂದರೇ  ೭


ಶ್ರೀಜಯದೇವವಚಸಿ ರುಚಿರೇ ಹೃದಯಂ ಸದಯಂ ಕುರುಮಂಡನೇ ಹರಿಚರಣಸ್ಮರಣಾಮೃತನಿರ್ಮಿತಕಲಿಕಲುಷಜ್ವರಖಂಡನೇ  ೮


ರಚಯ ಕುಚಯೋಃ ಪತ್ರಂ ಚಿತ್ರಂ ಕುರುಷ್ವ ಕಪೋಲಯೂ_

ರ್ಘಟಯ ಜಘನೇ ಕಾಂಚೀಂ ಮುಗ್ಧಸ್ರಜಾ ಕಬರೀಭರಂ

ಕಲಯ ವಲಯಶ್ರೇಣೀಂ ಪಾಣೌ ಪದೇ ಮಣಿನೂಪುರಾ_

ಮಿತಿ ನಿಗದಿತಃ ಪ್ರೀತಃ ಪೀತಾಂಬರೋsಪಿ ಕಥಾತರೋತ್  ೯


ಯದ್ಗಾಂಧರ್ವಕಲಾಸು ಕೌಶಲಮನುಧ್ಯಾನಂ ಚ ಯದ್ವೈಷ್ಣವಂ ಯಚ್ಛೃಂಗಾರವಿವೇಕತತ್ತ್ವರಚನಾಕಾವ್ಯೇಷು ಲೀಲಾಯತಂ

ತತ್ಸರ್ವಂ ಜಯದೇವಪಂಡಿತಕವೇಃ ಕೃಷ್ಣೈಕತಾನಾತ್ಮನಃ

ಸಾನಂದಾಃ ಪರಿಶೋಧಯಂತು ಸುಧಿಯಃ ಶ್ರೀಗೀತಗೋವಿಂದಃ  ೧೦


ಶ್ರೀ ಭೋಜದೇವಪ್ರಭವಸ್ಯ ರಾಮಾದೇವೀಸುತ ಶ್ರೀಜಯದೇವಕಸ್ಯ ಪರಾಶರಾದಿಪ್ರಿಯವರ್ಗಕಂಠೇ ಶ್ರೀಗೀತಗೋವಿಂದಕವಿತ್ವಮಸ್ತು  ೧೧


ಸಾಧ್ವೀ ಮಾಧ್ವೀಕ ಚಿಂತಾ ನ ಭವತಿ ಭವತಃ ಶರ್ಕರೇ ಕರ್ಕಶಾsಸಿ

ದ್ರಾಕ್ಷೇ ದ್ರಕ್ಷ್ಯಂತಿ ಕೇ ತ್ವಾಮಮೃತ ಮೃತಮಸಿ ಕ್ಷೀರ ನೀರಂ ರಸಸ್ತೇ

ಮಾಕಂದ ಕ್ರಂದ ಕಾಂತಾಧರ ಧರ ನತುಲಾಂಗಚ್ಛ ಯಚ್ಛಂತಿ ಭಾವಂ ಯಾವಚ್ಛೃಂಗಾರಸಾರಂ ಶುಭಮಿವ ಜಯದೇವಸ್ಯ ವೈದಗ್ಧ್ಯವಾಚಃ  ೧೨


ಇತ್ಥಂ ಕೇಲಿತತೀರ್ವಿಹೃತ್ಯ ಯಮುನಾಕೂಲೇ ಸಮಂ ರಾಧಯಾ ತದ್ರೋ ಮಾವಲಿಮೌಕ್ತಿಕಾವಲಿಯುಗೇ ವೇಣೀಭ್ರಮಂ ಬಿಭ್ರತಿ

ತತ್ರಾಹ್ಲಾದಿಕುಚಪ್ರಯಾಗಫಲಯೋರ್ಲಿಪ್ಸಾವತೋರ್ಹಸ್ತಯೋ_

ರ್ವ್ಯಾಪಾರಾಃ ಪುರುಷೋತ್ತಮಸ್ಯ ದದತು ಸ್ವೀತಾಂ ಮುದಾಂ ಸಂಪದಂ  ೧೩


|| ಇತಿ ಶ್ರೀ ಜಯದೇವಕೃತೌ ಶ್ರೀಗೀತಗೋವಿಂದೇ ಮಹಾಕಾವ್ಯೇ ಸುಪ್ರೀತ ಪೀತಾಂಬರೋನಾಮ ದ್ವಾದಶ ಸರ್ಗಃ ||


|| ಗೀತಗೋವಿಂದ ಮಹಾಕಾವ್ಯಮ್ ಸಂಪೂರ್ಣಂ ||


ಕೃತಜ್ಞತೆ:

1. ಮೂಲ: ಜಯದೇವ ಕವಿಯ 'ಗೀತಗೋವಿಂದ'

 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ

3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar


(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ