ರೋಶನ್ ಸೇಠ್
ರೋಶನ್ ಸೇಠ್
ರೋಶನ್ ಸೇಠ್ ಪ್ರಸಿದ್ಧ ನಟ, ಬರಹಗಾರ ಮತ್ತು ರಂಗಭೂಮಿ ನಿರ್ದೇಶಕರಾಗಿದ್ದು, ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕದಲ್ಲಿ ಕೆಲಸ ಮಾಡಿದ್ದಾರೆ.
ಸೇಠ್ 1942 ಏಪ್ರಿಲ್ 2ರಂದು ಪಾಟ್ನಾದಲ್ಲಿ ಜನಿಸಿದರು. ಅವರ ತಂದೆ ಪಾಟ್ನಾ ವೈದ್ಯಕೀಯ ಕಾಲೇಜಿನಲ್ಲಿ ಬಯೋಕೆಮಿಸ್ಟ್ರಿ ಪ್ರಾಧ್ಯಾಪಕರಾಗಿದ್ದರು. ಸೇಠ್ ಡೂನ್ ಶಾಲೆಯಲ್ಲಿ ಶಿಕ್ಷಣ ಪಡೆದು, ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿ ಅಧ್ಯಯನ ಮಾಡಿದರು. ಹೆಚ್ಚಿನ ತರಬೇತಿಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಷೇಕ್ಸ್‌ಪಿಯರ್ ಸೊಸೈಟಿಯಲ್ಲಿ ತಮ್ಮ ನಾಟಕೀಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡರು. 1965 ರಲ್ಲಿ ಲಂಡನ್ ಅಕಾಡೆಮಿ ಆಫ್ ಮ್ಯೂಸಿಕ್ ಮತ್ತು ಡ್ರಾಮಾಟಿಕ್ ಆರ್ಟ್‌ನಲ್ಲಿ ತರಬೇತಿ ಪಡೆದು ಬ್ರಿಟಿಷ್ ದೂರದರ್ಶನ ಮತ್ತು ರೆಪರ್ಟರಿ ಥಿಯೇಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ರೋಶನ್ ಸೇಠ್ ಮೊದಲ ಬಾರಿಗೆ ಪೀಟರ್ ಬ್ರೂಕ್ ನಿರ್ಮಾಣದ ‘ಎ ಮಿಡ್ಸಮ್ಮರ್ ನೈಟ್ಸ್ ಡ್ರೀಮ್’ನಲ್ಲಿ ಕಾಣಿಸಿಕೊಂಡರು, ಇದು 1972ರಲ್ಲಿ ಎಲ್ಲೆಡೆ ಪ್ರವಾಸ ಮಾಡಿತು. ಸೇಠ್ ರಿಚರ್ಡ್ ಲೆಸ್ಟರ್ ಅವರ 'ಜಗ್ಗರ್ನಾಟ್' (1974) ಮೂಲಕ ಚಲನಚಿತ್ರಗಳನ್ನು ಪ್ರವೇಶಿಸಿದರು. ನಂತರದ ಚಲನಚಿತ್ರ ನಿರ್ಮಾಪಕರು ಸೇಥ್ ಅವರನ್ನು ಸೀಮಿತ ರೀತಿಯ ಪಾತ್ರಗಳಿಗೆ ಮಾತ್ರ ಬಯಸಿದ ಕಾರಣ ಅವರ ವೃತ್ತಿಜೀವನವು ಸ್ಥಗಿತಗೊಂಡಿತು. ನಿರುತ್ಸಾಹಗೊಂಡ ಸೇಠ್ ನಟನೆಯನ್ನು ತ್ಯಜಿಸಿ 1977ರಲ್ಲಿ ಭಾರತಕ್ಕೆ ಮರಳಿದರು. ಪತ್ರಕರ್ತರಾಗಿ ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ಪ್ರಕಟಿಸುತ್ತಿದ್ದ ತ್ರೈಮಾಸಿಕ ಜರ್ನಲ್‌ನ ಸಂಪಾದಕರಾಗಿ ಕೆಲಸ ಮಾಡತೊಡಗಿದರು.
ರಿಚರ್ಡ್ ಅಟೆನ್‌ಬರೋ ಅವರು 'ಗಾಂಧಿ' (1982) ಚಿತ್ರದಲ್ಲಿ ಜವಾಹರಲಾಲ್ ನೆಹರೂ ಪಾತ್ರದಲ್ಲಿ ನಟಿಸಲು ಸೇಠ್ ಅವರನ್ನು ಕೇಳಿಕೊಂಡಾಗ ತಮ್ಮ ಕೆಲಸದಿಂದ ರಜೆ ಪಡೆದು ಅಭಿನಯಕ್ಕೆ ಬಂದರು. ಸೇಠ್ ಆ ಚಿತ್ರದಲ್ಲಿನ ಅಭಿನಯಕ್ಕಾಗಿ BAFTA ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಸೇಠ್ ನಂತರ 1988ರಲ್ಲಿ ದೂರದರ್ಶನದಲ್ಲಿ 53 ಕಂತುಗಳ ಸರಣಿಯಾದ ಭಾರತ್ ಏಕ್ ಖೋಜ್‌ನಲ್ಲಿ ಸಹಾ ಜವಾಹರಲಾಲ್ ನೆಹರೂ ಪಾತ್ರವನ್ನು ನಿರ್ವಹಿಸಿದರು.
ಮುಂದೆ ರೋಶನ್ ಸೇಠ್ ಹಲವಾರು ಪ್ರಸಿದ್ಧ ಬ್ರಿಟಿಷ್ ಮತ್ತು ಅಮೇರಿಕನ್ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಇಂಡಿಯಾನಾ ಜೋನ್ಸ್ ಮತ್ತು ಟೆಂಪಲ್ ಆಫ್ ಡೂಮ್‌ನಲ್ಲಿ ಚತ್ತರ್ ಲಾಲ್, ಎ ಪ್ಯಾಸೇಜ್ ಟು ಇಂಡಿಯಾದಲ್ಲಿ ಅಮಿತ್ ರಾವ್, ಮೈ ಬ್ಯೂಟಿಫುಲ್ ಲಾಂಡ್ರೆಟ್‌ನಲ್ಲಿ ಪಾಪಾ ಹುಸೇನ್, ಮಿಸ್ಸಿಸ್ಸಿಪ್ಪಿ ಮಸಾಲಾದಲ್ಲಿ ಪಿತೃಪ್ರಧಾನ ಜೇ, ಸ್ಟ್ರೀಟ್ ಫೈಟರ್: ದಿ ಮೂವಿಯಲ್ಲಿ ಧಲ್ಸಿಮ್ ಹೀಗೆ ಅನೇಕ ಪಾತ್ರಗಳಲ್ಲಿ ಮಿಂಚಿದರು. ಕೆನಡಾದ ಚಲನಚಿತ್ರ ಸಚ್ ಎ ಲಾಂಗ್ ಜರ್ನಿಗಾಗಿ ಅವರು ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ಜಿನೀ ಪ್ರಶಸ್ತಿಯನ್ನು ಗೆದ್ದರು. ಅವರು ಕಾಣಿಸಿಕೊಂಡ ಇತರ ಯೋಜನೆಗಳೆಂದರೆ ನಾಟ್ ವಿಥೌಟ್ ಮೈ ಡಾಟರ್, ದಿ ಬುದ್ಧ ಆಫ್ ಸಬರ್ಬಿಯಾ, ವರ್ಟಿಕಲ್ ಲಿಮಿಟ್, ಮಾನ್ಸೂನ್ ವೆಡ್ಡಿಂಗ್, ಪ್ರೂಫ್, ಏಕ್ ಥಾ ಟೈಗರ್, ಇಂಡಿಯನ್ ಸಮ್ಮರ್ಸ್ ಮತ್ತು ಡಂಬೋ. 2003 ರಲ್ಲಿ ಅವರು ಅಮೇರಿಕನ್ ಚಲನಚಿತ್ರ ಕಾಸ್ಮೋಪಾಲಿಟನ್ ನಲ್ಲಿ ನಾಯಕನಾಗಿ ನಟಿಸಿದರು, ಇದು PBS ನಲ್ಲಿ ರಾಷ್ಟ್ರೀಯವಾಗಿ ಪ್ರಸಾರವಾಯಿತು. 2012ರಲ್ಲಿ ಭಾರತೀಯ ಚಲನಚಿತ್ರ 'ಏಕ್ ಥಾ ಟೈಗರ್'ನಲ್ಲಿಯೂ ಕಾಣಿಸಿಕೊಂಡಿದ್ದರು.
ರೋಶನ್ ಸೇಠ್ ಈಗಲೂ ನಟರಾಗಿ ಸಕ್ರಿಯರಾಗಿದ್ದಾರೆ.
On the birthday of actor Roshan Seth
ಕಾಮೆಂಟ್‌ಗಳು